ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ಮಾರ್ಗದಲ್ಲಿರುವ ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ನಿಲ್ದಾಣಕ್ಕೆ ಬಾಗ್ಮನೆ ಹೆಸರು ನಾಮಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ರೂ. 40 ಕೋಟಿಯನ್ನು ಬಿಎಂಆರ್ ಸಿಎಲ್ ಗೆ ಪಾವತಿಸಿದೆ.
ಇದು 20 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಈ ಸಂಬಂಧ ಮಂಗಳವಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮತ್ತು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸೀತಾರಾಮಪಾಳ್ಯ, ಬೆಳ್ಳಂದೂರು, ಮತ್ತು ಇಸ್ರೋ ಮೆಟ್ರೋ ನಿಲ್ದಾಣಗಳಲ್ಲಿನ ಕಾನ್‌ಕೋರ್ಸ್ ಮಟ್ಟದಿಂದ ತಮ್ಮ ಕ್ಯಾಂಪಸ್‌ಗೆ ಸಂಪರ್ಕವನ್ನು ಒದಗಿಸಲು 30 ವರ್ಷಗಳ ಅವಧಿಗೆ ಪ್ರತಿನಿಲ್ದಾಣಕ್ಕೆ ರೂ. 10 ಕೋಟಿಯನ್ನು ಬಿ.ಎಂ.ಆರ್.ಸಿ.ಎಲ್ ಗೆ ನೀಡಲಿದೆ. ಅದರಲ್ಲಿ ರೂ 10 ಕೋಟಿ ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ ಎಂದು ಮಾಹಿತಿ ನೀಡಿದೆ.
ಸದರಿ ಒಪಂದಗಳನ್ನು ಕರ್ನಾಟಕ ಸರ್ಕಾರದಿಂದ ಅನುಮೋದನೆ ಪಡೆದ ನಂತರ ನಿಲ್ದಾಣದ ನಾಮಕರಣ ಹಾಗೂ ಸಂಪರ್ಕವನ್ನು ಕಲ್ಪಿಸಲಾಗುವುದು. ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಬಿಎಂಆರ್‌ಸಿಎಲ್ ಮೆಟ್ರೋ ಯೋಜನೆಗೆ ನವೀನ ಹಣಕಾಸು ಕಾರ್ಯವಿಧಾನದ ಮೂಲಕ ಹಣಕಾಸು ಒದಗಿಸುತ್ತದೆ. ಈ ಹೊಸ ನೀಲಿ ಮಾರ್ಗವು 17.00 ಕಿ.ಮೀ (ಒ.ಆರ್.ಆರ್ ಮಾರ್ಗ) ಉದ್ದವಿದ್ದು 13 ನಿಲ್ದಾಣಗಳನ್ನು ಹೊಂದಿದೆ. ಇದು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು, ಐಟಿ ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಪ್ರಯಾಣಿಸಲು ಉತ್ತಮ ಮಾರ್ಗವಾಗಲಿದೆ. ಈ ಮೂಲಕ ಒ.ಆರ್.ಆರ್ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಈ ಬಾಗ್ಮನೆ ಟೆಕ್‌ಪಾರ್ಕ್ ಒಪ್ಪಂದವು ನೀಲಿ ಮಾರ್ಗದಲ್ಲಿ ಮಾಡಿಕೊಂಡ 3ನೇ ತಿಳುವಳಿಕೆಯ ಒಪ್ಪಂದವಾಗಿದೆ ಎಂದು ಎಂದು ಬಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.