ಕೆಲಹೊತ್ತು ಆಂಬ್ಯುಲೆನ್ಸ್ ಆದ ಬಸ್ 
ರಾಜ್ಯ

ಮಂಗಳೂರು: ಎದೆನೋವು ಕಾಣಿಸಿಕೊಂಡ ಯುವತಿಯ ಜೀವ ಉಳಿಸಿದ ಬಸ್ ಚಾಲಕ, ಕಂಡಕ್ಟರ್!

'ಬಸ್ ನ ಹಾರ್ನ್ ಅನ್ನು ಸೈರಲ್ ಆಗಿ ಬಳಸಿ, ಕೇವಲ ಆರು ನಿಮಿಷಗಳಲ್ಲಿ ಆರು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಂಗಳೂರು: ನಗರದ ಬಸ್ ವೊಂದರ ಚಾಲಕ ಹಾಗೂ ಕಂಡಕ್ಟರ್ ಬುಧವಾರ ಮಾನವೀಯತೆ ಮೆರೆದಿದ್ದು, ಯುವತಿ ಜೀವ ಉಳಿಸಿದ್ದಾರೆ. ಎದೆನೋವು ಕಾಣಿಸಿಕೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಆಕೆಯ ಅಮೂಲ್ಯ ಪ್ರಾಣವನ್ನು ಕಾಪಾಡಿದ್ದಾರೆ.

ಅಂದಹಾಗೆ ನಗರದಲ್ಲಿ ನಿತ್ಯ ಸಂಚರಿಸುವ 13F ಬಸ್ ಕೂಳೂರು ಮೂಲಕ ಸಾಗುವಾಗ ಬಸ್ ನಲ್ಲಿದ್ದ ವಯಸ್ಕ ಯುವತಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ ಚಾಲಕ ಮಹೇಶ್ ಪೂಜಾರಿ ಮತ್ತು ಸುರೇಶ್ ಕಂಕನಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಸ್ ನ ಹಾರ್ನ್ ಅನ್ನು ಸೈರಲ್ ಆಗಿ ಬಳಸಿ, ಕೇವಲ ಆರು ನಿಮಿಷಗಳಲ್ಲಿ ಆರು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಾಲಕ ಬಸ್ ನನ್ನು ಆಸ್ಪತ್ರೆ ಒಳಗೆ ಚಲಾಯಿಸಿಕೊಂಡು ಹೋಗಿದ್ದು, ಕಂಡಕ್ಟರ್ ತ್ವರಿತ ಚಿಕಿತ್ಸೆಗಾಗಿ ಅರೆವೈದ್ಯಕೀಯ ಸಿಬ್ಬಂದಿಯತ್ತ ದೌಡಾಯಿಸಿದ್ದಾರೆ.

ಬಸ್ ಚಾಲಕ ಹಾಗೂ ಕಂಡಕ್ಟರ್ ಅವರ ಸಮಯ ಪ್ರಜ್ಞೆಗೆ ಧನ್ಯವಾದ ಹೇಳಲೇಬೇಕು. ಯುವತಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಪ್ರಯಾಣಿಕರ ಗುರುತನ್ನು ತಡೆಹಿಡಿಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ ಸಂಬಂಧಿಕರು ಚಾಲಕ ಮತ್ತು ಕಂಡಕ್ಟರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಜೋಡಿಯ ತ್ವರಿತ ಆಲೋಚನೆ ಮಂಗಳೂರಿನಾದ್ಯಂತ ಚರ್ಚೆಯಾಗುತ್ತಿದೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಧನ್ಯವಾದಗಳ ಸುರಿಮಳೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಮನೆ ಮುಂದೆ ನಿಲ್ಲಿಸೋ ವಾಹನಗಳಿಗೆ ಪಾರ್ಕಿಂಗ್ ಶುಲ್ಕಕ್ಕೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ; CM ಡಿಕೆಶಿಗೆ ಪತ್ರ