ಮೀನಾ ತೂಗುದೀಪ ಶ್ರೀನಿವಾಸ್
ಮೀನಾ ತೂಗುದೀಪ ಶ್ರೀನಿವಾಸ್ 
ರಾಜ್ಯ

ಬಲಿಜ ಸಂಘ ಚುನಾವಣೆ: ನಟ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಗೆಲುವು

Vishwanath S

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರು ಬಲಿಜ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮೈಸೂರಿನ ಜಯನಗರದಲ್ಲಿ ಬಲಿಜ ಸಂಘದಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಮೀನಾ ಅವರು 375 ಮತಗಳ ಪೈಕಿ 221 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅತಿಹೆಚ್ಚು ಮತ ಪಡೆದು ಬಲಿಜ ಸಂಘಕ್ಕೆ ಆಯ್ಕೆಯಾಗಿದ್ದಾರೆ.

ಬಲಿಜ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮೀನಾ ತೂಗುದೀಪ ಶ್ರೀನಿವಾಸ್ ಅವರು ತಮಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

SCROLL FOR NEXT