ಸಂಗ್ರಹ ಚಿತ್ರ 
ರಾಜ್ಯ

ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ: ಉದ್ಯೋಗ ಅರಸಿ ತೆರಳುವವರಿಗೆ ಇನ್ನು ಮುಂದೆ ಯಾವುದೇ ನಿರ್ಬಂಧವಿಲ್ಲ!

ಲಿಬಿಯಾ ಆಂತರಿಕ ಘರ್ಷಣೆಗಳಿಂದಾಗಿ ಭಾರತ ಸರ್ಕಾರವು 2016 ರಲ್ಲಿ ಲಿಬಿಯಾಕ್ಕೆ ಪ್ರಯಾಣವನ್ನು ನಿಷೇಧಿಸಿತ್ತು. ಆ ಸಮಯದಲ್ಲಿ ಲಿಬಿಯಾದಲ್ಲಿ ನೆಲೆಸಿದ್ದ ಭಾರತೀಯ ನಾಗರಿಕರನ್ನೂ ಕೂಡ ಸರ್ಕಾರ ಸ್ಥಳಾಂತರಿಸಿತ್ತು.

ಬೆಂಗಳೂರು: ಇಸಿಸ್ ಉಗ್ರರು ಮತ್ತು ಲಿಬಿಯಾ ಸರ್ಕಾರ ನಡುವಿನ ಆಂತರಿಕ ಕಲಹ ನಿಯಂತ್ರಣಕ್ಕೆ ಬಂದಿರುವುದರಿಂದ ಭಾರತೀಯ ವೀಸಾಗಳ ಮೇಲಿದ್ದ ನಿರ್ಬಂಧಕಾಜ್ಞೆಯನ್ನು ತೆರವುಗೊಳಿಸಲಾಗಿದ್ದು, ಇನ್ನು ಮುಂದೆ ಪ್ರವಾಸಿ (ವಿಸಿಟಿಂಗ್‌) ವೀಸಾ ಹೊರತುಪಡಿಸಿ ಉಳಿದ ಯಾವುದೇ ಮಾದರಿಯ ವೀಸಾ ಮೂಲಕ ಭಾರತೀಯರು ನೇರವಾಗಿ ಲಿಬಿಯಕ್ಕೆ ತೆರಳಬಹುದು,

ಲಿಬಿಯಾ ಆಂತರಿಕ ಘರ್ಷಣೆಗಳಿಂದಾಗಿ ಭಾರತ ಸರ್ಕಾರವು 2016 ರಲ್ಲಿ ಲಿಬಿಯಾಕ್ಕೆ ಪ್ರಯಾಣವನ್ನು ನಿಷೇಧಿಸಿತ್ತು. ಆ ಸಮಯದಲ್ಲಿ ಲಿಬಿಯಾದಲ್ಲಿ ನೆಲೆಸಿದ್ದ ಭಾರತೀಯ ನಾಗರಿಕರನ್ನೂ ಕೂಡ ಸರ್ಕಾರ ಸ್ಥಳಾಂತರಿಸಿತ್ತು. ಇದೀಗ 8 ವರ್ಷಗಳ ನಂತರ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು, 2011ರಲ್ಲಿ ಆಂತರಿಕ ರಾಜಕೀಯ ಸಂಘರ್ಷದಿಂದ 18 ಸಾವಿರಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕರೆತರಲಾಗಿತ್ತು. 2014ರಲ್ಲಿ ಐಎಸ್‌ ಉಗ್ರರು ಮತ್ತು ಸರ್ಕಾರದ ನಡುವಿನ ಕಾಳಗದಿಂದ ಇನ್ನೂ ನಾಲ್ಕು ಸಾವಿರ ಭಾರತಿಯರನ್ನು ವಾಪಸ್‌ ಕರೆ ತರಲಾಗಿತ್ತು. 2016ರಲ್ಲಿ ಸರ್ಕಾರ ಮತ್ತು ಉಗ್ರರ ಕಾಳಗದಲ್ಲಿ ಭಾರತ ಮೂಲದ ದಾದಿಯೊಬ್ಬರು ಮೃತಪಟ್ಟ ಕಾರಣ ಲಿಬಿಯಾ ಪ್ರವಾಸಕ್ಕೆ ಭಾರತ ಸರ್ಕಾರ ನಿರ್ಬಂಧ ವಿಧಿಸಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ಉದ್ಯೋಗ ನಿಮಿತ್ತ ಅಲ್ಲಿ ನೆಲಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಇತರ ಸಂಘಟನೆಗಳ ನಿರಂತರ ಪ್ರಯತ್ನದ ನಂತರ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ. ಮೂರು ತಿಂಗಳ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ನಿಷೇಧವನ್ನು ತೆಗೆದುಹಾಕಿದ್ದು, ಇದು ಭಾರತೀಯ ನಾಗರಿಕರಿಗೆ, ವಿಶೇಷವಾಗಿ ಕನ್ನಡಿಗರಿಗೆ ಸಂತಸವನ್ನು ತಂದಿದೆ.

ನಿಷೇಧವನ್ನು ಹೇರಿದ ನಂತರ ಲಿಬಿಯಾದಿಂದ ಸ್ಥಳಾಂತರಗೊಂಡ ಸಾಕಷ್ಟು ಜನರು ಉದ್ಯೋಗಗಳು ಸಿಗದೆ ತಮ್ಮ ಜೀವನವನ್ನು ಪುನರ್ನಿರ್ಮಿಸಿಕೊಳ್ಳಲು ಹೆಣಗಾಡಿದರು. ಲಿಬಿಯಾದಲ್ಲಿ ಪರಿಸ್ಥಿತಿ ಸ್ಥಿರವಾದ ನಂತರ, ಹಲವಾರು ಜನರು ಮಲೇಷ್ಯಾ ಮತ್ತು ಬಾಂಗ್ಲಾದೇಶದ ಮೂಲಕ ಲಿಬಿಯಾಕ್ಕೆ ಪ್ರಯಾಣಿಸಿದರು. ಆದರೆ, ಭಾರತದಿಂದ ನೇರವಾಗಿ ಪ್ರಯಾಣವನ್ನು ನಿಲ್ಲಿಸಲಾಯಿತು. ಈಗ ಆ ನಿಷೇಧವನ್ನು ತೆಗೆದು ಹಾಕಲಾಗಿದ್ದು, ಜನರು ಭಾರತದಿಂದ ನೇರವಾಗಿ ಲಿಬಿಯಾಕ್ಕೆ ಪ್ರಯಾಣಿಸಬಹುದು ಎಂದು ತಿಳಿಸಿದರು.

ಕರ್ನಾಟಕ ಮೂಲದ ಅನಿವಾಸಿ ಭಾರತೀಯ ಪೆಟ್ರೋಲಿಯಂ ಉತ್ಪನ್ನ ಕಂಪೆನಿಯ ಹಿರಿಯ ತಜ್ಞ ರಾಜರಾಂ ಮಾತನಾಡಿ, ಲಿಬಿಯಾಕ್ಕೆ ತೆರಳುವ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಲು ಸುಮಾರು ವರ್ಷಗಳಿಂದ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಡಾ.ಆರತಿ ಕೃಷ್ಣರವನ್ನು ಸಂಪರ್ಕಿಸಿ ಮನವಿ ಮಾಡಿದ ಒಂದು ತಿಂಗಳೊಳಗೆ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಿರುವುದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT