ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನವು ಹೇಗೆ ನಿರಂತರ ಪ್ರೀತಿ-ದ್ವೇಷದ ಸಂಬಂಧದಂತೆ ಭಾಸವಾಗುತ್ತಿದೆ ಎಂಬುದರ ಕುರಿತು ಕೇರಳದ 26 ವರ್ಷದ ಯುವಕ ಮಾಡಿರುವ Reddit post ಇದೀಗ ಚರ್ಚೆಗೆ ಗ್ರಾಸವಾಗಿದೆ. 'ಬೆಂಗಳೂರಿನಲ್ಲಿ ಪ್ರೀತಿ- ದ್ವೇಷದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದೇನೆ' ಎಂಬ ಶೀರ್ಷಿಕೆಯಡಿ, subreddit 'r/Coconaad'ನಲ್ಲಿ ಫೋಸ್ಟ್ ಮಾಡಿದ್ದಾರೆ.
ಮೂಲತಃ ಕಣ್ಣೂರಿನವರಾದ ಯುವಕ, ತಮ್ಮ ತವರು ಕೇರಳ ಮತ್ತು ಬೆಂಗಳೂರಿನ ನಡುವಿನ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಈ ನಗರವು ನನಗೆ ಏನು ಮಾಡಿದೆ ಎಂಬುದು ನನ್ನ ತಿಳುವಳಿಕೆಯನ್ನು ಮೀರಿದೆ" ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಅನಿಶ್ಚಿತ ಹವಾಮಾನ ಹೇಗೆ ತನ್ನ ತಾಳ್ಮೆಯನ್ನು ಪರೀಕ್ಷಿಸಿತು ಎಂಬುದನ್ನು ಅವರು ವಿವರಿಸಿದ್ದಾರೆ. ಬೆಳಿಗ್ಗೆ ತುಂಬಾ ಬಿಸಿಲು ಇರುತ್ತದೆ. ಅದು ಹಾಗೆಯೇ ಇರುತ್ತದೆ ಎಂದು ನೀವು ಭಾವಿಸಿ, ನೀವು ನಿಮ್ಮ ಛತ್ರಿ ಅಥವಾ ರೇನ್ ಕೋಟ್ ತೆಗೆದುಕೊಳ್ಳದೆ ಕೆಲಸಕ್ಕೆ ಹೊರಟರೆ ಎರಡು ನಿಮಿಷಗಳ ನಂತರ ಧಾರಾಕಾರ ಮಳೆಯಾಗುತ್ತದೆ. ಟ್ರಾಫಿಕ್ ನಲ್ಲಿ ಮೂರ್ಖನಂತೆ ನಿಲ್ಲಿಸಬೇಕಾಗುತ್ತದೆ. ಎಲ್ಲಾ ಒದ್ದೆಯಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ರೀತಿಯ ಹತಾಶೆಯು ಆಗಾಗ್ಗೆ ಕೇರಳಕ್ಕೆ ಹಿಂತಿರುಗಬೇಕು ಅನಿಸುತ್ತದೆ. ಕಣ್ಣೂರಿಗೆ ಹಿಂತಿರುಗಿದಾಗ ಬೆಂಗಳೂರಿನ ತಂಪಾದ ವಾತಾವರಣ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡೆ. ನೆರೆಹೊರೆಯವರ ಮತ್ತು ಸಂಬಂಧಿಕರಿಂದ ಟೀಕೆಗಳನ್ನು ಎದುರಿಸುತ್ತಿದ್ದು, ಇಲ್ಲಿ ನಾನು ಬೆಂಗಳೂರಿನಲ್ಲಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿದ್ದಾಗ ಹುಟ್ಟೂರಿಗೆ ಹೋಗಬೇಕು ಅಂತಾ ಬಯಸುತ್ತೀರಿ. ಆದರೆ, ಕೇರಳ ತಲುಪಿದ ಕ್ಷಣ, ಬೆಂಗಳೂರನ್ನು ಹುಚ್ಚನಂತೆ ಕಳೆದುಕೊಳ್ಳುತ್ತೀರಿ ಎಂದಿದ್ದಾರೆ.
ದೇಶದ ಅನೇಕ ಸ್ಥಳಗಳಲ್ಲಿ ವಾಸಿಸಿದ್ದರೂ ಬೆಂಗಳೂರಿನ ವಾಸ ವಿಶಿಷ್ಟವಾಗಿದೆ. ಬೆಂಗಳೂರಿನಲ್ಲಿ ಪ್ರೀತಿ ಮತ್ತು ದ್ವೇಷವನ್ನು ಅನುಭವಿಸಿದ್ದೇನೆ. ಉದ್ಯೋಗಕ್ಕಾಗಿ ಬೆಂಗಳೂರು ಬಿಟ್ಟು ಬೇರೆ ಕಡೆ ಹೋಗುವುದು ನನ್ನಗೆ ಕಷ್ಟಕರವಾಗುತ್ತದೆ. ಏಕೆಂದರೆ ಇಲ್ಲಿ ಹಲವಾರು ಮಲಯಾಳಿಗಳು ಮತ್ತು ರೆಸ್ಟೋರೆಂಟ್‌ಗಳಿವೆ ಎಂದು ಅವರು ತಿಳಿಸಿದ್ದಾರೆ. ರೆಡ್ಡಿಟ್ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.