ಬಾಲಕಿಯ ಮೇಲೆ ಹರಿದ ಬಿಎಂಟಿಸಿ ಬಸ್ 
ರಾಜ್ಯ

BMTC ಬಸ್ ಹರಿದು 10 ವರ್ಷದ ಬಾಲಕಿ ದುರ್ಮರಣ; Video

ಘಟನೆ ಬೆನ್ನಲ್ಲೇ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ ಮತ್ತೊಂದು ಜೀವ ಬಲಿ ಪಡೆದುಕೊಂಡಿದೆ. 10 ವರ್ಷದ ಬಾಲಕಿಯ ತಲೆ ಮೇಲೆ ಬಸ್ ಚಕ್ರ ಹರಿದು ಸಾವನ್ನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ಗುರುವಾರ ನಡೆದಿದೆ.

ಮೃತ ಬಾಲಕಿಯನ್ನು ತನ್ವಿ (10) ಎಂದು ಗುರುತಿಸಲಾಗಿದೆ. ಮೃತ ಬಾಲಕಿ ಮಿಲೆನಿಯಂ ಸ್ಕೂಲ್‌ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಹರ್ಷಿತಾ ಅವರು ಮಗಳನ್ನು ಸ್ಕೂಲ್‌ಗೆ ಬಿಡಲು ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ತಾಯಿ ಕರೆದುಕೊಂಡು ಹೋಗುತ್ತಿದ್ದು, ಯಲಹಂಕದ ಕೋಗಿಲು ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ವಾಹನ ಸ್ಕಿಡ್ ಆಗಿದೆ.

ಈ ವೇಳೆ ವಾಹನದಿಂದ ಕೆಳಗೆ ಬಿದ್ದ ಬಾಲಕಿಯ ತಲೆ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದಿದ್ದು, ಬಾಲಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

ಘಟನೆ ಬೆನ್ನಲ್ಲೇ ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!