ಬಂಧಿತ ಆರೋಪಿ ಚಿರಾಗ್ ಜೀವರಾಜಬಾಯ್ ಲಕ್ಕಡ್  
ರಾಜ್ಯ

ಬೆಳಗಾವಿ: ವೃದ್ದ ದಂಪತಿ ಆತ್ಮಹತ್ಯೆ ಪ್ರಕರಣ; ಗುಜರಾತ್ ನ ಸೂರತ್ ನಲ್ಲಿ ಆರೋಪಿ ಬಂಧನ

ಮಾರ್ಚ್ 27 ರಂದು, ಫ್ಲಾವಿಯಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದರು, ಆದರೆ ಡಿಯಾಗೋ ತನ್ನ ಕುತ್ತಿಗೆಯನ್ನು ಕೊಯ್ದು ತಮ್ಮ ನಿವಾಸದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಬೆಳಗಾವಿ: ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಕಾರಣವಾದ ಪ್ರಮುಖ ಆರೋ‍ಪಿಯನ್ನು ಪೊಲೀಸರು ಗುಜರಾತಿನ ಸೂರತ್ ನಲ್ಲಿ ಸೋಮವಾರ ಬಂಧಿಸಿದ್ದಾರೆ.

ಗುಜರಾತ ರಾಜ್ಯದ ಸೂರತ್‌ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ. ಖಾನಾಪುರ ತಾಲ್ಲೂಕಿನ ನಂದಗಡ ಪೊಲೀಸ್‌ ಠಾಣೆಯಲ್ಲಿ ಆರೋಪಿ ವಿರುದ್ಧ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2) ಸಹಕಲಂ 3(5) ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಡಿ ಗ್ರಾಮದ ಕ್ರಿಶ್ಚಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರೆತ್ (83) ಮತ್ತು ಅವರ ಪತ್ನಿ ಫ್ಲಾವಿಯಾ ನಜರೆತ್ (78) ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಾರ್ಚ್ 27 ರಂದು, ಫ್ಲಾವಿಯಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದರು, ಆದರೆ ಡಿಯಾಗೋ ತನ್ನ ಕುತ್ತಿಗೆಯನ್ನು ಕೊಯ್ದು ತಮ್ಮ ನಿವಾಸದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ದಂಪತಿಗಳು ಅನುಭವಿಸಿದ ಮಾನಸಿಕ ಯಾತನೆಯನ್ನು ಬಹಿರಂಗಪಡಿಸಿದೆ. ದೆಹಲಿ ಕ್ರೈಂ ಬ್ರಾಂಚ್‌ನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಂದ ಪದೇ ಪದೇ ಬೆದರಿಕೆಗಳು ಬರುತ್ತಿವೆ ಎಂದು ಡಿಯಾಗೋ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ.

ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ನಮಗೆ ಪದೇಪದೇ ಬೆದರಿಕೆ ಹಾಕಿದ್ದಾರೆ. ನನ್ನ ಸಿಮ್‌ಕಾರ್ಡ್‌ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಿಲ್‌ ಯಾದವ್‌ ಎಂಬ ವ್ಯಕ್ತಿ ಕರೆ ಮಾಡಿ, ‘ನಿಮ್ಮ ನಂಬರಿನಿಂದ ನನಗೆ ಬೆತ್ತಲೆ ಚಿತ್ರಗಳು, ಅಶ್ಲೀಲ ಸಂದೇಶಗಳು ರವಾನೆಯಾಗಿವೆ. ಇದರ ಬಗ್ಗೆ ಸೈಬರ್‌ ಸೆಲ್‌ಗೆ ದೂರು ನೀಡಿದ್ದಾಗಿ ಎಂದು ಬೆದರಿಸುತ್ತಿದ್ದಾರೆ’ ಎಂದು ಡಿಯಾಗೋ ಡೆತ್‌ನೋಟ್‌ ಬರೆದಿಟ್ಟಿದ್ದರು.

ಬೆದರಿಕೆಗಳಿಂದ ಗಾಬರಿಗೊಂಡ ಡಿಯಾಗೋ ಸೈಬರ್ ಅಪರಾಧಿಗಳು ನಿರ್ವಹಿಸುತ್ತಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 59 ಲಕ್ಷ ರೂ. ಪಾವತಿಸಿದ್ದಾರೆ, ಆದರೂ ಬೆದರಿಕೆ ಮತ್ತು ಸುಲಿಗೆ ಮುಂದುವರೆಯಿತು. ಒತ್ತಡ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಯಾಗೋ ಅವರ ಎಸ್‌ಬಿಐ ಖಾತೆಯಿಂದ ಬಾಲಾಜಿ ಇಂಡಸ್ಟ್ರೀಸ್ ಹೆಸರಿನ ಐಡಿಎಫ್‌ಸಿ ಬ್ಯಾಂಕ್ ಖಾತೆಗೆ 6.10 ಲಕ್ಷ ರೂಪಾಯಿ ವಹಿವಾಟು ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ವಂಚನೆಯ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಚಿರಾಗ್ ಲಕ್ಕಡ್ ಬಂಧನಕ್ಕೆ ಕಾರಣರಾಗಿದ್ದಾರೆ. ಬೆಳಗಾವಿಯ ಸೈಬರ್ ಕ್ರೈಂ ಬ್ರಾಂಚ್‌ನ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿ ವೀರೇಶ್ ದೊಡ್ಡಮನಿ ದಂಪತಿಗೆ ಬೇರೆ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಹಾಕುತ್ತಿದ್ದ ಮತ್ತು ರಾಜ್‌ಕೋಟ್‌ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಬಾಲಾಜಿ ಇಂಡಸ್ಟ್ರೀಸ್ ಹೆಸರಿನಲ್ಲಿ ಮತ್ತೊಂದು ಸಿಮ್ ಬಳಸುತ್ತಿದ್ದ ಎಂದು ಹೇಳಿದ್ದಾರೆ.

ಬಾಲಾಜಿ ಇಂಡಸ್ಟ್ರೀಸ್ ಹೆಸರಿನ ಸಿಮ್ ಲಿಂಕ್ ಆಗಿದ್ದ ರಾಜ್‌ಕೋಟ್‌ನಲ್ಲಿರುವ ಬ್ಯಾಂಕ್ ಖಾತೆಗೆ ದಂಪತಿ ಹಣ ವರ್ಗಾವಣೆ ಮಾಡುವಾಗ ಆರೋಪಿ ತನ್ನ ಫೋನ್ ಸ್ವಿಚ್ ಆಫ್‌ನಲ್ಲಿ ಇರಿಸಿದ್ದ. ಆರೋಪಿಗಳು ಮತ್ತು ಇತರ ಸೈಬರ್ ಕ್ರಿಮಿನಲ್‌ಗಳು ಅಪರಾಧದಲ್ಲಿ ಭಾಗಿಯಾಗಿದ್ದು, ದಂಪತಿಯೊಂದಿಗೆ ಒಮ್ಮೆಲೆ ಕನಿಷ್ಠ 10 ಗಂಟೆಗಳ ಕಾಲ ವಿಡಿಯೋ ಕಾಲ್ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ದೊಡ್ಡಮನಿ ತಿಳಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬರು ದೆಹಲಿ ಕ್ರೈಂ ಬ್ರಾಂಚ್‌ನ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ದಂಪತಿಗೆ ಬೆದರಿಕೆ ಹಾಕಿದ್ದಾರೆ. ಬಂಧಿತ ಆರೋಪಿಯಿಂದ ವಂಚನೆಗೆ ಬಳಸಿದ್ದ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಬಂಧನವನ್ನು ಖಚಿತಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂಫಾಲ್ ಬಳಿ ಉಗ್ರರಿಂದ ಗುಂಡಿನ ದಾಳಿ: ಅಸ್ಸಾಂ ರೈಫಲ್ಸ್ ನ 2 ಸೈನಿಕರು ಹುತಾತ್ಮ, 5 ಮಂದಿಗೆ ಗಾಯ

'Saudi Arabia ಪರಸ್ಪರ ಹಿತಾಸಕ್ತಿ, ಸೂಕ್ಷ್ಮತೆಗಳ ಗಣನೆಗೆ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೇವೆ': Saudi-Pak ಒಪ್ಪಂದದ ಕುರಿತು ಭಾರತ ಖಡಕ್ ಮಾತು!

Asia Cup 2025: oman ವಿರುದ್ಧ ಭಾರತಕ್ಕೆ 21 ರನ್ ಭರ್ಜರಿ ಜಯ, Arshdeep Singh ಅಪರೂಪದ ದಾಖಲೆ, ಮೊದಲ ಬೌಲರ್!

Asia Cup 2025: ವಿಶ್ವ ಚಾಂಪಿಯನ್ ಭಾರತದ ವಿರುದ್ಧ oman ಆಟಗಾರ Amir Kaleem ದಾಖಲೆ, ಏನದು ಸಾಧನೆ?

ಆರ್ಡರ್ ತಡವಾಗಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ, Mubarak, Shahrukh ಬಂಧನ, Video

SCROLL FOR NEXT