ನಾಲ್ವರು ನೀರುಪಾಲು 
ರಾಜ್ಯ

ಬೆಳಗಾವಿ: ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರುಪಾಲು

ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬೆಳಗಾವಿ: ದೂದ್‌ಗಂಗಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಕಾಗಲ ತಾಲೂಕಿನ ಬಸ್ತವಾಡೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇಂದು ಬೆಳಗ್ಗೆ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಇಬ್ಬರು ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾರೆ. ಇವರನ್ನು ಕಾಪಾಡಲು ಹೋಗಿದ್ದಾರೆ. ಈ ವೇಳೆ ನಾಲ್ವರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರು ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಬಂದಿದ್ದರು ಎನ್ನಲಾಗಿದ್ದು, ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳಾಗಿದ್ದು, ಇಬ್ಬರು ಮಹಾರಾಷ್ಟ್ರದ ಮುರ್ಗುಡ್ ಗ್ರಾಮದವಾರಿದ್ದಾರೆ.

ಮೃತರನ್ನು ಬೆಳಗಾವಿಯ ಅಥಣಿಯ ರೇಷ್ಮಾ ದಿಲೀಪ್(34) ಮತ್ತು ಯಶ್ ದಿಲೀಪ್(17) ಹಾಗೂ ಮಹಾರಾಷ್ಟ್ರದ ಮುರ್ಗುಡ್ ಗ್ರಾಮದ ಜಿತೇಂದ್ರ ವಿಲಾಸ್ ಲೋಕ್ರೆ(36) ರುಕ್ದಿ ಗ್ರಾಮದ ಸವಿತಾ ಅಮರ್ ಕಾಂಬಳೆ(27) ಎಂದು ಗುರುತಿಸಲಾಗಿದೆ.

ಜಿತೇಂದ್ರ ವಿಲಾಸ್ ಲೋಕ್ರೆ, ಸವಿತಾ ಅಮರ್ ಕಾಂಬಳೆ, ರೇಷ್ಮಾ ದಿಲೀಪ್​​ ಮೃತದೇಹಗಳು ಪತ್ತೆಯಾಗಿದ್ದು, ಯಶ್ ದಿಲೀಪ್ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಈ ಸಂಬಂಧ ಕಾಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನನಗೆ ಸಾಯುವುದೊಂದೇ ದಾರಿ’: ಐಫೋನ್ EMI, 'ಮಹಾ' ದುರಂತ, ಇಡೀ ಕುಟುಂಬ ಬಲಿ

ಮಗನನ್ನು ರಕ್ಷಿಸಲು ಹೋಗಿ ಬೆಟ್ಟದಿಂದ ಕೆಳಗೆ ಬಿದ್ದ ತಂದೆ; ಇಬ್ಬರು ಇಲ್ಲದೆ ನಾನೇಕೆ ಅಂತ ತಾಯಿಯೂ ಆತ್ಮಹತ್ಯೆ, Video

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!

‘FIR ದಾಖಲಿಸಿದರೂ ಹೆದರಬೇಡಿ, NICE ರಸ್ತೆ ಟೋಲ್ ಕಟ್ಟಬೇಡಿ’: ಕೇಂದ್ರ ಸಚಿವ HD ಕುಮಾರಸ್ವಾಮಿ

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್