ವಿಜಯಪುರ: ಐತಿಹಾಸಿಕ ಗೋಲ್ ಗುಂಬಜ್ ಮ್ಯೂಸಿಯಂ ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಅಪರಿಚಿತ ಖಾತೆಯಿಂದ ಬೆದರಿಕೆಯೊಡ್ಡಲಾಗಿದೆ.
ಇ-ಮೇಲ್ ನಲ್ಲಿ ವಸ್ತುಸಂಗ್ರಹಾಲಯದೊಳಗೆ ಬಾಂಬ್ ಇಡಲಾಗಿದೆ ಎಂದು ಬರೆಯಲಾಗಿದೆ. ಬೆದರಿಕೆ ಬರುತ್ತಿದ್ದಂತೆಯೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ತಲುಪಿಸಿದ್ದು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಆದರೂ ಅದು ಯಾರೋ ದುಷ್ಕರ್ಮಿಗಳು ಕಳುಹಿಸಿದ್ದ ಹುಸಿ ಮೇಲ್ ಎಂಬುದು ನಂತರ ತಿಳಿದುಬಂದಿದೆ.
ನಂತರ, ಮಾಧ್ಯಮ ಪ್ರತಿನಿಧಿಗಳಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಾನೆ, ಇಮೇಲ್ ಸುಳ್ಳು ಎಂದು ಕಂಡುಬಂದಿದೆ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಅಪರಾಧದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯಕ್ಕೆ ಹುಸಿ ಬಾಂಬ್ ಬೆದರಿಕೆ, ಪೊಲೀಸರಿಂದ ತಪಾಸಣೆ!
ದೇಶದ ವಿವಿಧ ಐತಿಹಾಸಿಕ ವಸ್ತುಸಂಗ್ರಹಾಲಯಗಳಿಗೆ ಇಂತಹ ಮೇಲ್ ಕಳುಹಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಎಫ್‌ಐಆರ್ ದಾಖಲಿಸಿದ ನಂತರ, ಮೇಲ್‌ನ ಮೂಲವನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಸೈಬರ್ ಪೊಲೀಸ್ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. “ಇ-ಮೇಲ್‌ನ ಐಪಿ ವಿಳಾಸವನ್ನು ಪರಿಶೀಲಿಸುವ ಮೂಲಕ ಮೂಲವನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿದೆ. ಆದರೆ, ಸ್ಪಷ್ಟ ಮಾಹಿತಿ ಸಿಗಲು ಸ್ವಲ್ಪ ಸಮಯ ಬೇಕು,’’ ಎಂದು ಅಧಿಕಾರಿಗಳಿ ಹೇಳಿದ್ದಾರೆ