ಮೈಸೂರು: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಸ್ನಿಂದ ಬಿದ್ದು ಸಾವು
ಮೃತ ವಿದ್ಯಾರ್ಥಿಯನ್ನು ದೀನಾ ದಯಾಳ್(21) ಎಂದು ಗುರುತಿಸಲಾಗಿದ್ದು, ಬೈಲಕುಪ್ಪೆ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವಾಗ ಈ ಅವಘಡ ಸಂಭವಿಸಿದೆ.
ಮೈಸೂರು: ಪ್ರವಾಸಕ್ಕೆ ಬಂದಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿ ಬಸ್ನಿಂದ ಬಿದ್ದು ಸಾವನ್ನಪ್ಪಿರುವಂತಹ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿ ಶನಿವಾರ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ದೀನಾ ದಯಾಳ್(21) ಎಂದು ಗುರುತಿಸಲಾಗಿದ್ದು, ಬೈಲಕುಪ್ಪೆ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವಾಗ ಈ ಅವಘಡ ಸಂಭವಿಸಿದೆ.
ಬಸ್ ಡೋರ್ ಲಾಕ್ ಆಗದ ಹಿನ್ನೆಲೆ ವಿದ್ಯಾರ್ಥಿ ಕೆಳಗೆ ಬಿದಿದ್ದು, ಈ ವೇಳೆ ರಸ್ತೆಯ ಪಕ್ಕದಲ್ಲಿದ್ದ ಲೈಟ್ ಕಂಬಕ್ಕೆ ತಾಗಿ ಬಲವಾದ ಪೆಟ್ಟು ಬಿದ್ದು ದೀನಾ ದಯಾಳ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.