ಸಾಂದರ್ಭಿಕ ಚಿತ್ರ  
ರಾಜ್ಯ

ಹಣ ಹೂಡಿಕೆ ಮಾಡಲು ದಂಪತಿಗೆ ವಂಚನೆ: ಹಣಕಾಸು ಸಂಸ್ಥೆ ಮ್ಯಾನೇಜರ್ ಗೆ 21 ಲಕ್ಷ ರೂ ದಂಡ, 5 ವರ್ಷ ಶಿಕ್ಷೆ

ಪೋಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ದಂಪತಿಯನ್ನು ವಂಚಿಸಿದ ಆರೋಪದ ಮೇಲೆ ಫಾಸ್ಟರ್‌ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಪಾಲುದಾರ ಮೊಹಮ್ಮದ್ ಇಧರೀಸ್‌ಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 21 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಬೆಂಗಳೂರು: ಪೋಂಜಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ದಂಪತಿಯನ್ನು ವಂಚಿಸಿದ ಆರೋಪದ ಮೇಲೆ ಫಾಸ್ಟರ್‌ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್‌ನ ಪಾಲುದಾರ ಮೊಹಮ್ಮದ್ ಇಧರೀಸ್‌ಗೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 21 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಐಪಿಸಿ ಸೆಕ್ಷನ್ 420 ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ (KPIDFE) ಕಾಯಿದೆ, 2004 ರ ಸೆಕ್ಷನ್ 9 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಇಧರೀಸ್ ನನ್ನು ದೋಷಿ ಎಂದು ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ತೀರ್ಪು ನೀಡಿದರು.

ದೂರುದಾರರಾದ ಅರುಣ್ ಕುಮಾರ್ ಅವರ ಪತ್ನಿ ಗೀತಾ ಅವರು 2013 ರಲ್ಲಿ ಆರ್‌ಟಿಜಿಎಸ್ ಮೂಲಕ 20 ಲಕ್ಷ ರೂಪಾಯಿಗಳನ್ನು ಇದರೀಸ್ ಅವರ ಖಾತೆಗೆ ವರ್ಗಾಯಿಸಿದ್ದರು. ಅವರು ಸಂಸ್ಥೆಯನ್ನು ನೋಂದಾಯಿಸುವ ಮೊದಲೇ ಅವರಿಗೆ ಶೇಕಡಾ 15ರ ಬಡ್ಡಿಯ ಭರವಸೆಯೊಂದಿಗೆ ಆಮಿಷವೊಡ್ಡಿ ವಂಚಿಸಿದ್ದರು.

ತರುವಾಯ, ಅವರು ತಮ್ಮ ಸಂಸ್ಥೆಯಾದ ಫಾಸ್ಟರ್‌ಫಿನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ‘ವೆಲ್ತ್ ಮ್ಯಾನೇಜ್‌ಮೆಂಟ್ ಅಗ್ರಿಮೆಂಟ್’ ನ್ನು ಸಹ ಮಾಡಿಕೊಂಡರು, ಅದರ ಮೂಲಕ ಅವರು ಲಾಭವನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ ಮಾಡಿಕೊಂಡ ಒಪ್ಪಂದದಂತೆ ನಡೆದುಕೊಳ್ಳಲಿಲ್ಲ.

ಸಾಮಾಜಿಕ-ಆರ್ಥಿಕ ಅಪರಾಧದ ಪ್ರಮುಖ ಅಂಶವು ಸಮಾಜಕ್ಕೆ ಹಾನಿಯನ್ನುಂಟುಮಾಡುವ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಗಮನಿಸಿದ ನ್ಯಾಯಾಲಯವು ಗೀತಾಗೆ ವಿಧಿಸಲಾದ 21 ಲಕ್ಷ ರೂಪಾಯಿಗಳ ದಂಡದ ಪೈಕಿ 20.50 ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡುವಂತೆ ಹೇಳಿದ್ದು ಉಳಿದ ಮೊತ್ತವನ್ನು ರಾಜ್ಯಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.

ಸಾರ್ವಜನಿಕರನ್ನು ವಂಚಿಸುವ ವಂಚಕರನ್ನು ಶಿಕ್ಷಿಸುವುದೇ ಕೆಪಿಐಡಿಎಫ್‌ಇ ಕಾಯ್ದೆಯ ಏಕೈಕ ಉದ್ದೇಶವಾಗಿದೆ ಎಂದು ಸಲ್ಲಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಅನುಪಮಾ, ಆರ್ಥಿಕ ಅಪರಾಧಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ವಾದಿಸಿದರು. ಪ್ರಾಸಿಕ್ಯೂಷನ್ ತನ್ನ ಅಪ್ರಾಮಾಣಿಕ ಉದ್ದೇಶವನ್ನು ಸಹ ಸ್ಥಾಪಿಸಿದೆ ಎಂದು ನ್ಯಾಯಾಲಯವು ಗಮನಿಸಿದೆ. ಆರಂಭದಲ್ಲಿ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಅದನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT