ವಿಧಾನಸಭೆ.
ವಿಧಾನಸಭೆ. PTI
ರಾಜ್ಯ

ಅನಿವಾಸಿ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಸಚಿವಾಲಯ

Srinivas Rao BV

ಬೆಂಗಳೂರು: ರಾಜ್ಯ ಸರ್ಕಾರ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ವಿಧಾನಪರಿಷತ್ ಗೆ ಇಂದು ತಿಳಿಸಿದರು. ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಭರವಸೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆ ಭಾಗವಾಗಿತ್ತು.

ಸಭಾಧ್ಯಕ್ಷ ಯುಟಿ ಖಾದರ್ ಆಹ್ವಾನದ ಮೇರೆಗೆ ವಿಧಾನಸಭಾ ಕಲಾಪವನ್ನು ವೀಕ್ಷಿಸಲು ಆಗಮಿಸಿದ್ದ ಅನಿವಾಸಿ ಕನ್ನಡಿಗರನ್ನು ಸ್ವಾಗತಿಸಿದ ಸಂದರ್ಭದಲ್ಲಿ ಗೃಹ ಸಚಿವರು ಈ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ. ಕೆನಡಾ, ಯುಕೆ, ಯುಎಸ್, ಆಸ್ಟ್ರೇಲಿಯಾ, ಸಿಂಗಪೂರ್, ಪಶ್ಚಿಮ ಏಷ್ಯಾ ದೇಶಗಳಿಂದ ಅನಿವಾಸಿ ಕನ್ನಡಿಗರು ಕಲಾಪ ವೀಕ್ಷಿಸಲು ಆಗಮಿಸಿದ್ದರು.

ಕೇರಳದಲ್ಲಿ ಅನಿವಾಸಿ ಕೇರಳಿಗರಿಗಾಗಿಯೇ ಪ್ರತ್ಯೇಕ ಸಚಿವಾಲಯವಿದೆ. ಈ ಸಚಿವಾಲಯ ವಿದೇಶದಲ್ಲಿ ನಮ್ಮನವರು ಯಾರಾದರೂ ಮೃತಪಟ್ಟರೆ, ಪಾರ್ಥಿವ ಶರೀರಗಳನ್ನು ವಾಪಸ್ ತರುವುದು ಸೇರಿದಂತೆ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಕಾರ್ಯನಿರ್ವಹಿಸುತ್ತವೆ ಕರ್ನಾಟಕದಲ್ಲಿಯೂ ಇಂಥಹದ್ದೇ ಸಚಿವಾಲಯವನ್ನು ಆರಂಭಿಸಲಿದ್ದೇವೆ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ಕಾನೂನಿಗೆ ಅನುಗುಣವಾಗಿ ಎನ್ ಆರ್ ಐ ಗಳಿಗೆ ಎಲ್ಲಾ ರೀತಿಯ ನೆರವನ್ನೂ ರಾಜ್ಯ ಸರ್ಕಾರ ನೀಡಲಿದೆ. ಎನ್ ಆರ್ ಐಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಭಾರತಕ್ಕೆ ಮರಳುವುದು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಅನಿವಾಸಿ ಭಾರತೀಯರಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯ ಕುರಿತು ಮಾತನಾಡಿದ ಸಚಿವರು, ಅವರು ಇಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ ಮತ್ತು ಅವರ ವ್ಯವಹಾರಗಳಿಂದ ಸಿಎಸ್ಆರ್ ಹಣವನ್ನು ಸಹ ಒದಗಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

2008 ರಲ್ಲಿಯೇ ಕರ್ನಾಟಕ ಸರ್ಕಾರ ಅವರ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಪರಿಹರಿಸಲು ಅನಿವಾಸಿ ಭಾರತೀಯರ ವೇದಿಕೆಯನ್ನು ಸ್ಥಾಪಿಸಿದೆ ಮತ್ತು ಪ್ರಸ್ತುತ ಸರ್ಕಾರವು ಡಾ.ಆರತಿ ಕೃಷ್ಣ ಅವರನ್ನು ವೇದಿಕೆಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಹೇಳಿದರು. ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ರಾಜ್ಯದ ಅನಿವಾಸಿ ಭಾರತೀಯರ ಕಲ್ಯಾಣಕ್ಕಾಗಿ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸುವಂತೆ ಒತ್ತಾಯಿಸಿದರು.

SCROLL FOR NEXT