ಶಸ್ತ್ರಚಿಕಿತ್ಸೆಗೊಳಗಾದ ಬಾಲಕನೊಂದಿಗೆ ವೈದ್ಯರ ತಂಡ. 
ರಾಜ್ಯ

111 ಕೆಜಿ ತೂಕವಿದ್ದ ಬಾಲಕನಿಗೆ ಸಂಭಾವ್ಯ ಪಾರ್ಶ್ವವಾಯು ತಪ್ಪಿಸಿದ Spinal Disc Surgery!

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ವಿ ಗಣೇಶ್ ನೇತೃತ್ವದ ತಂಡ ಬಾಲಕನಿಗೆ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ.

ಬೆಂಗಳೂರು: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ (ಬೆನ್ನು ಮೂಳೆ ಪಲ್ಲಟಗೊಳ್ಳುವುದು) ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗಬೇಕಿದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ʻಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿʼ (Micro Lumbar Discectomy) ಎಂಬ ಕಾಲು ಉಳಿಸುವ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.

ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ವಿ ಗಣೇಶ್ ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ.

ಈ ಕುರಿತು ಮಾತನಾಡಿರುವ ವೈದ್ಯ ಗಣೇಶ್ ಅವರು, 111 ಕೆ.ಜಿ. ತೂಕವಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು. 4 ತಿಂಗಳ ಕಾಲ ಈ ನೋವನ್ನು ಹಾಗೆಯೇ ನಿರ್ಲಕ್ಷಿಸಿದ್ದರು. ಇದರಿಂದಾಗಿ ಬಾಲಕ ನಡೆಯಲು ಹಾಗೂ ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ.

ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ MRI ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು. ಬಾಲಕ ಈ ನೋವನ್ನು ಹೀಗೆಯೇ ನಿರ್ಲಕ್ಷ್ಯ ಮಾಡಿದ್ದರೇ ಮುಂದೊಂದುದಿನ ಆ ಕಾಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು.

ಬಾಲಕನ ಆರೋಗ್ಯದ ಗಂಭೀರತೆ ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು. ಇದು ನರಗಳ ಮೇಲಿನ ಒತ್ತಡ ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಿಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ರಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT