ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ 
ರಾಜ್ಯ

Op Sindoor: ಪಾಕ್ ನ ಆರು ಯುದ್ಧ ವಿಮಾನ ಆಕಾಶದಲ್ಲಿಯೇ ಧ್ವಂಸ; ಕದನ ವಿರಾಮ ಒಳ್ಳೆಯ ನಿರ್ಧಾರ; ಮಹತ್ವದ ಮಾಹಿತಿ ಬಿಚ್ಚಿಟ್ಟ IAF ಮುಖ್ಯಸ್ಥ; Video

ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ನಿರ್ಣಾಯಕ ವೈಮಾನಿಕ ದಾಳಿಯಲ್ಲಿ ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಪಾತ್ರವನ್ನು ಶ್ಲಾಘಿಸಿದ್ದಾರೆ.

ಬೆಂಗಳೂರು: 'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನದ ಆರು ಯುದ್ಧ ವಿಮಾನಗಳು ಹಾಗೂ ಮತ್ತೊಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥರು ಇಂದು ಬೆಳಿಗ್ಗೆ ಹೇಳಿದ್ದಾರೆ.

ಮೆಗಾ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ವಾಯು ನೌಕಾಪಡೆಗೆ ಉಂಟಾದ ದೊಡ್ಡ ಪ್ರಮಾಣದ ಹಾನಿಯನ್ನು ಬಹಿರಂಗಪಡಿಸಲಾಗಿದೆ. ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಆರು ಯುದ್ಧ ವಿಮಾನಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಲಾಗಿದೆ. ಜೊತೆಗೆ ಪಾಕಿಸ್ತಾನದ ಎರಡು ವಿಮಾನಗಳನ್ನು ನೆಲದ ಮೇಲೆ ನಾಶಪಡಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ವಾರ್ಷಿಕ 16ನೇ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ನಿರ್ಣಾಯಕ ವೈಮಾನಿಕ ದಾಳಿಯಲ್ಲಿ ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಪಾತ್ರವನ್ನು ಶ್ಲಾಘಿಸಿದ್ದಾರೆ.

ಮತ್ತೊಂದು ದೊಡ್ಡ ಹೊಡೆತ: ಧ್ವಂಸಗೊಂಡ ಮತ್ತೊಂದು ದೊಡ್ಡ ವಿಮಾನ ಬಹುಶಃ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಅಥವಾ ಎಲೆಕ್ಟ್ರಾನಿಕ್ ಗುಪ್ತಚರದ ವಿಮಾನವಾಗಿದ್ದು, ಇದರ ಧ್ವಂಸ ಪಾಕಿಸ್ತಾನದ ವಾಯು ಬಲಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಅವರು ಹೇಳಿದ್ದಾರೆ.

ಮೇ 7 ರ ದಾಳಿಯ ಸಮಯದಲ್ಲಿ ದಾಳಿಗೊಳಗಾದ ಭಯೋತ್ಪಾದಕ ನೆಲೆಗಳ ಮೊದಲಿನ ಹಾಗೂ ನಂತರದ' ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ಏರ್ ಚೀಪ್ ಮಾರ್ಷಲ್, ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿದ ಪಾಕಿಸ್ತಾನದ ಬಹವಲ್‌ಪುರ ಶಿಬಿರದ ದೃಶ್ಯಗಳು ಹಾನಿ ಕುರಿತು ಸ್ಪಷ್ಟವಾಗಿ ತೋರಿಸುತ್ತವೆ. "ಪಕ್ಕದ ಕಟ್ಟಡಗಳು ತಕ್ಕಮಟ್ಟಿಗೆ ಹಾಗೇ ಇವೆ. ನಮ್ಮಲ್ಲಿನ ಉಪಗ್ರಹ ಚಿತ್ರಗಳು ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳಿಂದಲೂ ಈ ಚಿತ್ರಗಳನ್ನು ಪಡೆಯಬಹುದು ಎಂದು ಹೇಳಿದರು.

ಮೇ 7 ರಂದು ದಾಳಿಗೊಳಗಾದ ಒಂಬತ್ತು ಸ್ಥಳಗಳಲ್ಲಿ ಲಷ್ಕರ್-ಎ-ತೈಬಾದ ಪ್ರಧಾನ ಕಛೇರಿ ಮುರಿಡ್ಕೆ, ಅವರ ಹಿರಿಯ ನಾಯಕರ ವಸತಿ ಪ್ರದೇಶವಾಗಿತ್ತು. ಇವು ಅವರ ಕಚೇರಿ ಕಟ್ಟಡಗಳಾಗಿದ್ದು, ಅಲ್ಲಿ ಅವರು ಸಭೆಗಳನ್ನು ನಡೆಸಲು ಒಟ್ಟಿಗೆ ಸೇರುತ್ತಿದ್ದರು ಎಂದು ಅವರು ತಿಳಿಸಿದರು.

ಏಪ್ರಿಲ್ 22 ರಂದು 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7 ರಂದು ಆರಂಭಿಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳನ್ನು ಹೊಡೆದು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು.

ಕದನ ವಿರಾಮ ಘೋಷಣೆ "ಒಳ್ಳೆಯ ನಿರ್ಧಾರ..."

ಯುದ್ಧದಲ್ಲಿ ಜನರ ಮೇಲೆ ಅವರ ಅಹಂ ಕೆಲಸ ಮಾಡುತ್ತದೆ.... ನಾವು ನಮ್ಮ ಗುರಿಯನ್ನು ಸಾಧಿಸಿದ ನಂತರ, ನಾವು ಯುದ್ಧ ನಿಲ್ಲಿಸಲು ಎಲ್ಲಾ ಅವಕಾಶಗಳನ್ನು ಹುಡುಕಬೇಕಾಗಿತ್ತು... ನನಗೆ ತುಂಬಾ ಹತ್ತಿರವಿರುವ ಕೆಲವರು, 'ಔರ್ ಮಾರ್ನಾ ಥಾ' ಎಂದು ಹೇಳಿದರು.

ಆದರೆ ನಾವು ಯುದ್ಧದಲ್ಲಿ ಮುಂದುವರಿಯಬಹುದೇ?...

ಕದನ ವಿರಾಮಕ್ಕೆ ಒಪ್ಪಿ ರಾಷ್ಟ್ರವು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದೆ," ಎಂದು ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದರು.

ಆಪರೇಷನ್ ಸಿಂಧೂರ್ ಗೆ ಕದನ ವಿರಾಮ ನಿರ್ಧಾರವನ್ನು ಬೆಂಬಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women's World Cup 2025: ಭಾರತ vs ಪಾಕಿಸ್ತಾನ ನಡುವೆ ಹ್ಯಾಂಡ್‌ಶೇಕ್ ಇಲ್ಲ; ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ

Couple Romance: ರೈಲಿನಲ್ಲಿ ಜನರ ಎದುರೆ ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬಿಸಿ ಯುವಜೋಡಿ; ಮುಜುಗರಕ್ಕೀಡಾದ ಪ್ರಯಾಣಿಕರು, Video!

ಕಾಲ್ತುಳಿತ ಪ್ರಕರಣ: ವಿಜಯ್ ಪ್ರಚಾರ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲು

ಡೆಲಿವರಿಗೆ ಬಂದು ಎದೆ ಮುಟ್ಟಿದ Blinkit ಏಜೆಂಟ್! ಯುವತಿ ಆರೋಪವೇನು? Video Viral

Cricket: ಕೇವಲ 141 ಎಸೆತಗಳಲ್ಲಿ ಬರೊಬ್ಬರಿ 314 ರನ್ ಚಚ್ಚಿದ ಭಾರತ ಮೂಲದ ಆಸಿಸ್ ಕ್ರಿಕೆಟಿಗ Harjas Singh, ಇತಿಹಾಸ ನಿರ್ಮಾಣ!

SCROLL FOR NEXT