ಪ್ರಾತಿನಿಧಿಕ ಚಿತ್ರ online desk
ರಾಜ್ಯ

Cyber Crime: ನಕಲಿ ಕೋರ್ಟ್ ರೋಮ್; ವಿಚಾರಣೆ ನೆಪದಲ್ಲಿ MNC ಹಿರಿಯ ಅಧಿಕಾರಿಗೆ 59 ಲಕ್ಷ ರೂ ವಂಚನೆ!

ಸಂತ್ರಸ್ತ ವ್ಯಕ್ತಿ ಸಲ್ಲಿಸಿರುವ ದೂರಿನ ಪ್ರಕಾರ ಆ ವ್ಯಕ್ತಿಗೆ ಸೆ.12 ರಂದು ವಿಡಿಯೋ ಕರೆ ಬಂದಿತ್ತು. ಕರೆಯಲ್ಲಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡ ನಿಮ್ಮ ಮೊಬೈಲ್ ನಂಬರ್ ನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಬೆದರಿಸಿದ್ದಾರೆ.

ಬೆಂಗಳೂರು: ಅಕ್ರಮ ಹಣ ವರ್ಗಾವಣೆಗೆ ನಿಮ್ಮ ಕೆವೈಸಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ನಂಬಿಸಿ ಬಹು ರಾಷ್ಟ್ರೀಯ ಸಂಸ್ಥೆಯೊಂದರ ಹಿರಿಯ ಅಧಿಕಾರಿಗೆ 59 ಲಕ್ಷ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

59 ವರ್ಷದ ಸಂತ್ರಸ್ತ ವ್ಯಕ್ತಿಯನ್ನು ವಂಚಿಸಲು, ವಿಡಿಯೋ ಕಾಲ್ ನಲ್ಲಿ ನ್ಯಾಯಾಧೀಶರಿರುವ ನಕಲಿ ಕೋರ್ಟ್ ರೂಮ್ ಕಲಾಪವನ್ನೂ ತೋರಿಸಲಾಗಿದ್ದು, ಬ್ಯಾಂಕ್ ಖಾತೆಯಿಂದ 59 ಲಕ್ಷ ರೂಪಾಯಿ ವರ್ಗಾವಣೆ ಮಾಡುವವರೆಗೂ ಆತನನ್ನು ರಾತ್ರಿ ಇಡೀ ಆನ್ ಲೈನ್ ಮೂಲಕ ಕಣ್ಗಾವಲಿನಲ್ಲಿ ಇರಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಂತ್ರಸ್ತ ವ್ಯಕ್ತಿ ಸಲ್ಲಿಸಿರುವ ದೂರಿನ ಪ್ರಕಾರ ಆ ವ್ಯಕ್ತಿಗೆ ಸೆ.12 ರಂದು ವಿಡಿಯೋ ಕರೆ ಬಂದಿತ್ತು. ಕರೆಯಲ್ಲಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡ ನಿಮ್ಮ ಮೊಬೈಲ್ ನಂಬರ್ ನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಬೆದರಿಸಿದ್ದಾರೆ. ಅಷ್ಟೇ ಅಲ್ಲದೇ 9ನ್ನು ಒತ್ತುವಂತೆ ನನ್ನನ್ನು ಕೇಳಿದರು. ನಾನು 9ನ್ನು ಡಯಲ್ ಮಾಡಿದಾಗ, ನನ್ನ ಕರೆಯನ್ನು ಡೈವರ್ಟ್ ಮಾಡಲಾಯಿತು" ಎಂದು ದೂರುದಾರರು ಹೇಳಿದ್ದಾರೆ.

ನಂತರ ನನ್ನ ಕರೆಯನ್ನು ಮುಂಬೈ ಮೂಲದ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಸಂಪರ್ಕಿಸಲಾಯಿತು ಮತ್ತು ಆ ಅಧಿಕಾರಿ, ಸಂತ್ರಸ್ತ ವ್ಯಕ್ತಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಯನ್ನು ತೆರೆಯಲು ಬಳಸಲಾಗಿದೆ ಆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ಈ ಬಳಿಕ ನನಗೆ ಕರೆ ಮಾಡಿದವರು ಸಿಬಿಐ ಅಧಿಕಾರಿ ಎಂದು ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿಸಿದ್ದರು. ಬಳಿಕ ನಕಲಿ "ಕೋರ್ಟ್" ಕಲಾಪಕ್ಕೆ ಆನ್ ಲೈನ್ ಮೂಲಕ ಹಾಜರು ಪಡಿಸಿ, ಅಲ್ಲಿ ವಿಚಾರಣೆಯ ಸಮಯದಲ್ಲಿ ಎಫ್ಐಆರ್ ಪ್ರಕಾರ, ಫಿಕ್ಸೆಡ್ ಡೆಪಾಸಿಟ್, ಬ್ಯಾಂಕ್ ಖಾತೆ ಮತ್ತು ಮ್ಯೂಚುವಲ್ ಫಂಡ್‌ಗಳು ಸೇರಿದಂತೆ ಎಲ್ಲಾ ವ್ಯಕ್ತಿಯ ಹಣವನ್ನು ವರ್ಗಾಯಿಸಲು "ಆದೇಶ" ಪ್ರಕಟಿಸಲಾಯಿತು.

ಒತ್ತಡದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ವಹಿವಾಟುಗಳಲ್ಲಿ 59 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದೆ ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾರೆ. ಬಳಿಕ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಇದು ವಂಚನೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT