ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬುಧವಾರ 2.19 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಪೂರ್ವ ವಲಯದಲ್ಲಿ 44 ಸಾವಿರ, ಪಶ್ಚಿಮ ವಲಯ 60,703, ದಕ್ಷಿಣ ವಲಯ 79,039, ಬೊಮ್ಮನಹಳ್ಳಿ ವಲಯ 7,028, ದಾಸರಹಳ್ಳಿ ವಲಯದಲ್ಲಿ 1,104 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಬೆಂಗಳೂರು: ಗಣೇಶ ಹಬ್ಬದ ದಿನವಾದ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವಾತ/ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 2.19 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಪೂರ್ವ ವಲಯದಲ್ಲಿ 44 ಸಾವಿರ, ಪಶ್ಚಿಮ ವಲಯ 60,703, ದಕ್ಷಿಣ ವಲಯ 79,039, ಬೊಮ್ಮನಹಳ್ಳಿ ವಲಯ 7,028, ದಾಸರಹಳ್ಳಿ ವಲಯದಲ್ಲಿ 1,104 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಮಹದೇವಪುರ ವಲಯದಲ್ಲಿ 5,690, ಆರ್.ಆರ್.ನಗರ ವಲಯದಲ್ಲಿ 13,097 ಮತ್ತು ಯಲಹಂಕ ವಲಯದಲ್ಲಿ 8,492 ಗಣೇಶ ಮೂರ್ತಿಗಳು ಸೇರಿ ನಗರದಲ್ಲಿ 2,19,153 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಇನ್ನು ಯಡಿಯೂರು ಕೆರೆಯ ವಿಸರ್ಜನಾ ಕೊಳದಲ್ಲಿ ಸುಮಾರು 71 ಸಾವಿರಕ್ಕೂ ಹೆಚ್ಚು ಗೌರಿ, ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಅವುಗಳ ಪೈಕಿ 66 ಸಾವಿರ ಮಣ್ಣಿನ ಮೂರ್ತಿಗಳು, 3800 ಪೇಪರ್ ಮೂರ್ತಿಗಳು ಮತ್ತು 1200 ಪಿಒಪಿ ಮೂರ್ತಿಗಳಾಗಿವೆ. ಪಿಒಪಿ ಮೂರ್ತಿಗಳ ನಿಷೇಧವಿದ್ದರೂ ಯಡಿಯೂರು ಕೆರೆಯೊಂದಲ್ಲೇ 1,200 ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಇನ್ನುಳಿದ ಪ್ರದೇಶಗಳಲ್ಲೂ ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿದೆ. ಆದರೆ, ಬಿಬಿಎಂಪಿ ಅಂಕಿ–ಅಂಶಗಳನ್ನು ನೀಡಿಲ್ಲ.

ಹಲವು ಪ್ರದೇಶಗಳಲ್ಲಿ ಗಣೇಶ ಹಬ್ಬದ ದಿನ ಬೆಳಿಗ್ಗೆ ಮೂರ್ತಿಗೆ ಪೂಜೆ ನೆರವೇರಿಸಿ, ಸಂಜೆಯೇ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಬಿಬಿಎಂಪಿ ಸಜ್ಜುಗೊಳಿಸಿದ್ದ ಕೆರೆ, ಕಲ್ಯಾಣಿ, ಮೊಬೈಲ್‌ ಟ್ಯಾಂಕ್‌ಗಳಲ್ಲಿ, ಕೆಲವು ಕಡೆ ಮನೆಗಳಲ್ಲಿನ ತೊಟ್ಟಿ ಅಥವಾ ಬಕೆಟ್‌ಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ನಗರದಲ್ಲಿ ಜನರು ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸಿ ವಿಸರ್ಜನೆ ಮಾಡಿದ್ದಾರೆ. ಬಿಬಿಎಂಪಿಯ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡ ಸಿ.ಜೆ ರಾಯ್; ಪೊಲೀಸ್ ಆಯುಕ್ತರು ಹೇಳಿದ್ದೇನು?

ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಎನ್‌ಸಿಪಿ ನಿರ್ಧಾರವನ್ನು ಬೆಂಬಲಿಸುತ್ತೇವೆ: ಫಡ್ನವೀಸ್

12 ರೋಲ್ಸ್ ರಾಯ್ಸ್‌ ಸೇರಿ ಹಲವು ಐಷಾರಾಮಿ ಕಾರು, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಸುನೇತ್ರ ಪವಾರ್ ನಾಳೆ ಪ್ರಮಾಣ ವಚನ ಸ್ವೀಕಾರ: ಭುಜಬಲ್

BIFF ನಲ್ಲಿ ಪ್ಯಾಲೆಸ್ತೀನ್ ಚಿತ್ರಗಳ ಪ್ರದರ್ಶನಕ್ಕೆ ಪ್ರಕಾಶ್ ರಾಜ್ ಒತ್ತಾಯ: ಬಿಜೆಪಿ ವಾಗ್ದಾಳಿ!

SCROLL FOR NEXT