ರಾಜ್ಯ

ಬೆಂಗಳೂರು: 30 ಸಾವಿರ ರು. ನಕಲಿ ನೋಟು ವಶ, ವಿಕಲ ಚೇತನ ವ್ಯಕ್ತಿ ಬಂಧನ

Shilpa D

ಬೆಂಗಳೂರು: ಸ್ಥಳೀಯ ಅಂಗಡಿ ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗೆ ನಕಲಿ 500 ರೂಪಾಯಿ ನೋಟುಗಳೊಂದಿಗೆ ವಂಚಿಸಿದ್ದ 60 ವರ್ಷದ ದೈಹಿಕ ವಿಕಲಚೇತನ ವ್ಯಕ್ತಿಯನ್ನು ಪೊಲೀಸರು ಬಂಧಸಿದ್ದಾರೆ.

ಶುಕ್ರವಾರ ಸಂಜೆ ಆರೋಪಿ ಭದ್ರಾವತಿ ಮೂಲದ ಕೋದಂಡಮೂರ್ತಿ ರಾಜರಾಜೇಶ್ವರಿನಗರದ ವ್ಯಾಪಾರಸ್ಥರಿಗೆ 500 ರೂಪಾಯಿ ನಕಲಿ ನೋಟು ನೀಡಿ 35 ರೂಪಾಯಿ ಮೌಲ್ಯದ ತರಕಾರಿ ಖರೀದಿಸಿದ್ದ, ಆರೋಪಿ ತೆರಳಿದ ಬಳಿಕ ವ್ಯಾಪಾರಗಾರನಿಗೆ ನೋಟು ನಕಲಿ ಎಂದು ತಿಳಿದು ದೂರು ದಾಖಲಿಸಿದ್ದಾರೆ.

ಡೀಲರ್‌ಗಳು, ಚಿಲ್ಲರೆ ವ್ಯಾಪಾರಿಗಳು, ಪೂರೈಕೆದಾರರು ಮತ್ತು ವಿನಿಮಯದಲ್ಲಿ ಭಾಗಿಯಾಗಿರುವ ಆರೋಪಿಗಳ ಜೊತೆಗೆ ನಕಲಿ ನೋಟು ಉತ್ಪಾದನೆಯಲ್ಲಿ ಕೋದಂಡಮೂರ್ತಿ ಭಾಗಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಕೋದಂಡಮೂರ್ತಿ ಬಳಿಯಿಂದ 500 ರೂಪಾಯಿಯ  30 ಸಾವಿರ ರೂಪಾಯಿ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ನೋಟುಗಳನ್ನು ಅವುಗಳ ಸತ್ಯಾಸತ್ಯತೆಯ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಲು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋದಂಡಮೂರ್ತಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರ್‌ಆರ್‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

SCROLL FOR NEXT