ರಾಜ್ಯ

ಪುಸ್ತಕ ಬಿಡುಗಡೆ: ಸಾವಣ್ಣ ಪ್ರಕಾಶನದಿಂದ 'ಸಿರಿವಂತಿಕೆಗೆ ಸರಳ ಸೂತ್ರಗಳು' ಸೇರಿ 5 ಪುಸ್ತಕ ಲೋಕಾರ್ಪಣೆ

Srinivasamurthy VN

ಬೆಂಗಳೂರು: ಫೆಬ್ರವರಿ 11, ಭಾನುವಾರ ಸಾವಣ್ಣ ಪ್ರಕಾಶನದಿಂದ 5 ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.

ಸಾವಣ್ಣ ಪ್ರಕಾಶನದ (Sawanna Prakashana) ವತಿಯಿಂದ ನಾಳೆ ಐದು ಪ್ರಮುಖ ಪುಸ್ತಕಗಳು ಬಿಡುಗಡೆಯಾಗುತ್ತಿದ್ದು, ಕನ್ನಡ ಪ್ರಭ ಆನ್ ಲೈನ್ ನ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ ಸೇರಿದಂತೆ ಒಟ್ಟು 5 ಕೃತಿಗಳು ನಾಳೆ ಲೋಕಾರ್ಪಣೆಯಾಗುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಾಳೆ ಅಂದರೆ ಫೆ.11ರಂದು ಬೆಳಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

'ಪುಸ್ತಕ ಪ್ರಪಂಚ' ಸಮಾರಂಭದಲ್ಲಿ ಸಾವಣ್ಣ ಪ್ರಕಾಶನದ ಈ 5 ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಲೇಖಕರೊಡನೆ ವಿಶೇಷ ಸಂವಾದವನ್ನು‌ ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಅಂಕಣಕಾರರು, ಸ್ಟಾರ್ಟಪ್ ಮಾರ್ಗದರ್ಶಕರಾದ ಎನ್. ರವಿಶಂಕರ್ ಅವರು ನಡೆಸಿಕೊಡಲಿದ್ದಾರೆ. ರಂಜನೀ ಕೀರ್ತಿ ಅವರು ನಿರೂಪಣೆ ಮಾಡಲಿದ್ದಾರೆ. ಬೆಳಗ್ಗೆ 9:30 ಗಂಟೆಗೆ ಉಪಾಹಾರ ವ್ಯವಸ್ಥೆಯೂ ಇರುತ್ತದೆ.

ಬಿಡುಗಡೆಯಾಗುವ ಪುಸ್ತಕಗಳು
ರಂಗಸ್ವಾಮಿ ಮೂಕನಹಳ್ಳಿ ಅವರ 'ಸಿರಿವಂತಿಕೆಗೆ ಸರಳ ಸೂತ್ರಗಳು'
ಡಾ. ನಾ. ಸೋಮೇಶ್ವರ ಅವರ 'ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?'
ಜಗದೀಶಶರ್ಮಾ ಸಂಪ ಅವರ (25ನೇ ಪುಸ್ತಕ) 'ಮಹಾಭಾರತ ಅನ್ವೇಷಣೆ'
ಸತೀಶ್ ವೆಂಕಟಸುಬ್ಬು ಅವರ 'ಸೈಬರ್ ಕ್ರೈಂ' ತಡೆಗಟ್ಟುವುದು ಹೇಗೆ? (ಕನ್ನಡ) ಮತ್ತು 'Cyber Crime' (ಇಂಗ್ಲಿಷ್)
 

SCROLL FOR NEXT