ಬೆಂಗಳೂರು: ಬೆಂಗಳೂರಿನ ಉತ್ತರದ ಕೋಗಿಲು ಲೇಔಟ್ ಬಳಿ ಜಿಬಿಎ ಅಧಿಕಾರಿಗಳು ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದ ಪ್ರಕರಣದಲ್ಲಿ ಕೇರಳ ಸರ್ಕಾರ ರಾಜಕೀಯ ನಡೆಸುತ್ತಿದೆ. ನಿನ್ನೆ ಕೇರಳ ಸಂಸದ ಎಎ ರಹೀಂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇಂದು ಕೇರಳ ಶಾಸಕ ಜಲೀಲ್ ಭೇಟಿ ನೀಡಿದರು. ಕೇರಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಕೆಸರೆರಚಾಟಕ್ಕೆ ಕೇರಳ ನಾಯಕರು, ಕರ್ನಾಟಕ ಸರ್ಕಾರದ ತೀರ್ಮಾನಗಳನ್ನು ಬಳಸಿಕೊಳ್ಳಲು ಆರಂಭಿಸಿದೆ.
ಅಕ್ರಮ ನಿವಾಸಿಗಳ ಮನೆಗಳನ್ನು ತೆರವುಗೊಳಿಸಿದ್ದು, ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು ಸ್ಥಳದಲ್ಲಿ ಪ್ರತಿಭಟನೆ ಮುಂದುವರೆಸಿವೆ. ಈ ಘಟನೆ ಬೆನ್ನಲ್ಲೇ ಕೇರಳ ಸರ್ಕಾರದ ಸಂಸದರು, ಸಚಿವರು, ಶಾಸಕರು ಕೋಗಿಲು ಸ್ಥಳಕ್ಕೆ ಭೇಟಿ ನೀಡಿ ರಾಜಕೀಯ ನಡೆಸುತ್ತಿದ್ದಾರೆ. ಪದೇ ಪದೇ ಕರ್ನಾಟಕದ ವಿಷಯಕ್ಕೆ ಕೇರಳ ಸರ್ಕಾರ ಮೂಗು ತೂರಿಸುತ್ತಿದ್ದು ಈಗ ಕೋಗಿಲು ಲೇಔಟ್ ಬಳಿ ಅಕ್ರಮ ನಿವಾಸಿಗಳ ತೆರವು ಬೆನ್ನಲ್ಲೇ ಬೆಂಗಳೂರಿನ ಕೋಗಿಲು ಬಳಿ ಕೇರಳ ರಾಜಕೀಯ ನಾಯಕರ ದಂಡೆ ಆಗಮಿಸುತ್ತಿದೆ.