ಹೈಡ್ರಾ ಕಮಿಷನರ್ ಎ ವಿ ರಂಗನಾಥ್ ನಿನ್ನೆ ಬೆಂಗಳೂರಿನಲ್ಲಿ ಪ್ರವಾಹ ತಗ್ಗಿಸುವ ಯೋಜನೆಗಳ ವಿವರಗಳನ್ನು ಆಲಿಸಿದರು.  
ರಾಜ್ಯ

ಬೆಂಗಳೂರಿನಲ್ಲಿ ಕೆರೆಗಳ ಪುನಃಶ್ಚೇತನ: ತಂತ್ರಗಳ ಕುರಿತು HYDRAA ಮುಖ್ಯಸ್ಥ ಮೆಚ್ಚುಗೆ

ವಿಪತ್ತು ನಿರ್ವಹಣೆ ಮತ್ತು ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆ ಕ್ರಮಗಳು ಉತ್ತಮವಾಗಿದೆ.

ಬೆಂಗಳೂರು: ಭಾರೀ ಮಳೆ ಬಂದಾಗ ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದೆ. ಪ್ರವಾಹವನ್ನು ತಗ್ಗಿಸುವಲ್ಲಿ, ಜಕ್ಕೂರು ಮತ್ತು ಯಲಹಂಕದಂತಹ ಪ್ರದೇಶಗಳಲ್ಲಿ ಕೆರೆಗಳ ಮರುಸ್ಥಾಪನೆಗೆ ಬೆಂಗಳೂರಿನ ಸ್ಥಿತಿಸ್ಥಾಪಕ ವಿಧಾನವು ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (HYDRAA) ಆಯುಕ್ತ ಎ ವಿ ರಂಗನಾಥ್ ಅವರಿಗೆ ಇಷ್ಟವಾಗಿದೆ.

ಹೈದರಾಬಾದ್‌ನಲ್ಲಿ ಕೆರೆಗಳು ಮತ್ತು ಚರಂಡಿಗಳ ಮೇಲಿನ ರಚನೆಗಳನ್ನು ಕೆಡವುದರ ಮೂಲಕ ಭೂಮಾಫಿಯಾ ಮತ್ತು ಅತಿಕ್ರಮಣದಾರರ ವಿರುದ್ಧ ಕಠಿಣ ಕ್ರಮಕೈಗೊಂಡಿರುವ ರಂಗನಾಥ್ ಅವರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ (KSNDMC) ಭೇಟಿ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಪ್ರವಾಹ ತಗ್ಗಿಸುವ ಯೋಜನೆಗಳ ವಿವರಗಳನ್ನು ಕೇಳಿದರು.

ಬೆಂಗಳೂರಿನಲ್ಲಿ ಕೆಲವು ಕೆರೆಗಳ ಪುನಶ್ಚೇತನ ಕೆಲಸ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಯಲ್ಲಿ ಕೆರೆಗಳು, ಉದ್ಯಾನವನಗಳು ಮತ್ತು ನಾಲೆಗಳ ಮೇಲಿನ ಅತಿಕ್ರಮಣವನ್ನು ಕೆಡವುದು ಮತ್ತು ತೆಗೆದುಹಾಕಿದ ನಂತರ, ಬೆಂಗಳೂರಿನ ಕೆರೆ ಸಂರಕ್ಷಣಾ ನಿರ್ವಹಣೆಯನ್ನು ಅನುಕರಿಸುವ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ವಿಪತ್ತು ನಿರ್ವಹಣೆ ಮತ್ತು ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆ ಕ್ರಮಗಳು ಉತ್ತಮವಾಗಿದೆ. ನಾವು ಯಲಹಂಕದ ಕೆಎಸ್ ಎನ್ ಡಿಎಂಸಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಬಳಸಿದ ವ್ಯವಸ್ಥೆಗಳು ಮತ್ತು ತಂತ್ರಜ್ಞಾನವನ್ನು ಅರ್ಥಮಾಡಿಕೊಂಡಿದ್ದೇವೆ, ಅದನ್ನು ಅನುಕರಿಸುತ್ತೇವೆ. ಇಲ್ಲಿನ ಕೆರೆ ಪುನಶ್ಚೇತನ ಕಾರ್ಯ ಶ್ಲಾಘನೀಯ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT