ಸಿದ್ದರಾಮಯ್ಯ ಕೈಗೆ ಗಾಯ 
ರಾಜ್ಯ

Vidhana Soudha: ಕಡತ ಪರಿಶೀಲನೆ ವೇಳೆ ಸಿಎಂ ಸಿದ್ದರಾಮಯ್ಯ ಕೈಗೆ ಗಾಯ!

ಕಚೇರಿಯಲ್ಲಿ ಅರ್ಜಿಗಳ ಪರೀಶೀಲನೆಯಲ್ಲಿ ತೊಡಗಿರುವಾಗ ಅರ್ಜಿಯಲ್ಲಿದ್ದ ಗುಂಡು ಸೂಜಿ ಸಿದ್ದರಾಮಯ್ಯ ಅವರ ಕೈಗೆ ಚುಚ್ಚಿದೆ. ಇದರಿಂದ ಅವರ ಕೈಗೆ ಗಾಯವಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು: ವಿಧಾನಸೌಧದಲ್ಲಿ ಅರ್ಜಿ ಪರಿಶೀಲನೆ ಮಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ವಿಧಾನಸೌಧದ ಕೊಠಡಿಯಲ್ಲಿ ಸಿಎಂ ಸಿದ್ದರಾಮಯ್ಯ ಕೈಗೆ ಗುಂಡು ಸೂಚಿ ಚುಚ್ಚಿದ್ದು, ಇದನ್ನು ಕಂಡ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ನಂತರ ಸಿಎಂ ಕೈಗೆ ಔಷಧಿ ಹಚ್ಚಿದ್ದಾರೆ.

ಮೂಲಗಳ ಪ್ರಕಾರ ಕಚೇರಿಯಲ್ಲಿ ಅರ್ಜಿಗಳ ಪರೀಶೀಲನೆಯಲ್ಲಿ ತೊಡಗಿರುವಾಗ ಅರ್ಜಿಯಲ್ಲಿದ್ದ ಗುಂಡು ಸೂಜಿ ಸಿದ್ದರಾಮಯ್ಯ ಅವರ ಕೈಗೆ ಚುಚ್ಚಿದೆ. ಇದರಿಂದ ಅವರ ಕೈಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಮೊದಲು ಗಾಯದ ಬಗ್ಗೆ ಮಾಹಿತಿ ಇಲ್ಲದೇ ಅಧಿಕಾರಿಗಳು, ವೈದ್ಯರು ಶಾಕ್ ಆಗಿ ಸಿಎಂ ಸಿದ್ದರಾಮಯ್ಯಗೆ ಚಿಕಿತ್ಸೆ ನೀಡಲು ಧಾವಿಸಿದ್ದರು. ಆದರೆ ಕೊನೆಗೆ ಇದು ಗುಂಡು ಪಿನ್ನು ಚುಚ್ಚಿದ ಗಾಯ ಎಂಬುದು ತಿಳಿದು ಬಂದಿದೆ.

ವಿಧಾನಸೌಧದ (Vidhansoudha) ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮ ಬರುತ್ತಿರುವ ವೇಳೆ ಗುಂಡು ಸೂಜಿ ಚುಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಬೆರಳಿಗೆ ಸಿದ್ದರಾಮಯ್ಯ ತಪಾಸಣೆ ಮಾಡಿದ ವೈದ್ಯರು ಪ್ರಥಮ ಚಿಕಿತ್ಸೆ​ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT