ಬೆಂಗಳೂರು: ನಗರದಲ್ಲಿನ ಜಲಮೂಲಗಳು ಕಲುಷಿತಗೊಳ್ಳುತ್ತಿರುವುದಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯನ್ನು ದೂಷಿಸಿ ಎಂದು ಬಿಬಿಎಂಪಿ ಹೇಳಿದೆ.
2024-2025ನೇ ಹಣಕಾಸು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳ ವೈಟ್‌ಟಾಪ್ ಮತ್ತು ಫುಟ್‌ಪಾತ್‌ಗಳು ಮತ್ತು ಮಳೆನೀರು ಚರಂಡಿಗಳ ಸುಧಾರಣೆಗೆ ರಾಜ್ಯ ಸರ್ಕಾರ 1,200 ಕೋಟಿ ರೂಪಾಯಿಗಳ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಆದರೂ, ನೀರು ಸೋರುವಿಕೆ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಸೋರಿಕೆಯಾಗುವ ಪೈಪ್‌ಗಳನ್ನು ಸರಿಪಡಿಸದಿದ್ದರೆ, ತ್ಯಾಜ್ಯ ನೀರು ಮತ್ತು ಒಳಚರಂಡಿಯನ್ನು ರಸ್ತೆಗಳು ಮತ್ತು ಬಿಬಿಎಂಪಿ ಚರಂಡಿಗಳಿಗೆ ಬಿಡುವುದನ್ನು ನಿಲ್ಲಿಸದ ಹೊರತು ಪಾಲಿಕೆಯ ಪ್ರಯತ್ನಗಳು ಯಾವಾಗಲೂ ವಿಫಲವಾಗಿಯೇ ಉಳಿಯುತ್ತವೆ ಎಂದು ಪಾಲಿಕೆ ಉನ್ನತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
“ರಸ್ತೆಗಳು ವೈಟ್ ಟಾಪಿಂಗ್ ಅಥವಾ ಡಾಂಬರು, ಯಾವುದೇ ಸೋರುವಿಕೆಯಿಂದ ಮುಕ್ತವಾಗಿರಬೇಕು. ಅಲ್ಲಿ ನೀರು ನಿಲ್ಲಬಾರದು. ಅದೇ ರೀತಿ, ಚರಂಡಿಗಳಲ್ಲಿ ಮಳೆನೀರು ಹರಿಯುವ, ತ್ಯಾಜ್ಯ ನೀರು ಹರಿಯಲು ಉತ್ತಮ ವ್ಯವಸ್ಥೆ ಇರಬೇಕು. ವೈಟ್ ಟಾಪಿಂಗ್ ರಸ್ತೆಗಳು ನೀರನ್ನು ಹೀರಿಕೊಳ್ಳುವುದಿಲ್ಲ ಎಂಬ ಗ್ರಹಿಕೆಗಳು ತಪ್ಪು. ಮಳೆ ನೀರು ಚರಂಡಿಗಳಲ್ಲಿ ಹರಿದು ಅದು ಕೆರೆಗೆ ಹೋಗದಂತೆ ಮಾಡಲು ಕ್ರಮಗಳ ಕೈಗೊಳ್ಳಬೇಕಿದೆ ಎಂದು ಬಿಬಿಎಂಪಿಯ ಹಿರಿಯ ಎಂಜಿನಿಯರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ BBMP ವ್ಯಾಪ್ತಿಯಲ್ಲಿರುವ 210 ಕೆರೆಗಳಲ್ಲಿ, ಯಾವುದೇ ಕೆರೆಗಳು B ಅಥವಾ C ವರ್ಗಗಳ ಅಡಿಯಲ್ಲಿ ಬರುವುದಿಲ್ಲ. ಈ ಎಲ್ಲಾ ಕೆರೆಗಳ ವಿಭಾಗಗಳು D ಮತ್ತು E ಅಡಿಯಲ್ಲಿವೆ. ಅಂದರೆ ಕೊಳಚೆ ನೀರು ಕೆರೆಗಳಿಗೆ ಸೇರುತ್ತಿದ್ದು, ಕೆರೆಗಳು ಬರಿದಾಗುತ್ತಿವೆ ಎಂದು ಹೇಳಿದೆ.
ಚರಂಡಿಗಳು ಹಾಗೂ ಕೆರೆಗಳ ಸಂರಕ್ಷಣೆ ಬಿಬಿಎಂಪಿಯ ಜವಾಬ್ದಾರಿಯಾಗಿದೆ. ಆದರೆ, ಕೆರೆಗಳು ಕಲುಷಿತವಾಗಲು BWSSB ಕಾರಣವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಭೂಗತ ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕಗಳಿದ್ದರೂ ಕೊಳಚೆ ನೀರನ್ನು ಮಳೆನೀರು ಚರಂಡಿಗಳ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದೆ. ಸರ್ಕಾರವು ಇದಕ್ಕೆ ಬಿಡಬ್ಲ್ಯುಎಸ್‌ಎಸ್‌ಬಿಯನ್ನು ಹೊಣೆಗಾರರನ್ನಾಗಿ ಮಾಡಬೇಕು, ”ಎಂದು ಫ್ರೆಂಡ್ಸ್ ಆಫ್ ಲೇಕ್ಸ್‌ನ ಸಂಚಾಲಕ ರಾಮ್ ಪ್ರಸಾದ್ ಹೇಳಿದ್ದಾರೆ.