ವಾಹನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದು. 
ರಾಜ್ಯ

ನೈಸ್ ರಸ್ತೆ ಪ್ರವೇಶಕ್ಕೆ ಪೊಲೀಸರ ನಕಾರ: ಸಿಟ್ಟಿಗೆದ್ದು ರಸ್ತೆಗೆ ಅಡ್ಡಲಾಗಿ ಕಂಟೇನರ್ ನಿಲ್ಲಿಸಿ ಚಾಲಕ ಪರಾರಿ; ಗಂಟೆಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತ

ನೈಸ್ ರಸ್ತೆಯಲ್ಲಿ ಸಂಜೆ 4.30ರಿಂದ ರಾತ್ರಿ 8ರವರೆಗೆ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ, ಇದನ್ನು ಲೆಕ್ಕಿಸದೆ ನಾಗಾಲ್ಯಾಂಡ್ ನೋಂದಣಿ ಹೊಂದಿದ್ದ 16 ಚಕ್ರಗಳುಳ್ಳ ಟ್ರಕ್ ನಗರ ಪ್ರವೇಶಿಸಿತ್ತು.

ಬೆಂಗಳೂರು: ಪೊಲೀಸರ ಮೇಲೆ ಸಿಟ್ಟಿಗೆದ್ದ ಟ್ರಕ್ ಚಾಲಕನೊಬ್ಬ ಭಾರೀ ವಾಹನವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಪರಾರಿಯಾದ ಪರಿಣಾಮ ನೈಸ್-ಹೊಸೂರು ರಸ್ತೆಯ ವೈಟ್ ಫೆದರ್ ಕನ್ವೆನ್ಷನ್ ಸೆಂಟರ್ ಬಳಿ ಗಂಟೆಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ಬುಧವಾರ ನಡೆಯಿತು.

ನೈಸ್ ರಸ್ತೆಯಲ್ಲಿ ಸಂಜೆ 4.30ರಿಂದ ರಾತ್ರಿ 8ರವರೆಗೆ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ, ಇದನ್ನು ಲೆಕ್ಕಿಸದೆ ನಾಗಾಲ್ಯಾಂಡ್ ನೋಂದಣಿ ಹೊಂದಿದ್ದ 16 ಚಕ್ರಗಳುಳ್ಳ ಟ್ರಕ್ ನಗರ ಪ್ರವೇಶಿಸಿತ್ತು. ಈ ವೇಳೆ ವಾಹನವನ್ನು ಪೊಲೀಸರು ತಡೆದಿದ್ದು, ಚಾಲಕನ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಚಾಲಕ ಮಾತಿನ ಚಕಮಕಿ ನಡೆಸಿದ್ದಾನೆ.

ಬಳಿಕ ಸಿಟ್ಟಿಗೆದ್ದು ಟ್ರಕ್ ನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಕೀಲಿಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಇದರಿಂದ ಸ್ಥಳದಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿತ್ತು. ಬಳಿಕ ಪೊಲೀಸರು ಟ್ರಕ್ ನ್ನು ಬದಿಗೆ ಸರಿಸಲು ಹರಸಾಹಸ ಪಡಬೇಕಾಯಿತು.

ನಂತರ ಇತರೆ ಟ್ರಕ್ ಚಾಲಕರು ಪೊಲೀಸರು ನೆರವಿಗೆ ಧಾವಿಸಿದ್ದು, ತಮ್ಮ ತಮ್ಮ ಟ್ರಕ್ ಕೀಗಳನ್ನು ನೀಡಿ, ವಾಹನವನ್ನು ಬದಿಗೆ ಸರಿಸಲು ಸಹಕರಿಸಿದ್ದಾರೆ. ಚಾಲಕ ಮರಳಿ ಬಾರದ ಕಾರಣ ಸಂಚಾರ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸಿದ್ದಾರೆ.

ಟ್ರಕ್ ಚಾಲಕನಿಗೆ ಪೊಲೀಸರು 2,000 ರೂ. ದಂಡ ವಿಧಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ವಾಹನವನ್ನು ಅಡ್ಡಾದಿಡ್ಡಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಬುಧವಾರ ರಾತ್ರಿ 8 ಗಂಟೆಗೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ನಡುವೆ ಚಾಲಕನ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಇತರೆ ಚಾಲಕರು ರಸ್ತೆ ನಡೆಸಿ, ಪ್ರತಿಭಟನೆ ನಡೆಸಿದ್ದರು. ಇದರಿಂದ ಸಂಚಾರ ದಟ್ಟಣೆ ಎದುರಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಪಿ (ಸಂಚಾರ ದಕ್ಷಿಣ) ಶಿವಪ್ರಕಾಶ್ ದೇವರಾಜು ಅವರು, ಚಾಲಕನಿಗೆ ಪೊಲೀಸರು ಥಳಿಸಿಲ್ಲ. ಬಾಡಿ ಕ್ಯಾಮೆರಾದಲ್ಲಿ ಎಲ್ಲವೂ ದಾಖಲಾಗಿದೆ. ಚಾಲಕರಾರೂ ಪ್ರತಿಭಟನೆ ನಡೆಸಿಲ್ಲ. ಆರೋಪಿ ಚಾಲಕ ಇನ್ನು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಇದೀಗ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

T20 World Cup 2026: ಬ್ರೂಕ್ ಭರ್ಜರಿ ಶತಕ; ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್​

ಪ್ರಧಾನಿ ಮೋದಿ ಇಸ್ರೇಲ್ ಭೇಟಿಗೂ: ಇಸ್ಲಾಮಿಕ್ ಉಗ್ರವಾದದ ವಿರುದ್ಧ ಷಡ್ಭುಜ ಕೂಟ ಘೋಷಿಸಿದ ನೆತನ್ಯಾಹು!

ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿಕೆ ಶಶಿಕಲಾರಿಂದ ಹೊಸ ಪಕ್ಷ ಸ್ಥಾಪನೆ; ರಾಮನಾಥಪುರಂನಲ್ಲಿ ಧ್ವಜ ಅನಾವರಣ

SCROLL FOR NEXT