ಹುಬ್ಬಳ್ಳಿ: ನಗರದ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಆರೋಪಿ ವಿಶ್ವನಾಥ್ ಸಾವಂತ್ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ವಿಶ್ವ ಅಮಾಯಕ ಯುವತಿಯರನ್ನು ಶೋಷಣೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದಲ್ಲದೆ ಆರೋಪಿ ಕುಡುಕನಾಗಿದ್ದು, ಕಳ್ಳತನ ಮಾಡುತ್ತಿದ್ದ. ಬೈಕ್ ಕಳ್ಳತನ ಮಾಡುವ ತಂಡದಲ್ಲಿ ಈತನೂ ಬಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಯುವತಿಯರನ್ನು ಗುರಿಯಾಗಿಸಿಕೊಂಡು ಪ್ರೇಮದ ನಾಟಕವಾಡಿ ಅವರಿಂದ ಚಿನ್ನ, ಬೆಳ್ಳಿ ಮತ್ತು ನಗದನ್ನು ಬಲವಂತವಾಗಿ ಸುಲಿಗೆ ಮಾಡುತ್ತಿದ್ದನು. ವಿಶ್ವನ ಈ ಯಾವುದೇ ಪ್ರಯತ್ನಗಳಿಗೆ ಅಂಜಲಿ ಒಪ್ಪಿಲ್ಲ ಮತ್ತು ಆತನೊಂದಿಗೆ ಮೈಸೂರು ನಗರಕ್ಕೆ ಹೋಗುವ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಆತ ಆಕೆಯನ್ನು ಬರ್ಬರವಾಗಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಹಂತಕನ ಪತ್ತೆಗೆ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಒಂದು ತಂಡ ದಕ್ಷಿಣ ಕರ್ನಾಟಕ ಭಾಗದಲ್ಲಿ ಶೋಧ ನಡೆಸುತ್ತಿತ್ತು ಮತ್ತು ದಾವಣಗೆರೆಯಲ್ಲಿ ಆತನ ಶೋಧ ಆರಂಭಿಸಿದ ಇನ್ನೊಂದು ತಂಡ ಆರೋಪಿಯನ್ನು ಬಂಧಿಸಿದೆ.
ಅಂಜಲಿಯನ್ನು ಕೊಲೆ ಮಾಡುವ ಮೊದಲು ಹಂತಕ 15 ದಿನಗಳ ಕಾಲ ತನ್ನ ಫೋನ್ ಅನ್ನು ಬಳಸದಿದ್ದರಿಂದ ಪೊಲೀಸರಿಗೆ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
24 ವರ್ಷದ ವಿಶ್ವ ಅಂಜಲಿ ಅಂಬಿಗೇರ (20) ಅವರ ನಿವಾಸಕ್ಕೆ ಬುಧವಾರ ಮುಂಜಾನೆ 5.30ರ ಸುಮಾರಿಗೆ ಬಂದಿದ್ದಾನೆ. ಯುವತಿ ಪ್ರತಿಕ್ರಿಯಿಸುವ ಮೊದಲೇ ಅನೇಕ ಬಾರಿ ಇರಿದಿದ್ದಾನೆ. ಅಂಜಲಿಯನ್ನು ಮನೆಯೊಳಗೆಲ್ಲ ಎಳೆದಾಡಿತ ಆತ ಒದ್ದಿದ್ದಾನೆ ಮತ್ತು ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ.
ದಾಳಿಕೋರನನ್ನು ತಡೆಯಲು ಅಂಜಲಿಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಪ್ರಯತ್ನಗಳ ಹೊರತಾಗಿಯೂ, ಆತ ಆಕೆಯನ್ನು ಪರಾರಿಯಾಗಿದ್ದನು. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಘಟನೆ ನಡೆದಿದೆ.