ಹೈಕೋರ್ಟ್  
ರಾಜ್ಯ

ಜೂನ್ 6 ವರೆಗೆ 3 ದಿನ ಮದ್ಯ ಮಾರಾಟ ನಿಷೇಧ; ಆಹಾರ ಒದಗಿಸಲು ಪಬ್-ಬ್ರೀವರೀಸ್ ಗೆ ಹೈಕೋರ್ಟ್ ಅನುಮತಿ

ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಇಂದು ಜೂನ್ 1ರಿಂದ 6ರ ನಡುವೆ ಸಾರ್ವಜನಿಕರಿಗೆ ಆಹಾರ ಆತಿಥ್ಯ ನೀಡುವುದನ್ನು ಮುಂದುವರಿಸಲು ಅವಕಾಶ ನೀಡಬೇಕೆಂಬ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಬೆಂಗಳೂರು: ಆಹಾರ ಮತ್ತು ಪಾನೀಯ ಉದ್ಯಮಕ್ಕೆ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಇಂದು ಜೂನ್ 1ರಿಂದ 6ರ ನಡುವೆ ಸಾರ್ವಜನಿಕರಿಗೆ ಆಹಾರ ಆತಿಥ್ಯ ನೀಡುವುದನ್ನು ಮುಂದುವರಿಸಲು ಅವಕಾಶ ನೀಡಬೇಕೆಂಬ ಮನವಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಜೂನ್ 3ರಂದು ವಿಧಾನ ಪರಿಷತ್ ಚುನಾವಣೆ, ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಜೂನ್ 6ರಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಬ್‌ ಮತ್ತು ಬಿವರೇಜ್ ಮುಚ್ಚುವ ಬಗ್ಗೆ ಹೈಕೋರ್ಟ್ ನಿರ್ಧಾರ ಮಾಡಿದೆ. ಪಬ್ ಮತ್ತು ಬ್ರಿವರಿಗಳನ್ನು ಮುಚ್ಚಿದರೆ ವ್ಯಾಪಾರ ಆದಾಯ ಮೇಲೆ ತೀವ್ರ ಹೊಡೆತ ಬೀಳುತ್ತದೆ ಎಂದು ಈ ಸಮಯದಲ್ಲಿ ಜನರು ಹೆಚ್ಚಾಗಿ ಪಾನೀಯಗಳಿಗಾಗಿ ಪಬ್‌ಗಳಿಗೆ ಭೇಟಿ ನೀಡುತ್ತಾರೆ, ನಂತರ ಆಹಾರ ಸೇವನೆಯ ಮೊರೆ ಹೋಗುತ್ತಾರೆ.

ನಿನ್ನೆಯ ಹೈಕೋರ್ಟ್ ಆದೇಶದ ಪ್ರಕಾರ, ಪ್ರತಿವಾದಿ ಸಂಖ್ಯೆ 3 (ಉಪ ಆಯುಕ್ತರು ಮತ್ತು ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್) ಮತ್ತು ನಂ 4 (ಪೊಲೀಸ್ ಕಮಿಷನರ್ ಮತ್ತು ಹೆಚ್ಚುವರಿ ಜಿಲ್ಲಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್) ಅರ್ಜಿದಾರರು ಮತ್ತು ಇತರರಿಗೆ ಬಾರ್‌ ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರವನ್ನು ನೀಡುವುದನ್ನು ತಡೆಯದಂತೆ ನಿರ್ದೇಶಿಸಲಾಗಿದೆ.

ಪಬ್ ಮತ್ತು ಬ್ರೀವರಿ ಮಾಲೀಕರು ಹೇಳುವಂತೆ ಹೆಚ್ಚಿನ ಜನರು ಪ್ರಾಥಮಿಕವಾಗಿ ಮದ್ಯ ಸೇವಿಸಲು ಪಬ್‌ಗಳಿಗೆ ಭೇಟಿ ನೀಡುತ್ತಾರೆ. ಆದೇಶವು ಅವರ ಪರವಾಗಿದ್ದರೂ ಗಳಿಕೆಗೆ ಸಹಾಯ ಮಾಡುತ್ತದೆ, ಉದ್ಯಮದ ಮೇಲೆ ಹೊಡೆತ ಬೀಳುತ್ತದೆ.

ಹೈಕೋರ್ಟ್ ಆದೇಶವು ಆಹಾರ ಸೇವೆಗೆ ಮಾತ್ರ ಅನ್ವಯಿಸುತ್ತದೆ. ನಾಳೆ ಜೂನ್ 2, 4 ಮತ್ತು ಜೂನ್ 6 ರಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಇಂದು ಮತ್ತು ಜೂನ್ 3 ರಂದು ಸಂಜೆ 4 ಗಂಟೆಯ ನಂತರ ಮಾರಾಟ ಪುನಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel