ಮಗುವನ್ನು ಕೊಂದ ತಾಯಿ (ಸಾಂದರ್ಭಿಕ ಚಿತ್ರ) 
ರಾಜ್ಯ

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಹೆತ್ತ ಮಕ್ಕಳನ್ನೇ ಕೊಂದ ತಾಯಿ!

ಆರೋಪಿ ಮಹಿಳೆ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್''ನ ಎಕೆ ಕಾಲೋನಿ ವಾಸಿ ಶಿವು ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಕಳೆದ ಜುಲೈ.30ರಂದು ಸ್ವೀಟಿ ಪತಿ ಶವು ಅವರನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಪ್ರಿಯಕರನೊಂದಿಗೆ ಸೇರಿ ತಾಯಿಯೇ ಹೆತ್ತ ಮಕ್ಕಳನ್ನು ಹತ್ಯೆ ಮಾಡಿರುವ ಘಟನೆಯೊಂದು ರಾಮನಗರದ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹತ್ಯೆಯಾದ ಮಕ್ಕಳನ್ನು ಕಬಿಲಾ (3) ಮತ್ತು 11 ತಿಂಗಳ ಮಗು ಕಬೀರನ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳಾದ ಸ್ವೀಟಿ (24), ಮನೆಕೆಲಸಗಾರ್ತಿ ಮತ್ತು ಆಕೆಯ ಪ್ರಿಯಕರ ಗ್ರೆಗೊರಿ ಫ್ರಾನ್ಸಿಸ್ (27)ನನ್ನು ಬಂಧನಕ್ಕಕೊಳಪಡಿಸಿದ್ದಾರೆ.

ಆರೋಪಿ ಮಹಿಳೆ ಸ್ವೀಟಿಗೆ ಬೆಂಗಳೂರಿನ ಟ್ಯಾನಿ ರೋಡ್''ನ ಎಕೆ ಕಾಲೋನಿ ವಾಸಿ ಶಿವು ಎಂಬುವವರ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿತ್ತು. ಕಳೆದ ಜುಲೈ.30ರಂದು ಸ್ವೀಟಿ ಪತಿ ಶವು ಅವರನ್ನು ಬಿಟ್ಟು ಮಕ್ಕಳೊಂದಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. 1.5 ತಿಂಗಳ ಬಳಿಕ ಒಬ್ಬಳೆ ಮನೆಗೆ ಹಿಂತಿರುಗಿದ ಸ್ವೀಟಿ, ಮಕ್ಕಳನ್ನು ಹಾಸ್ಟೆನಲ್ಲಿ ಇರಿಸಿದ್ದೀನಿ ಎಂದು ಹೇಳಿದ್ದಳು. ಮನೆಯಿಂದ ಹೋಗಿದ್ದೇಕೆಂದು ಪ್ರಶ್ನಿಸಿದಾಗ ಬ್ಯಾಂಕಿನಟ್ಟಿಲ್ಲ ಹಣ ಖರ್ಚು ಮಾಡಿದ್ದೇನೆ. ನೀವು ಏನಾದರೂ ಮಾಡುತ್ತೀರಿ ಎಂಬ ಭಯದಿಂದ ರಾಮನಗರಕ್ಕೆ ಹೋಗಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದ್ದಾಳೆ. ಬಳಿಕ ಶಿವು ಅವರು ಮಕ್ಕಳನ್ನು ಮನೆಗೆ ಕರೆತಂದಿದ್ದಾರೆ.

ಈ ನಡುವೆ ಸ್ವೀಟಿಯ ಬ್ಯಾಗ್‌ನಲ್ಲಿ ಜಾರ್ಜ್‌ ಪ್ರಾನ್ಸಿಸ್‌ ಎಂಬುವನ ಆಧಾರ್‌ ಕಾರ್ಡ್‌ ಸಿಕ್ಕಿದ್ದು, ಆಧಾರ್‌ ನಂಬರ್‌ಗೆ ಕರೆ ಮಾಡಿದಾಗ ಆತ ಸ್ವೀಟಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಮತ್ತೆ ಆ.19 ರಂದು ಮಹಿಳೆ ಸ್ವೀಟಿ ಮಕ್ಕಳ ಜತೆ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅ.12 ರಂದು ಸ್ವೀಟಿ ರಾಮನಗರದಲ್ಲಿ ಇರುವುದಾಗಿ ಮಾಹಿತಿ ತಿಳಿದ ಆಕೆಯ ಪತಿ ಶಿವು ,ರಾಮನಗರಕ್ಕೆ ಬಂದು ವಿಚಾರಿಸಿದ್ದಾರೆ. ಈ ವೇಳೆ ತನ್ನ ಪತ್ನಿ ಇಬ್ಬರು ಎರಡು ಮಕ್ಕಳೊಂದಿಗೆ ಇಲ್ಲೇ ಇದ್ದರು ಎಂದು ತಿಳಿಸಿದ ಸ್ಥಳೀಯರು, ಕೆಲ ದಿನಗಳ ಹಿಂದೆ ಮಕ್ಕಳು ಸಾವಿಗೀಡಾದವು ಎಂದು ಹೇಳಿದ್ದಾರೆ.

ಬಳಿಕ ಸ್ಮಶಾನಕ್ಕೆ ಬಂದು ವಿಚಾರಿಸಿದಾಗ ಎರಡೂ ಮಕ್ಕಳು ಅನಾರೋಗ್ಯದಿಂದ ಮೃತಪಟ್ಟಿವೆ ಎಂದು ಹೇಳಿ ಮಕ್ಕಳ ಶವ ಸಂಸ್ಕಾರ ಮಾಡಿದ್ದರು ಎಂದು ತಿಳಿಸಿದ್ದಾರೆ.

ಅಕ್ಟೋಬರ್‌ 1 ರಂದು ಒಂದು ಮಗು ಅಕ್ಟೋಬರ್ 7 ರಂದು ಮತ್ತೊಂದು ಮಗುವನ್ನು ಇಬ್ಬರು ಬಂದು ಹೂತಿದ್ದಾರೆ ಎಂದು ವಿಡಿಯೋ ಮತ್ತು ಪೋಟೊ ತೋರಿಸಿದ್ದಾರೆ. ಈ ಸಂಬಂಧ ಸ್ವೀಟಿ ಮತ್ತು ಜಾರ್ಜ್‌ ಪ್ರಾನ್ಸಿಸ್‌ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಐಜೂರು ಠಾಣೆ ಪೊಲೀಸರು ಆರೋಪಿಗಳ ಫೋಟೋ ಆಧರಿಸಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದೀಗ ಪೊಲೀಸರು ಮಕ್ಕಳ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದೀಗ ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ