ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್

ಫಾರ್ಮುಲಾ 1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್
Srinivasa Murthy VN
Updated On : 3 Mar 2024, 1:02 am

ಲಂಡನ್: ಫಾರ್ಮುಲಾ 1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಮಾತನಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಹೌದು.. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ F1 ಸೂಪರ್ ಸ್ಟಾರ್ ಲೂಯಿಸ್ ಹ್ಯಾಮಿಲ್ಟನ್ ಕನ್ನಡ ಪದ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಹ್ಯಾಮಿಲ್ಟನ್‌ ಬಾಯಲ್ಲಿ ಕನ್ನಡ ಪದವನ್ನು ಉಚ್ಚರಿಸುವ ಪ್ರಯತ್ನದಲ್ಲಿ ಯುವತಿಯೊಬ್ಬರು ಯಶಸ್ವಿಯಾಗಿದ್ದು, ಹ್ಯಾಮಿಲ್ಟನ್​ ‘ಒಳ್ಳೆಯದಾಗಲಿ’ ಎಂದು ಕನ್ನಡದಲ್ಲಿ ಹಾರೈಸಿರುವ ವಿಡಿಯೊ ಇದೀಗ ಎಲ್ಲೆಡೆ ವೈರಲ್(viral video) ಆಗುತ್ತಿದೆ.

Also Read

WPL 2024: ಆರ್ ಸಿಬಿಗೆ ಸತತ 2ನೇ ಸೋಲು, ಮುಂಬೈ ಇಂಡಿಯನ್ಸ್ ಗೆ 7 ವಿಕೆಟ್ ಭರ್ಜರಿ ಜಯ

ಯುವತಿಯೊಬ್ಬರು ಗುಡ್​ ಲಕ್ ಎಂಬ ಪದವನ್ನು 44 ವಿವಿಧ ಭಾಷೆಗಳಲ್ಲಿ ಬರೆದಿರುವ ಕಾರ್ಡ್​ವೊಂದನ್ನು ಹ್ಯಾಮಿಲ್ಟನ್​ಗೆ ತೊರಿಸಿದ್ದಾರೆ. ಇದರಲ್ಲಿ ಕನ್ನಡದಲ್ಲೂ ‘ಒಳ್ಳೆಯದಾಗಲಿ’ ಎಂಬ ಪದವನ್ನು ಬರೆಯಲಾಗಿದ್ದು. ಇದನ್ನು ಓದಲು ಸಾಧ್ಯವಾಗದ ಹ್ಯಾಮಿಲ್ಟನ್​ಗೆ ಈ ಯುವತಿ ಹೇಗೆ ಉಚ್ಚರಿಸಬೇಕು ಎಂದು ಹೇಳಿಕೊಟ್ಟಿದ್ದಾಳೆ.

Advertisement

Advertisement

ಆರಂಭದಲ್ಲಿ ತಡವರಿಸಿದ ಹ್ಯಾಮಿಲ್ಟನ್‌ ಅಂತಿಮವಾಗಿ ‘ಒಳ್ಳೆಯದಾಗಲಿ’ ಎಂದು ಹೇಳುವಲ್ಲಿ ಯಶಸ್ಸು ಕಂಡಿದ್ದಾರೆ. ಕೆಲ ಕನ್ನಡಿಗರು ಈ ವಿಡಿಯೊಗೆ ‘ನಮ್ಮ ಹುಡುಗ’ ಎಂದು ಕಮೆಂಟ್​ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement