ಸಾಂದರ್ಭಿಕ ಚಿತ್ರ 
ರಾಜ್ಯ

ಕೇರಳದಲ್ಲಿ ನಿಫಾ ಸಾವು: ಮಲಪ್ಪುರಂಗೆ ಪ್ರಯಾಣಿಸದಂತೆ ರಾಜ್ಯದ ಜನತೆಗೆ ಸರ್ಕಾರ ಸಲಹೆ

ಮುನ್ನೆಚ್ಚರಿಕೆ ಕ್ರಮವಾಗಿ, ಕೇರಳದ ನಿಫಾ ಪೀಡಿತ ಪ್ರದೇಶಗಳಿಗೆ (ಮಲಪ್ಪುರಂ ಜಿಲ್ಲೆ) ಪ್ರಯಾಣ ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಮಿಷನರೇಟ್ ಮನವಿ ಮಾಡಿದೆ.

ಬೆಂಗಳೂರು: ನಿಫಾ ವೈರಸ್ ಸೋಂಕಿನಿಂದ 14 ವರ್ಷದ ಬಾಲಕ ಸಾವನ್ನಪ್ಪಿದ ನೆರೆಯ ಕೇರಳದ ಮಲಪ್ಪುರಂ ಜಿಲ್ಲೆಗೆ ಪ್ರಯಾಣಿಸದಂತೆ ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರ ಗುರುವಾರ ಸಲಹೆ ನೀಡಿದೆ.

ಮಲಪ್ಪುರಂನಲ್ಲಿ ವರದಿಯಾದ ಪ್ರಕರಣವು ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್, ಒಂದು ನಿಫಾ ರೋಗಲಕ್ಷಣ) ಆಗಿದ್ದು, ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ, ಕೇರಳದ ನಿಫಾ ಪೀಡಿತ ಪ್ರದೇಶಗಳಿಗೆ (ಮಲಪ್ಪುರಂ ಜಿಲ್ಲೆ) ಪ್ರಯಾಣ ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಮಿಷನರೇಟ್ ಮನವಿ ಮಾಡಿದೆ.

ಇದುವರೆಗೆ ಕರ್ನಾಟಕದಲ್ಲಿ ಯಾವುದೇ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಆದರೆ ಕೇರಳದಲ್ಲಿ ಏಕಾಏಕಿ ವರದಿಯಾದಾಗಿನಿಂದ ಗಡಿಯಾಚೆಗಿನ ಸೋಂಕು ರಾಜ್ಯದಲ್ಲಿ ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಹಣ್ಣಿನ ಬಾವಲಿಗಳು ನಿಫಾ ವೈರಸ್‌ನ ಸಾಮಾನ್ಯ ಜಲಾಶಯವಾಗಿದ್ದು ಬಾವಲಿಯಿಂದ ಕಲುಷಿತಗೊಂಡ ಹಣ್ಣುಗಳನ್ನು ಆಕಸ್ಮಿಕವಾಗಿ ಸೇವಿಸುವುದರಿಂದ ಮನುಷ್ಯರು ಸೋಂಕಿಗೆ ಒಳಗಾಗಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಮಿಷನರೇಟ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT