ಸಂಗ್ರಹ ಚಿತ್ರ 
ರಾಜ್ಯ

ಜಾಲಿ ರೈಡ್ ತಂದ ಆಪತ್ತು: ಕಾರು ಪಲ್ಟಿ ಹೊಡೆದು ಇಬ್ಬರ ದುರ್ಮರಣ, ಮೂವರಿಗೆ ಗಾಯ

ಬರ್ತ್ ಡೇ ಪಾರ್ಟಿ ಮಾಡಿ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿ, ಮೂವರು ಗಾಯಗಂಡಿರುವ ಘಟನೆ  ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮದೇನೂರು ಗ್ರಾಮದ ಬಳಿ ನಡೆದಿದೆ.

ಹಾಸನ: ಬರ್ತ್ ಡೇ ಪಾರ್ಟಿ ಮಾಡಿ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿ, ಮೂವರು ಗಾಯಗಂಡಿರುವ ಘಟನೆ  ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮದೇನೂರು ಗ್ರಾಮದ ಬಳಿ ನಡೆದಿದೆ.

ಮೃತರನ್ನು ಚನ್ನರಾಯಪಟ್ಟಣದ ರಕ್ಷಿತ್ (22) ಮತ್ತು ಕುಶಾಲ್ (24) ಎಂದು ಗುರುತಿಸಲಾಗಿದೆ. ಕುಶಾಲ್ ಹುಟ್ಟುಹಬ್ಬವನ್ನು ಆಚರಿಸಿದ ಸ್ನೇಹಿತರು ಕಾರಿನಲ್ಲಿ ಜಾಲಿ ರೈಡ್'ಗೆ ತೆರಳಿದ್ದರು. ಈ ವೇಳೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮದೇನೂರು ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು, ರಸ್ತೆ ಬದಿಯ ರೈತನ ಜಮೀನಿಗೆ ಹಾರಿ ಬಿದ್ದಿದೆ.

ಪರಿಣಾಮ ರಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಕುಶಾಲ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಓಪನ್ನಾಗಿ ಹೇಳ್ತಿದ್ದೀನಿ, ಯಾರೂ ಬಿ ಖಾತಾದಿಂದ ಎ ಖಾತಾಗೆ ದುಡ್ಡು ಕಟ್ಟಬೇಡಿ, ಇದು ಸರ್ಕಾರದ ಬಹುದೊಡ್ಡ ಲೂಟಿ': ಹೆಚ್ ಡಿ ಕುಮಾರಸ್ವಾಮಿ

3ನೇ ಏಕದಿನ: 'ರೋ-ಕೋ' ಭರ್ಜರಿ ಕಮ್ ಬ್ಯಾಕ್, ಸಿಡ್ನಿಯಲ್ಲಿ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ

3ನೇ ಏಕದಿನ: ರೋ'ಹಿಟ್' ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳು ಪತನ

ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಧರ್ಮಸ್ಥಳ ಬುರುಡೆ ಕೇಸ್​: ನಿರ್ಣಾಯಕ ಘಟ್ಟದಲ್ಲಿ SIT ತನಿಖೆ, ತಿಮರೋಡಿ ಸೇರಿ ನಾಲ್ವರಿಗೆ ನೋಟಿಸ್! ಕಾರಣವೇನು?

SCROLL FOR NEXT