ಹುಲಿಗಳ ಸನ್ನಿಹದಲ್ಲಿ ಸಫಾರಿ ವಾಹನದ ಚಿತ್ರ 
ರಾಜ್ಯ

ಕಬಿನಿ, ಜಂಗಲ್ ಲಾಡ್ಜ್ ರೆಸಾರ್ಟ್ ಸಫಾರಿಗಳ ಸಂಖ್ಯೆ ತಗ್ಗಿಸಿ, ಅರಣ್ಯ ಇಲಾಖೆ ಸಫಾರಿ ಟ್ರೀಪ್ ಹೆಚ್ಚಿಸಲು ಚಿಂತನೆ!

ಹೊಸ ಪ್ರಸ್ತಾವನೆ ರೂಪಿಸುವಾಗ ಸುಪ್ರೀಂ ಕೋರ್ಟ್ ಆದೇಶಗಳು, ಎನ್‌ಟಿಸಿಎ ಮಾರ್ಗಸೂಚಿಗಳು ಮತ್ತು ಇತರ ವನ್ಯಜೀವಿ ಕಾಯ್ದೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರು: ಹೊಸ ಉದ್ದೇಶಿತ ಹುಲಿ ಸಂರಕ್ಷಣಾ ಯೋಜನೆಯಡಿ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಬೇಡಿಕೆ ಇರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ವ್ಯಾಪ್ತಿಯ ಕಬಿನಿ ಹಾಗೂ ಜಂಗಲ್ ಲಾಡ್ಜ್ ನ ಹಲವಾರು ರೆಸಾರ್ಟ್‌ಗಳು ನೀಡುವ ವನ್ಯಜೀವಿ ಸಫಾರಿಗಳ ಸಂಖ್ಯೆ ಶೀಘ್ರದಲ್ಲಿಯೇ ಕಡಿಮೆಯಾಗಲಿದೆ.

ಕರ್ನಾಟಕ ಅರಣ್ಯ ಇಲಾಖೆಯು ಹೊಸ ಹುಲಿ ಸಂರಕ್ಷಣಾ ಪ್ರದೇಶ ನಿರ್ವಹಣಾ ಯೋಜನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (NTCA) ಕಳುಹಿಸಿದೆ. ಇದರಲ್ಲಿ ಜಂಗಲ್ ಲಾಡ್ಜ್ ರೆಸಾರ್ಟ್ ಸಫಾರಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಬದಲಿಗೆ ಅರಣ್ಯ ಇಲಾಖೆ ಸಫಾರಿ ಟ್ರೀಪ್ ಗಳ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ನಾಗರಹೊಳೆಗೆ ವಾಹನಗಳ ಸಂಖ್ಯೆಯನ್ನು 36 ರಿಂದ 45 ಕ್ಕೆ ಹೆಚ್ಚಿಸಲು ಹೊಸ ಕರಡು ಪ್ರಸ್ತಾಪಿಸಿದೆ. ಅದರಲ್ಲಿ 29 ವಾಹನಗಳನ್ನು ಜಂಗಲ್ ಲಾಡ್ಜ್ ರೆಸಾರ್ಟ್ ಮತ್ತು 16 ವಾಹನಗಳನ್ನು ಅರಣ್ಯ ಇಲಾಖೆ ವಾಹನಗಳಿಗೆ ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ಜೆಎಲ್‌ಆರ್ 36 ವಾಹನಗಳನ್ನು ಮತ್ತು ಅರಣ್ಯ ಇಲಾಖೆಯು 9 ವಾಹನಗಳನ್ನು ಹೊಂದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಜೆಎಲ್‌ಆರ್ (ಜಂಗಲ್ ಲಾಡ್ಜ್ ರೆಸಾರ್ಟ್) ಸಫಾರಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹ ಪ್ರಸ್ತಾಪಿಸಲಾಗಿದೆ. ಹೊಸ ಕರಡುವಿನಲ್ಲಿ 12 ಜೆಎಲ್ ಆರ್ ಗೆ ಹಾಗೂ 19 ಅರಣ್ಯ ಇಲಾಖೆ ವಾಹನಗಳಿಗೆ ಹಂಚಿಕೆ ಮಾಡುವುದರೊಂದಿಗೆ ಒಟ್ಟು ಸಫಾರಿ ವಾಹನಗಳ ಸಂಖ್ಯೆಯನ್ನು 31ಕ್ಕೆ ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನಾ ಕ್ರಮವಾಗಿ 14 ಮತ್ತು 17 ವಾಹನಗಳಿದ್ದವು. ಹುಲಿ ಸಂರಕ್ಷಣಾ ಪ್ರದೇಶ ನಿರ್ವಹಣಾ ಯೋಜನೆಯು ಮಾರ್ಚ್ 2024 ರಲ್ಲಿ ಮುಕ್ತಾಯಗೊಂಡಿದೆ. ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣೆ ಸೇರಿದಂತೆ ಇತರ ಕೆಲಸಗಳನ್ನು ಮುಂದುವರಿಸಲು ಉದ್ದೇಶಿತ ಯೋಜನೆಯ ಅಗತ್ಯವಿದೆ ಮತ್ತು NTCA ಯಿಂದ ಅನುಮೋದಿಸಬೇಕಾಗಿದೆ.

“ಇಲ್ಲಿಯವರೆಗೆ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಯೋಜನೆಯನ್ನು ಕಳುಹಿಸಿದ್ದೇವೆ. ಇತರ ಹುಲಿ ಸಂರಕ್ಷಿತ ಪ್ರದೇಶಗಳಾದ ಕಾಳಿ, ಬಿಆರ್‌ಟಿ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಯೋಜನೆಯನ್ನು ಇನ್ನೂ ಅಂತಿಮಗೊಳಿಸಲಾಗುತ್ತಿದೆ. ಪಾದಾಚಾರಿಗಳು, ಓಡುವ ವಾಹನಗಳ ಸಂಖ್ಯೆ, ಪ್ರಾಣಿಗಳ ಸಂಖ್ಯೆ, ಮಾರ್ಗಗಳು, ಪ್ರವಾಸೋದ್ಯಮಕ್ಕಾಗಿ ತೆರೆಯಲಾದ ಪ್ರದೇಶಗಳು, ಅರಣ್ಯಗಳ ಸೂಕ್ಷ್ಮತೆ ಮತ್ತು ಭೌಗೋಳಿಕ ಪ್ರದೇಶ ಸೇರಿದಂತೆ ಅನೇಕ ಅಂಶಗಳ ಆಧಾರದ ಮೇಲೆ ಪ್ರತಿ ಹುಲಿ ಸಂರಕ್ಷಿತ ಪ್ರದೇಶದ ಸಾಮರ್ಥ್ಯವನ್ನು ಪರಿಷ್ಕರಿಸಲಾಗುತ್ತಿದೆ. ಹೊಸ ಪ್ರಸ್ತಾವನೆಯಲ್ಲಿ, ಹವಾಮಾನ ಬದಲಾವಣೆ ಮತ್ತು ಮನುಷ್ಯ- ವನ್ಯಜೀವಿ ಸಂಘರ್ಷದ ನಿದರ್ಶನಗಳ ಆಧಾರದ ಮೇಲೆ ಬಫರ್ ವಲಯಗಳ ಗಡಿಗಳನ್ನು ಪರಿಷ್ಕರಿಸಲು ಇಲಾಖೆ ಉತ್ಸುಕವಾಗಿದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ಹೊಸ ಪ್ರಸ್ತಾವನೆ ರೂಪಿಸುವಾಗ ಸುಪ್ರೀಂ ಕೋರ್ಟ್ ಆದೇಶಗಳು, ಎನ್‌ಟಿಸಿಎ ಮಾರ್ಗಸೂಚಿಗಳು ಮತ್ತು ಇತರ ವನ್ಯಜೀವಿ ಕಾಯ್ದೆಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳವು ಪರಿಸರ ವ್ಯವಸ್ಥೆ ಮತ್ತು ಪ್ರಾಣಿಗಳಿಗೆ ಒತ್ತಡಕ್ಕೆ ಕಾರಣವಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ವಾಹನಗಳ ಸಂಖ್ಯೆಯನ್ನು ಏಕರೂಪವಾಗಿ ವಿಂಗಡಿಸಲಾಗುವುದು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT