ಆತ್ಮಹತ್ಯೆಗೆ ಶರಣಾದ ಮಹಿಳೆ online desk
ರಾಜ್ಯ

ಅನೈತಿಕ ಸಂಬಂಧ: ಇಸ್ಲಾಮ್ ಗೆ ಮತಾಂತರವಾಗಲು ವ್ಯಕ್ತಿಯ ಚಿತ್ರ ಹಿಂಸೆ; ವಿವಾಹಿತ ಮಹಿಳೆ ಆತ್ಮಹತ್ಯೆ!

ಮಕ್ತುಮಸಾಬ್ ಪಾಟೀಲ್​ ಎಂಬಾತನ ಈ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿಯನ್ನು ನಾಗವ್ವ ವಂಟಮೂರಿ(28) ಎಂದು ಗುರುತಿಸಲಾಗಿದೆ.

ಬೆಳಗಾವಿ: ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇಸ್ಲಾಮ್ ಗೆ ಮತಾಂತರವಾಗುವಂತೆ ಹಿಂಸಿಸುತ್ತಿದ್ದದ್ದನ್ನು ತಡೆಯಲಾರದೇ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ರಾಮದುರ್ಗದಲ್ಲಿ ವರದಿಯಾಗಿದೆ.

ಮಕ್ತುಮಸಾಬ್ ಪಾಟೀಲ್​ ಎಂಬಾತನ ಈ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿಯನ್ನು ನಾಗವ್ವ ವಂಟಮೂರಿ(28) ಎಂದು ಗುರುತಿಸಲಾಗಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಮಕ್ತುಮಸಾಬ್ ಪಾಟೀಲ್ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.

9 ವರ್ಷಗಳ ಹಿಂದೆ ದೇಮಪ್ಪ-ನಾಗವ್ವ ಮದುವೆಯಾಗಿದ್ದರು. ಮದುವೆಯಾದ 1 ವರ್ಷಕ್ಕೆ ನಾಗವ್ವಗೆ ಮಕ್ತುಮ್​ಸಾಬ್ ಪರಿಚಯವಾಗಿದ್ದ. ಪರಿಚಯ ಅನೈತಿಕ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ನಾಗವ್ವನ ಮನೆಯಲ್ಲಿ ಗೊತ್ತಾಗಿ ಮಕ್ತುಮ್​ಸಾಬ್ ಪಾಟೀಲ್ ಸಂಪರ್ಕ ತ್ಯಜಿಸುವಂತೆ ಬುದ್ಧಿವಾದ ಹೇಳಿದ್ದರು. ​

ಮನೆಯವರ ಸೂಚನೆ ಮೇರೆಗೆ ನಾಗವ್ವ ಆತನ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಕ್ತುಮಸಾಬ್ ಪಾಟೀಲ್ ಧಮ್ಕಿ ಹಾಕುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ. ಮತಾಂತರ ಆಗದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ನಾಗವ್ವ ಕುಟುಂಬದವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ವಿಡಿಯೋ ವಿವಾದ, ಮಕ್ಕಳ ಅಶ್ಲೀಲ ಚಿತ್ರ: ಕೊನೆಗೂ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್

ಲೋಕಸಭೆಯಲ್ಲಿ 'ಬ್ಯಾಂಕರ್ ಬುಕ್ಸ್ ಎವಿಡೆನ್ಸ್ ಬಿಲ್', ರಾಜ್ಯಸಭೆಯಲ್ಲಿ 'ಸುಪ್ರೀಂ' ನ್ಯಾಯಾಧೀಶರ ಹೆಚ್ಚಳ ಮಸೂದೆ ಅಂಗೀಕಾರ!

ತೆರಿಗೆ ಪಾವತಿಯಲ್ಲೂ ಅಗ್ರಸ್ಥಾನಕ್ಕೇರಿದ Rishabh Pant; ಈ ವರ್ಷ ರಿಷಭ್ ಪಂತ್ ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?

ಬಂಕಿಪುರ, ದಾಟಿಯಾದಲ್ಲಿ ಬಿಜೆಪಿ ಸೋಲು ಉದ್ದೇಶಪೂರ್ವಕ: Akhilesh Yadav

ಮಾಧುರಿ ದೀಕ್ಷಿತ್​​ಗೆ ಜಾಕ್​ಪಾಟ್: ಕೇವಲ 52 ಲಕ್ಷ ರೂ. ಖರೀದಿಸಿದ್ದ ಕಚೇರಿಯನ್ನು ಬರೋಬ್ಬರಿ 4.85 ಕೋಟಿ ರೂ.ಗೆ ಮಾರಾಟ!