ಗೌತಮ್ ಪುಟ್ಟಮಾದಯ್ಯ (ಎಡ) ಮತ್ತು ಅವರ ಸಹೋದರ ಮಿಥುನ್
ಗೌತಮ್ ಪುಟ್ಟಮಾದಯ್ಯ (ಎಡ) ಮತ್ತು ಅವರ ಸಹೋದರ ಮಿಥುನ್ 
ರಾಜ್ಯ

ಏಳು ದಿನಗಳಲ್ಲಿ ಕಿಲಿಮಂಜಾರೋ ಪರ್ವತ ಏರಿದ 39ರ ಸಾಹಸಿ ಕನ್ನಡಿಗ ಗೌತಮ್ ಪುಟ್ಟಮಾದಯ್ಯ!

Manjula VN

ಬೆಂಗಳೂರು: ಅಕೌಂಟೆಂಟ್ ಜನರಲ್ ಕಚೇರಿಯ ಅಕೌಂಟ್ಸ್ ಅಧಿಕಾರಿಯಾಗಿರುವ 39 ವರ್ಷದ ಗೌತಮ್ ಪುಟ್ಟಮಾದಯ್ಯ ಅವರು ಇತ್ತೀಚೆಗೆ 7 ದಿನಗಳಲ್ಲಿ ಆಫ್ರಿಕಾದ ಅತಿ ಎತ್ತರದ ಕಿಲಿಮಂಜಾರೊ ಪರ್ವತವನ್ನು ಏರಿ ಸಾಹಸ ಪ್ರದರ್ಶಿಸಿದ್ದಾರೆ.

ಕಿಲಿಮಂಜಾರೊ ಪರ್ವತ ಆಫ್ರಿಕಾದ ಅತಿ ಎತ್ತರದ ಪರ್ವತವಾಗಿದ್ದು, ಸಮುದ್ರ ಮಟ್ಟದಿಂದ 5,895 ಮೀ (19,341 ಅಡಿ) ಎತ್ತರದಲ್ಲಿದೆ, ಇದು ಒೊಟ್ಟು 8 ಪ್ರಮುಖ ಚಾರಣ ಮಾರ್ಗಗಳನ್ನು ಹೊಂದಿರುವ ಏಕೈಕ ಶಿಖರವಾಗಿದೆ.

ಪರ್ವತದ ಏರುವ ವೇಳೆ ತಾಪಮಾನ ಏರಿಳಿತ, ವಿಭಿನ್ನ ಸಸ್ಯ ವಲಯಗಳು ಪರ್ವತಾರೋಹಿಗಳಿಗೆ ಸಾಕಷ್ಟು ಸವಾಲುಗಳನ್ನು ಎದುರು ಮಾಡುತ್ತದೆ. ಕನ್ನಡಿಗರಾಗಿರುವ ಗೌತಮ್ ಅವರು ಈ ಸವಾಲುಗಳ ನಡುವಲ್ಲೂ ಪರ್ವತ ಏರುವಲ್ಲಿ ಯಶಸ್ವಿಯಾಗಿದ್ದಾರೆ.

ನನ್ನ ಕಿರಿಯ ಸಹೋದರ ಮಿಥುನ್ ಪುಟ್ಟಮಾದಯ್ಯ ಯೋಜನೆ ರೂಪಿಸಿದ್ದರು. ಆರಂಭದಲ್ಲಿ ನಾನು ಬೇಡ ಎಂದಿದ್ದೆ. ನಂತರ ಒಪ್ಪಿಕೊಂಡೆ. ಈ ಪರ್ವತಾರೋಹಣ ಬಗ್ಗೆ ನಮಗೆ ಯಾವುದೇ ಅರಿವು ಇರಲಿಲ್ಲ. ಟ್ರೆಕ್ಕಿಂಗ್ ವೇಲೆ ಎದುರಾಗುವ ಅಪಾಯಗಳ ಬಗ್ಗೆ ಸಂಶೋಧನೆಗಳ ಮೂಲಕ ಶೇ.20ರಷ್ಟು ಜ್ಞಾನ ಪಡೆದುಕೊಂಡಿದ್ದೆವು. ಪರ್ವತಾರೋಹಣದ ವೇಳೆ ಕೆಲವೊಮ್ಮೆ ಅಜ್ಞಾನಗಳು ಆನಂದವನ್ನು ಕೊಡುತ್ತದೆ ಎಂಬುದು ಅರಿವಾಯಿತು ಎಂದು ಗೌತಮ್ ಹೇಳಿದ್ದಾರೆ.

ಜನವರಿ 19 ರಿಂದ ಜನವರಿ 27 ರವರೆಗೆ ಪರ್ವತಾರೋಹಣ ಮಾಡಿದೆವು. ಏಳು ದಿನಗಳು ಲೆಮೊಶೋ ಮಾರ್ಗದ ಮೂಲಕ ಸಾಗಿದೆವು. ದಿನಕ್ಕೆ 600-900 ಮೀ ಸಾಗಿದೆವು. ಕಿಲಿಮಂಜಾರೋ ಪರ್ವತದ ಶಿಖರವನ್ನು ತಲುಪುವವರಿಗೆ ಕಾಲಮಿತಿಯನ್ನು ನೀಡಲಾಗುತ್ತದೆ. ಪರ್ವತಾರೋಹಿಗಳಿಗೆ ಸಾಮಾನ್ಯವಾಗಿ ಕನಿಷ್ಠ 5 ದಿನಗಳಿಂದ ಗರಿಷ್ಠ 11 ದಿನಗಳವರೆಗೆ ನೀಡಲಾಗುತ್ತದೆ. ಎತ್ತರ ಹೆಚ್ಚಾದಂತೆ ಪರ್ವತಾರೋಹಿಗಳಿಗೆ ಆಗಾಗ್ಗೆ ಹೈ ಆಲ್ಟಿಟ್ಯೂಡ್ ಪಲ್ಮನರಿ ಎಡಿಮಾ (HAPE) ಮತ್ತು ಹೈ ಆಲ್ಟಿಟ್ಯೂಡ್ ಸೆರೆಬ್ರಲ್ ಎಡಿಮಾ (HACE) ಎದುರಾಗುತ್ತದೆ. ತಲೆತಿರುಗುವಿಕೆ ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅರಿವಿನ ದುರ್ಬಲತೆ ಕೂಡ ನಮ್ಮ ಗುರಿಗೆ ಅಡ್ಡಿಯುಂಟು ಮಾಡುತ್ತವೆ ಎಂದು ತಿಳಿಸಿದ್ದಾರೆ.

2023ರ ಜುಲೈನಲ್ಲಿ ನನ್ನ ಸಹೋದರ ಪರ್ವತಾರೋಹಣ ಮಾಡುವ ಯೋಜನೆ ರೂಪಿಸಿದ್ದ. ಈ ಯೋಜನೆ ಆಹ್ಲಾದಕರ ಪ್ರಯಾಣವಾಗಿ ಮಾರ್ಪಟ್ಟಿತು. ಮೊದಲ ನೋಟಕ್ಕೆ ಕಿಲಿಮಂಜಾರೋ ಪರ್ವತ ನನ್ನಲ್ಲಿ ಪುಳಕವನ್ನುಂಟು ಮಾಡಿತ್ತು. ಪರ್ವತ ನೋಡಿದ ಕೂಡಲೇ ನಿಜಕ್ಕೂ ನಾವು ಏರುತ್ತೀವಾ ಎನ್ನುವ ಅನುಮಾನವನ್ನೂ ಹುಟ್ಟುಹಾಕಿತ್ತು. ಪರ್ವತ ಏರುತ್ತಾ ಏರುತ್ತಾ ನನ್ನ ಸಹೋದರನಿಗೆ HACE ಮತ್ತು HAPE ಕಾಣಿಸಿಕೊಳ್ಳಲಾರಂಭಿತು. ಇದು ನನ್ನಲ್ಲಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಪರ್ವತಾರೋಹಣ ನನಗೆ ಸಾಕಷ್ಟು ಅರಿವು ಹಾಗೂ ಜ್ಞಾನವನ್ನು ನೀಡಿತು ಎಂದು ಗೌತಮ್ ಹೇಳಿದ್ದಾರೆ.

SCROLL FOR NEXT