ಬೆಂಗಳೂರು: ಈ ವರ್ಷ ನೈಋತ್ಯ ಮತ್ತು ಈಶಾನ್ಯ ಮಾನ್ಸೂನ್‌ಗಳು ಕರ್ನಾಟಕಕ್ಕೆ ಒಲವು ತೋರುತ್ತಿರುವುದರಿಂದ ವಿದ್ಯುತ್‌ಗೆ ಬೇಡಿಕೆ ಕಡಿಮೆಯಾಗಿದೆ, ಆದರೆ ಜಲವಿದ್ಯುತ್ ಉತ್ಪಾದನೆ ಮಾತ್ರ ಕಡಿಮೆ ಆಗಿಲ್ಲ. ದೇಶಾದ್ಯಂತ ವಿದ್ಯುತ್ ಗೆ ಬೇಡಿಕೆ ಕಡಿಮೆ ಇರುವುದರಿಂದ, ಇಂಧನ ಇಲಾಖೆಯು ಹೆಚ್ಚುವರಿ ಇಂಧನ ಹೊಂದಿದ್ದರೂ ಅವರ ಗ್ರಿಡ್‌ಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ಕಡಿಮೆ ಬೇಡಿಕೆಯ ಕಾರಣ, ಇಂಧನ ಇಲಾಖೆಯು ಹೊಸದಾಗಿ ಪ್ರಾರಂಭಿಸಲಾದ ಯಲಹಂಕ ವಿದ್ಯುತ್ ಸ್ಥಾವರವನ್ನು ಸ್ಥಗಿತಗೊಳಿಸಿದೆ ಅದು 370 ಮೆಗಾವ್ಯಾಟ್ ಉತ್ಪಾದಿಸುತ್ತದೆ. ನಾವು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPCLcl) ನ ಎರಡು ಘಟಕಗಳು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (RTPS) ಎರಡು ಘಟಕಗಳು ಮತ್ತು ಇತರ ಘಟಕಗಳ ಕೆಲವು ಭಾಗಗಳನ್ನು ಸಹ ಸ್ಥಗಿತಗೊಳಿಸಿದ್ದೇವೆ.
ವಿದ್ಯುತ್ ಉತ್ಪಾದನೆಗೆ ಹೈಡಲ್ ಸಂಪನ್ಮೂಲಗಳ ಮೇಲೆ ಒತ್ತು ನೀಡುತ್ತಿರುವಾಗ, ಉಷ್ಣ ಸ್ಥಾವರಗಳನ್ನು ಬಳಸಲು ಸಾಧ್ಯವಿಲ್ಲ. ಬೇಡಿಕೆಯು ಯಾವಾಗ ಹಠಾತ್ತಾಗಿ ಏರುತ್ತದೆ ಎಂಬುದು ನಮಗೆ ತಿಳಿದಿಲ್ಲದ ಕಾರಣ ನಾವು ಉತ್ಪಾದನೆಯನ್ನು ಸ್ಥಿರವಾಗಿ ಇಡಬೇಕು ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯ ಲೋಡ್ ರವಾನೆ ಕೇಂದ್ರದ ಮಾಹಿತಿಯ ಪ್ರಕಾರ, ಅಕ್ಟೋಬರ್ 30 ರಂದು ಒಟ್ಟು 9865 ಮೆಗಾವ್ಯಾಟ್ ಉತ್ಪಾದನೆಯಲ್ಲಿ 2672 ಮೆಗಾವ್ಯಾಟ್ ಹೈಡ್ರೋ ಉತ್ಪಾದನೆಯಾಗಿದೆ.
ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಕೈಗಾರಿಕೆಗಳು ಮತ್ತು ಕಚೇರಿಗಳು ಹಬ್ಬದ ರಜೆಯಲ್ಲಿವೆ. ಭಾರತದಾದ್ಯಂತ, ಇತರ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿದೆ, ಆದ್ದರಿಂದ ನಾವು ಉತ್ಪಾದಿಸುವ ವಿದ್ಯುತ್ ನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಟ್ರೇಡ್ ಎನರ್ಜಿ ಎಕ್ಸ್ಚೇಂಜ್ ವಿವರಗಳನ್ನು ವಿವರಿಸಿದ ಅಧಿಕಾರಿ, ಅಕ್ಟೋಬರ್ 29 ರಂದು ಇಲಾಖೆಯು 0.049MU ನ್ನು ಮಾರಾಟ ಮಾಡಿತು. ಅಲ್ಲಿ ವಿದ್ಯುತ್ ನ್ನು ಪ್ರತಿ ಯೂನಿಟ್ ಗೆ 2.04 ರೂಪಾಯಿಗಳಾಗಿದೆ. ಪ್ರಸ್ತುತ ಇಂಧನ ಮಾರುಕಟ್ಟೆ ತುಂಬಾ ಕಳಪೆಯಾಗಿದೆ. ದರಗಳು ಪ್ರತಿ ಯೂನಿಟ್‌ಗೆ 3 ರೂಪಾಯಿಗಳಿಂದ 5 ರೂಪಾಯಿ ನಡುವೆ ಬದಲಾಗುತ್ತವೆ. ಪೀಕ್ ಅವರ್‌ನಲ್ಲಿ, ದರವು ಪ್ರತಿ ಯೂನಿಟ್‌ಗೆ 10 ರೂಪಾಯಿಗೆ ಏರಿಕೆಯಾಗುತ್ತದೆ. ಆದರೆ ಅದು 15-30 ನಿಮಿಷಗಳವರೆಗೆ ಇರುತ್ತದೆ. ಆದರೆ ಈ ಸಮಯದಲ್ಲಿ ನಮ್ಮ ಬೇಡಿಕೆಯೂ ಹೆಚ್ಚಿದ್ದು, ಉತ್ತಮ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿ ವಿವರಿಸಿದರು.
ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 29 ರಂದು, ಗರಿಷ್ಠ ಲೋಡ್ 229.19 ಮಿಲಿಯನ್ ಯೂನಿಟ್ (MU) ಆಗಿದ್ದರೆ, ಕಳೆದ ವರ್ಷ ಅದೇ ಸಮಯದಲ್ಲಿ ಇದು 271.46MU ಆಗಿತ್ತು. ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆಗೆ ಗರಿಷ್ಠ ಲೋಡ್ 11,877MW ಆಗಿದ್ದರೆ, ಕಳೆದ ವರ್ಷ ಇದೇ ಸಮಯದಲ್ಲಿ ಇದು 15,129MW ಆಗಿತ್ತು. ಅಕ್ಟೋಬರ್ 30 ರಂದು, ಬೆಳಗ್ಗೆ 11 ಗಂಟೆಗೆ, ಗರಿಷ್ಠ ಲೋಡ್ 11,200MW ಆಗಿತ್ತು. ಕಳೆದ ವರ್ಷ ಅದೇ ಸಮಯದಲ್ಲಿ, ಇದು 17,22ಮೆಗಾ ವ್ಯಾಟ್ ಆಗಿತ್ತು. ಈ ತಿಂಗಳು, ನಾವು ಕನಿಷ್ಠ 14,800ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯನ್ನು ನಿರೀಕ್ಷಿಸಿದ್ದೇವೆ, ಅದು ಸುಮಾರು 206 ಮೆಗಾ ವ್ಯಾಟ್ ಆಗಿದೆ, ಆದರೆ 204 ಮೆಗಾ ವ್ಯಾಟ್ ನ್ನು ಮಾತ್ರ ಪೂರೈಸಿದೆ ಎಂದರು.