ಸಾಂದರ್ಭಿಕ ಚಿತ್ರ 
ರಾಜ್ಯ

ಕೊಪ್ಪಳ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಓರ್ವ ಯುವಕನಿಗೆ ಚಾಕು ಇರಿತ, ಮೂವರ ಮೇಲೆ ಹಲ್ಲೆ

ಚಾಕು ಇರಿತಕ್ಕೆ ಒಳಗಾದ ಅಂಬೇಡ್ಕರ್ ನಗರದ ಶಿವು (38) ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಗಣೇಶ್, ಮಂಜು ಹಾಗೂ ಸಾಗರ್ ಹಲ್ಲೆಗೊಳಗಾದವರು.

ಗಂಗಾವತಿ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಹಳೆ ವೈಷಮ್ಯದಿಂದ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿ, ಯುವಕನೊಬ್ಬನಿಗೆ ಚಾಕು ಇರಿತವಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇತರ ಮೂವರ ಮೇಲೆ ಹಲ್ಲೆಯಾಗಿದ್ದು, ಗಾಯಗಳಾಗಿವೆ.

ಚಾಕು ಇರಿತಕ್ಕೆ ಒಳಗಾದ ಅಂಬೇಡ್ಕರ್ ನಗರದ ಶಿವು (38) ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಗಣೇಶ್, ಮಂಜು ಹಾಗೂ ಸಾಗರ್ ಹಲ್ಲೆಗೊಳಗಾದವರು.

ಗುಂಡಮ್ಮ ಕ್ಯಾಂಪಿನಲ್ಲಿ ಗಣೇಶ ಮೂರ್ತಿ ವಿರ್ಸಜನೆ ವೇಳೆ ಡಿಜೆ ಬಳಸಿ ಯುವಕರು ಕುಣಿಯುತ್ತಿದ್ದಾಗ ಏಕಾಏಕಿ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿದೆ. ಇದು ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ಒಂದು ಗುಂಪಿನ ಕಡೆಯವರು ಇನ್ನೊಂದು ಗುಂಪಿನವರ ಮೇಲೆ ಹಲ್ಲೆ ನಡೆಸಿ, ಚಾಕು ಇರಿದಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.

ಈ ಘಟನೆಗೆ ಹಳೆ ವೈಷಮ್ಯ ಕಾರಣ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಘಟನೆ ಸಂಬಂಧ ಒಟ್ಟು 20 ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: Quad ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

SCROLL FOR NEXT