ಸೋಮಣ್ಣ- ಸಿದ್ದರಾಮಯ್ಯ 
ರಾಜ್ಯ

ತಪ್ಪು ಮಾಡಿಬಿಟ್ರಿ, ನನ್ನ ಮಾತು ಕೇಳಿದ್ರೆ ಇಷ್ಟೆಲ್ಲಾ ಆಗ್ತಿತ್ತಾ: ಸಿದ್ದು-ಸೋಮಣ್ಣ ಮುಖಾಮುಖಿ, ಮುಡಾ ಬಗ್ಗೆ ನಡೀತು ಆತ್ಮೀಯ ಚರ್ಚೆ..!

ರಾಜಾರಾಮ ಮೋಹನ್ ರಾಯ್ ರಸ್ತೆಯಲ್ಲಿರುವ ರಮಣಶ್ರೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಎದುರಾದ ಉಭಯ ನಾಯಕರು ಕುಶಲೋಪರಿ ವಿಚಾರಿಸಿದರು.

ಬೆಂಗಳೂರು: ತಪ್ಪು ಮಾಡಿಬಿಟ್ಟಿರಿ. ನಾನು ಹೇಳಿದಾಗಲೇ ಆ ಸೈಟ್ ಅಂದೇ ವಾಪಸ್ ಕೊಟ್ಟಿದ್ದರೆ ಇಷ್ಟೆಲ್ಲಾ ಆಗ್ತಿರಲಿಲ್ಲ. ಅವತ್ತೇ ತಪ್ಪು ಸರಿ ಮಾಡಿದ್ದರೆ ಇನ್ನೂ ಹೈ ಕ್ಲಾಸ್ ಇರ್ತಿತ್ತು. ಹೀಗೆಂದು ಮುಡಾ ವಿವಾದದ ಕುರಿತು ಕೇಂದ್ರ ಸಚಿವ.ವಿ.ಸೋಮಣ್ಣ ಸಿದ್ದರಾಮಯ್ಯ ಅವರಿಗೆ ಪ್ರೀತಿಯಿಂದಲೇ ಸಲಹೆ ನೀಡಿದರು. ಇದಕ್ಕೆ ಅಷ್ಟೇ ಪ್ರೀತಿಯಿಂದ ಗದರಿದ ಸಿದ್ದರಾಮಯ್ಯ, ಏಯ್ ಗೊತ್ತಿಲ್ಲದೆ ಏನೆಲ್ಲಾ ಮಾತನಾಡ್ತೀಯಾ? ಹಾಗಲ್ಲಾ. ನನ್ನ ಮಾತು ಕೇಳು ಎಂದು ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಿದರು.

ರಾಜಾರಾಮ ಮೋಹನ್ ರಾಯ್ ರಸ್ತೆಯಲ್ಲಿರುವ ರಮಣಶ್ರೀ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಎದುರಾದ ಉಭಯ ನಾಯಕರು ಕುಶಲೋಪರಿ ವಿಚಾರಿಸಿದರು.

ಈ ವೇಳೆ ಸೋಮಣ್ಣ ಅವರು, ಅದೇ ಸೈಟನ್ನು ವಾಪಸ್ ಮಾಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ನಾನು ಎದುರುಗಡೆ ಹೇಳುವವನು. ಬೇರೆಯವರಂತೆ ಹಿಂದೆ ಕುತಂತ್ರ ಮಾಡಿ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ಹೇಳಿದರು. ಇದಕ್ಕೆ ಪ್ರೀತಿಯಿಂದಲೇ ಗದರಿದ ಸಿದ್ದರಾಮಯ್ಯ ಅವರು, ಲ್ಯಾಂಡ್ ಗ್ರಾಬಿಂಗ್ ಆ್ಯಕ್ಟ್ ಬಗ್ಗೆ ಮಾಹಿತಿ ನೀಡಿ, ಯಾವ ರೀತಿಯಲ್ಲಿ ಮುಡಾದಿಂದ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿದೆ ಎಂದು ವಿವರಿಸಿದರು.

ಸದನದಲ್ಲಿ ಏಕೆ ಇಷ್ಟು ಕೋಟಿ ಅಲ್ಲ, ಅಷ್ಟು ಕೋಟಿ ಎಂದು ಏಕೆ ಹೇಳಿದ್ರಿ. ನಾವು ಹೇಳಿದ್ವಾ ನಿಮಗೆ ಹೇಳೋಕೆ? ನಾನೇನು ಸದನದಲ್ಲಿ ಇದ್ನಾ? ಎಂದೂ ಪ್ರೀತಿಯಿಂದಲೇ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಲ್ಲಿ ಪ್ರಕರಣದ ದಾಖಲಾಗಿದೆ. ಅಲ್ಲದೆ. ಇಡಿ ಕೂಡಾ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ.

ಈಗಾಗಲೇ ಲೋಕಾಯುಕ್ತ ವಿಚಾರಣೆಗೆ ಸಿಎಂ ಸಿದ್ದರಾಮಯ್ಯ ಹಾಜರಾಗಿದ್ದರು. ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ 14 ಸೈಟ್‌ಗಳನ್ನು ಮುಡಾಗೆ ವಾಪಸ್ ಕೊಟ್ಟಿದ್ದಾರೆ.

ಬಸವರಾಜ ಬೊಮ್ಮಾಯಿ ಹೆಗಲ ಮೇಲೆ ಕೈ ಹಾಕಿ ಸಿದ್ದರಾಮಯ್ಯ ಆತ್ಮೀಯ ಮಾತು

ಇದೇ ವೇಳೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ವೇದಿಕೆ ಹಂಚಿಕೊಂಡು ಶುಭ ಹಾರೈಸಿದರು. ಗೊ.ರು. ಚನ್ನಬಸಪ್ಪ ಅವರಿಗೆ ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸಿದರು.

ಗೊತ್ತಿದ್ದೋ ಗೊತ್ತಿಲ್ಲದೆಯೋ ಮೌಢ್ಯ, ಕಂದಾಚಾರಗಳನ್ನು ಆಚರಿಸುತ್ತೇವೆ. ಇದನ್ನು ಬಿಟ್ಟಾಗ ಮಾತ್ರ ಬಸವಾದಿ ಶರಣರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನಗಳಾಗಲಿ. ನಾನು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ನಿಜವಾಗಿ ಮಾಡುತ್ತಿದ್ದೇನೆ. ಅಸಮಾನತೆ ಹೋಗಬೇಕಾದರೆ ಬದಲಾವಣೆ ಅಗತ್ಯ. ಮುಂದಿನ ಬಜೆಟ್ ನಲ್ಲಿ ಶರಣ ಸಾಹಿತ್ಯ ಷರಿಷತ್ತು ಮತ್ತು ಬಸವ ಪೀಠಕ್ಕೆ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ನನಗೂ 100 ವರ್ಷ ಬದುಕಬೇಕೆಂಬ ಆಸೆಯಿದೆ, ಆದರೆ, ನಾನು ಮತ್ತು ಬಸವರಾಜ ಬೊಮ್ಮಾಯಿ ಮಧುಮೇಹಿಗಳಾಗಿರುವುದರಿಂದ ನಮ್ಮ ಒತ್ತಡದ ವೇಳಾಪಟ್ಟಿಯನ್ನು ಗಮನಿಸಿದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಅಣಿಮುತ್ತ-ಭಾಗ 14 ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT