ಸಾಂದರ್ಭಿಕ ಚಿತ್ರ 
ರಾಜ್ಯ

ಶಿಕ್ಷಕರ ದಿನಾಚರಣೆ: 31 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ; ಪಟ್ಟಿ ಬಿಡುಗಡೆ ಮಾಡಿದ Education department

ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಶಿಕ್ಷಕರ ಪಟ್ಟಿ ಬಿಡುಗಡೆಯಾಗಿದ್ದು ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ 25 ಸಾವಿರ ನಗದು ನೀಡಿ, ಗೌರವಿಸಲಾಗುತ್ತದೆ.

ಬೆಂಗಳೂರು: ಪ್ರಾಥಮಿಕ ಶಾಲೆಗಳ 20 ಹಾಗೂ ಪ್ರೌಢಶಾಲೆಗಳ 11 ಶಿಕ್ಷಕರನ್ನು 2024–25ನೇ ಸಾಲಿನ ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಶಿಕ್ಷಕರ ಪಟ್ಟಿ ಬಿಡುಗಡೆಯಾಗಿದ್ದು ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ 25 ಸಾವಿರ ನಗದು ನೀಡಿ, ಗೌರವಿಸಲಾಗುತ್ತೆ.

ಶಿಕ್ಷಕರ ಪಟ್ಟಿ ಈ ಕೆಳಗಿನಂತಿದೆ.

ಚಿಕ್ಕೋಡಿ ಉಳ್ಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ, ಕಲಬುರಗಿ ಜಿಲ್ಲೆ ಭೂಸಣಗಿಯ ಮಲ್ಲಿಕಾರ್ಜುನ ಎಸ್‌. ಸಿರಸಿಗಿ, ದಾವಣಗೆರೆ ಜಿಲ್ಲೆ ಹಿಂಡಸಘಟ್ಟ ಕ್ಯಾಂಪ್‌ನ ಬಿ. ಅರುಣ್‌ಕುಮಾರ್, ಮೈಸೂರು ಜಿಲ್ಲೆ ಹಿನಕಲ್‌ನ ಕೆ.ಎಸ್‌. ಮಧುಸೂದನ್‌, ಬೆಳಗಾವಿ ಜಿಲ್ಲೆ ಅಂಬೇವಾಡಿಯ ಅಸ್ಮಾ ಇಸ್ಮಾಯಿಲ್‌, ದಕ್ಷಿಣ ಕನ್ನಡದ ನೀರ್ಕೆರೆ ಮೂಡಬಿದ್ರಿಯ ಕೆ. ಯಮುನಾ, ಹಾವೇರಿ ಜಿಲ್ಲೆಯ ಜಮೀರ್‌ ಅಬ್ದುಲ್‌, ಬೆಂಗಳೂರು ದಕ್ಷಿಣ ಜಿಲ್ಲೆಯ ಚಂದಾಪುರದ ಜಿ. ರಂಗನಾಥ, ಚಿಕ್ಕಬಳ್ಳಾಪುರ ಜಿಲ್ಲೆಯ ಇನಮಿಂಚೇನಹಳ್ಳಿಯ ಸುಶೀಲಮ್ಮ, ಮಧುಗಿರಿಯ ಬಸವನಹಳ್ಳಿಯ ಎಸ್‌.ವಿ. ರಮೇಶ್‌, ಧಾರವಾಡ ಜಿಲ್ಲೆ ಹಳೇಹುಬ್ಬಳ್ಳಿಯ ಹನುಮಂತಪ್ಪ ಎಂ. ಕುಂದರಗಿ, ಚಿತ್ರದುರ್ಗ ಜಿಲ್ಲೆ ಹೊಸಹಟ್ಟಿಯ ಆರ್‌.ಟಿ. ಪರಮೇಶ್ವರಪ್ಪ, ಶಿರಸಿ ಜೋಗೇಶ್ವರ ಹಳ್ಳದ ರಾಮಚಂದ್ರ ಶೇಷಾಜಪ್ಪ ಕಲಾಲ, ಶಿವಮೊಗ್ಗ ಗುತ್ಯಪ್ಪ ಕಾಲೊನಿಯ ಎಂ. ಭಾಗೀರಥಿ, ವಿಜಯನಗರ ಜಿಲ್ಲೆ ಹಿರೇಕೊಳಚಿಯ ಎಲ್‌. ಮಧುನಾಯ್ಕ, ರಾಮನಗರ ಜಿಲ್ಲೆ ಅರಳಾಳುಸಂದ್ರದ ಪಿ. ಸುರೇಶ, ಯಾದಗಿರಿ ಜಿಲ್ಲೆ ಬಸ್ಸಾಪುರದ ನೀಲಪ್ಪ ಎಸ್. ತೆಗ್ಗಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನೆಮಡಿಯ ರಾಘವೇಂದ್ರ ಎಸ್. ಮಡಿವಾಳ, ದೊಡ್ಡಬಳ್ಳಾಪುರದ ಬೀಡಿಕೆರೆಯ ಎಚ್‌.ಎಂ. ಮಂಗಳಕುಮಾರಿ, ಗದಗ ಜಿಲ್ಲೆ ಬಸಾಪುರದ ರತ್ನಾಬಾಯಿ.

ಪ್ರೌಢಶಾಲಾ ಶಿಕ್ಷಕರು:

ಚಿಕ್ಕಮಗಳೂರು ಜಿಲ್ಲೆ ಲೋಕನಾಥಪುರದ ಆರ್‌.ಡಿ.ರವೀಂದ್ರ, ಬೆಂಗಳೂರು ಗ್ರಾಮಾಂತರದ ಟಿ. ಬೇಗೂರಿನ ಟಿ.ಕೆ. ರವಿಕುಮಾರ್, ಉತ್ತರ ಕನ್ನಡ ಹಿರೇಗುತ್ತಿಯ ಮಹಾದೇವ ಬೊಮ್ಮಗೌಡ, ಶಿವಮೊಗ್ಗ ಜಿಲ್ಲೆ ಹೊಸೂರು–ಗುಡ್ಡೆಕೇರಿಯ ಟಿ. ವೀರೇಶ, ಧಾರವಾಡ ಜಿಲ್ಲೆ ಇಂಗಳಹಳ್ಳಿಯ ಕಳಕ ಮಲ್ಲೇಶ ಪಟ್ಟಣಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆಯ ನೆಲಗದರಹಳ್ಳಿಯ ಎಸ್‌. ಶ್ಯಾಮಲಾ, ಉಡುಪಿ ಜಿಲ್ಲೆ ರಂಜಾಳದ ವಿನಾಯಕ ನಾಯ್ಕ, ಬೆಂಗಳೂರು ದಕ್ಷಿಣ ಜಿಲ್ಲೆ ಕೋನಪ್ಪನ ಅಗ್ರಹಾರದ ಸಿ. ಪದ್ಮಾವತಿ, ವಿಜಯಪುರ ಜಿಲ್ಲೆ ನಾದ ಕೆ.ಡಿ.ಯ ಶಶಿಕಲಾ ಲಕ್ಷ್ಮಣ ಬಡಿಗೇರ, ಚಿಕ್ಕಬಳ್ಳಾಪುರ ಜಿಲ್ಲೆ ಹಂಪಸಂದ್ರದ ಹರೀಶ್‌ ರಾಜ ಅರಸ್‌, ದಕ್ಷಿಣ ಕನ್ನಡದ ಗುರುವಾಯನಕೆರೆಯ ಚಿತ್ರಕಲಾ ಶಿಕ್ಷಕ ಕೆ. ವಿಶ್ವನಾಥ ಗೌಡ ಅವರುಗಳು ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT