ಅಲ್ತಾಫ್ ಪಾಷಾ 
ರಾಜ್ಯ

ಮಂಡ್ಯದ ಮೆಕ್ಯಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿ, ಕೇರಳ ಲಾಟರಿಯಲ್ಲಿ 25 ಕೋಟಿ ರೂ. ಬಂಪರ್ ಬಹುಮಾನ!

ನಾನು ಸುಮಾರು 15 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ. ಅಂತಿಮವಾಗಿ ನಾನು ಗೆದ್ದಿದ್ದೇನೆ ಎಂದು ಅಲ್ತಾಫ್ ಪಾಷಾ ಹೇಳಿದ್ದಾರೆ.

ಬೆಂಗಳೂರು: ಮಂಡ್ಯದ ಬೈಕ್ ಮೆಕ್ಯಾನಿಕ್​ ಒಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದು, ಈ ವರ್ಷ ಕೇರಳದ ತಿರುವೋಣಂ ಬಂಪರ್ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿಯಾದ ಅಲ್ತಾಫ್ ಪಾಷಾ ಅವರು ಕೇರಳ‌ದ ತಿರುವೋಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದು ಬೀಗಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂಪಾಯಿ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ ಕೋಟಿ ಗೆದ್ದಿದ್ದಾರೆ.

ನಾನು ಸುಮಾರು 15 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ. ಅಂತಿಮವಾಗಿ ನಾನು ಗೆದ್ದಿದ್ದೇನೆ ಎಂದು ಅಲ್ತಾಫ್ ಗುರುವಾರ ವಯನಾಡಿನ ಕಲ್ಪೆಟ್ಟಾದಲ್ಲಿ ಪಿಟಿಐ ಜೊತೆ ಸಂತೋಷ ಹಂಚಿಕೊಂಡಿದ್ದಾರೆ.

ಅಲ್ತಾಫ್ ಅವರು ತಮ್ಮ ಲಾಟರಿ ಟಿಕೆಟ್ ನ ಬಹುಮಾನ ಪಡೆಯಲು ಮತ್ತು ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ವಯನಾಡ್‌ಗೆ ತೆರಳಿದ್ದಾರೆ.

ನಾನು ಸಾಮಾನ್ಯವಾಗಿ ಮೀನಂಗಡಿಯಲ್ಲಿ ವಾಸಿಸುವ ತನ್ನ ಬಾಲ್ಯದ ಗೆಳೆಯನನ್ನು ಭೇಟಿ ಮಾಡಲು ವಯನಾಡ್‌ಗೆ ಹೋಗುತ್ತಿದ್ದೆ ಮತ್ತು ಅವರನ್ನು ಭೇಟಿಯಾದಾಗಲೆಲ್ಲ ನಾನು ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ ಅಲ್ತಾಫ್ ಹೇಳಿದ್ದಾರೆ.

ತಿರುವನಂತಪುರಂನ ಗೋರ್ಕಿ ಭವನದಲ್ಲಿ ಬುಧವಾರ ನಡೆದ ಡ್ರಾದಲ್ಲಿ, ವಯನಾಡಿನ ಪನಮರಮ್‌ನಲ್ಲಿರುವ ಎಸ್‌ಜೆ ಲಕ್ಕಿ ಸೆಂಟರ್ ಮಾರಾಟ ಮಾಡಿದ ವಿಜೇತ ಸಂಖ್ಯೆ, ಟಿಜಿ 43422 ಅನ್ನು ಆಯ್ಕೆ ಮಾಡಲಾಯಿತು.

ಎಲ್ಲಾ ತೆರಿಗೆ ಕಡಿತದ ನಂತರ, ಬಂಪರ್ ಬಹುಮಾನ ವಿಜೇತರು ಕೈಗೆ ಸುಮಾರು 13 ಕೋಟಿ ರೂಪಾಯಿ ಸಿಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಮೃತಪಟ್ಟ ಎಲ್ಲಾ ಏಳು ಮಂದಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ-Video

ಜಾರ್ಖಂಡ್‌ ಸಮೀಪ ಚಾತ್ರಾದಲ್ಲಿ ಪತನಗೊಂಡ ರಾಂಚಿ–ದೆಹಲಿ ಏರ್ ಆಂಬ್ಯುಲೆನ್ಸ್: ಎಲ್ಲಾ 7 ಮಂದಿ ಸಾವು-Video

CM ಪಟ್ಟ ಜಟಾಪಟಿ: ಮತ್ತಷ್ಟು ಹರಿತವಾಯ್ತು ದಲಿತ ಸಿಎಂ ಅಸ್ತ್ರ, DKS ವಿರುದ್ಧ ಸಿದ್ದು ಬಣ ಪ್ರತಿತಂತ್ರ..!

ರಂಜಾನ್, ಹೋಳಿ ಹಬ್ಬ: ಶಾಂತಿ ಕದಡಿದರೆ ಕಠಿಣ ಕ್ರಮ, ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ

'ನಾಚಿಕೆ ಏನೆಂದು ನಿಮಗೆ ನಾನು ಹೇಳುತ್ತೇನೆ, ಕೇಳಿಸಿಕೊಳ್ಳಿ ಮೋದಿಯವರೇ', ಎಪ್ಸ್ಟೀನ್ ಫೈಲ್, India-US trade ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ-Video

SCROLL FOR NEXT