ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕೆರೆಗಳ ಪಕ್ಕ ಬೋರ್ ವೆಲ್ ಕೊರೆತ; ಕೆರೆ ರಕ್ಷಣೆ ಕಾರ್ಯಕರ್ತರ ಆತಂಕ

Shilpa D

ಬೆಂಗಳೂರು: ಕೆರೆಗಳ ಪಕ್ಕದಲ್ಲಿ ಬೋರ್‌ವೆಲ್‌ ಕೊರೆಯುವ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೆರೆ ಬಫರ್‌ ಝೋನ್‌ಗಳಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬೋರ್‌ವೆಲ್‌ಗಳನ್ನು ಕೊರೆಯುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ, ಇದರಿಂದ ಜಲಮೂಲಗಳು ಬತ್ತಿ ಹೋಗುವ ಸಾಧ್ಯತೆ ಇದೆ ಎಂದು ಕೆರೆ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಮೇಡಹಳ್ಳಿ ನಿವಾಸಿಗಳು ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ಬೋರ್‌ವೆಲ್‌ ಕೊರೆಯುತ್ತಿರುವ ಬಗ್ಗೆ ಗಮನ ಸೆಳೆದಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ಅದೇ ರೀತಿ ಶ್ರೀನಿವಾಸ್ ಎಂಬಾತ ವಿಭೂತಿಪುರ ಕೆರೆ ಬಫರ್ ಝೋನ್‌ನಿಂದ ಯಾವುದೇ ಅನುಮತಿ ಇಲ್ಲದೆ ನೀರು ತೆಗೆಯುತ್ತಿದ್ದು, ವಾರ್ಡ್ ಎಂಜಿನಿಯರ್‌ಗಳು ಉದ್ದೇಶಪೂರ್ವಕವಾಗಿ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಆವರಣದ ಬಳಿ ಬೋರ್‌ವೆಲ್‌ ಕೊರೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಅನುಮತಿ ಪಡೆಯಲಾಗಿದೆಯೇ ಎಂದು BWSSB ಮತ್ತು BBMP ಪರಿಶೀಲಿಸಬೇಕಾಗಿದೆ. ಬೋರ್ ವೆಲ್ ಕಮರ್ಷಿಯಲ್ ಎನಿಸುತ್ತಿದೆ. ಕೆಆರ್ ಪುರಂ ಮತ್ತು ಮಹದೇವಪುರದಲ್ಲಿ ಹಲವಾರು ಅಕ್ರಮ ಬೋರ್‌ವೆಲ್‌ಗಳನ್ನು ಮಾಫಿಯಾಗಳು ಕೊರೆದಿವೆ , ಆದರೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಬಂದು ಎಚ್ಚರಿಕೆ ನೀಡಿ ಸಣ್ಣ ದಂಡ ವಿಧಿಸುತ್ತಾರೆ ಎಂದು ಮೇಡಹಳ್ಳಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ವಿಭೂತಿಪುರ ಕೆರೆಯ ಬಫರ್ ಜೋನ್‌ನಲ್ಲಿ ಕಮರ್ಷಿಯಲ್ ಬೋರ್‌ವೆಲ್ ಇದೆ. ರಾಜಕೀಯ ಮುಖಂಡರೊಬ್ಬರು ಬೋರ್ ವೆಲ್ ಕೊರೆದು ನೀರು ಸರಬರಾಜು ಮಾಡಲು ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆಗೆ ಪಡೆದಿದ್ದಾರೆ ಎಂದು ಕೆಆರ್ ಪುರಂನ ವಿಜ್ಞಾನ ನಗರದ ಬಸವನಗರದ ನಿವಾಸಿ ತಿಳಿಸಿದ್ದಾರೆ.

ಬೆಸ್ಕಾಂ ವಿದ್ಯುತ್ ಪೂರೈಸುತ್ತಿದೆ, ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ವಾರ್ಡ್ ಎಂಜಿನಿಯರ್‌ಗಳು ಈ ಅಕ್ರಮದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸ್ವಲ್ಪ ಧೈರ್ಯ ತೋರಬೇಕು ಎಂದು ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪರ್ಸತ್ ಮನೋಹರ್, ಅಕ್ರಮ ಬೋರ್‌ವೆಲ್‌ಗಳ ವಿರುದ್ಧ ಕ್ರಮಕೈಗೊಳ್ಳಲು ನಾವು ನಿಯಮಗಳನ್ನು ರೂಪಿಸುತ್ತಿದ್ದೇವೆ ಎಂದಿದ್ದಾರೆ.

SCROLL FOR NEXT