ಬೆಂಗಳೂರು: ಆನೆ ಹಾಗೂ ಮಾನವ ಸಂಘರ್ಷ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಕರ್ನಾಟಕ ಪರಿಶೋಧಿತ ಟ್ರ್ಯಾಕರ್ ಅಥವಾ ಕರ್ನಾಟಕ ಪ್ರಡ್ಯೂಸ್ಡ್ (ಕೆ.ಪಿ.ಟ್ರ್ಯಾಕರ್) ಹೆಸರಿನ ಆನೆ ರೇಡಿಯೋ ಕಾಲರ್ ಅನ್ನು ಅರಣ್ಯ ಇಲಾಖೆ ತಯಾರಿಸಿದೆ. ಈ ಮೂಲಕ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಆನೆ ರೇಡಿಯೋ ಕಾಲರ್ಗಳಿಗೆ ಬ್ರೇಕ್ ಹಾಕಿದೆ.
ಅರಣ್ಯ ಇಲಾಖೆ ಮತ್ತು ಬೆಂಗಳೂರಿನ ಇನ್‌ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ‘ಕರ್ನಾಟಕ-ಪರಿಶೋಧಿತ ಪತ್ತೆ ಸಾಧನ’ವನ್ನು ಅಭಿವೃದ್ಧಿಪಡಿಸಿವೆ. ಇವುಗಳನ್ನು ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಅಧಿಕಾರಿಗಳಿಗೆ ಅರಣ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ಹೆಚ್ಚಾಗಿ ನಾಡಿನಲ್ಲೇ ಸಂಚರಿಸುತ್ತಿವೆ. ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ಈ ರೇಡಿಯೊ ಕಾಲರ್‌ಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಆನೆ ಗುಂಪಿನ ಸಂಚಾರದ ಮಾಹಿತಿ ಸಂಗ್ರಹಿಸಿ ಸ್ಥಳೀಯರಿಗೆ ನೀಡಲಾಗುವುದು ಎಂದು ಹೇಳಿದರು.
ಈಗ ರೇಡಿಯೋ ಕಾಲರ್‌ಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಈ ಹಿಂದೆ ಇಲಾಖೆಯು ಅವುಗಳನ್ನು ದಕ್ಷಿಣ ಆಫ್ರಿಕಾದ ಆಫ್ರಿಕನ್ ವೈಲ್ಡ್‌ಲೈಫ್ ಟ್ರ್ಯಾಕಿಂಗ್‌ನಿಂದ ಮತ್ತು ಜರ್ಮನಿಯ ವೆಕ್ಟ್ರಾನ್‌ನಿಂದ ಆಮದು ಮಾಡಿಕೊಳ್ಳುತ್ತಿತ್ತು. ತೆಗೆ ಒಂದು ರೇಡಿಯೊ ಕಾಲರ್‌ಗೆ 6.5 ಲಕ್ಷ ರು. ವೆಚ್ಚವಾಗುತ್ತಿತ್ತು. ನಾವು ಅಭಿವೃದ್ಧಿಪಡಿಸಿರುವ ರೇಡಿಯೊ ಕಾಲರ್‌ಗೆ 1.80 ಲಕ್ಷ ರು. ವೆಚ್ಚವಾಗುತ್ತದೆ. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಹೇಳಿದರು. ಅವುಗಳನ್ನು ತೆಗೆದುಕೊಳ್ಳಲು 6-9 ತಿಂಗಳುಗಳ ಸಮಯ ಬೇಕಾಗಿತ್ತು, ಈಗ 15-20 ದಿನಗಳಿಗೆ ಲಭ್ಯವಾಗುತ್ತದೆ.
7.5 ತೂಕವಿರುವ ಸ್ಥಳೀಯ ಆನೆ ಕಾಲರ್ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಕೆ ಬರಲಿದೆ. ಆಮದು ರೇಡಿಯೋ ಕಾಲರ್‌ಗಳ ತೂಕ 16 ರಿಂದ 17 ಕೆ.ಜಿ ಇದ್ದರೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕಾಲರ್ ಕೇವಲ 7 ಕೆ.ಜಿ. ತೂಕವಿದ್ದು, ಇದು ಹಗುರವಾಗಿದೆ. ಅರಣ್ಯ ಅಧಿಕಾರಿಗಳು ಹೇಳುವಂತೆ ಇವುಗಳನ್ನು ರಾಜ್ಯದಲ್ಲಿ ತಯಾರಿಸಲಾಗಿರುವುದರಿಂದ, ರೇಡಿಯೋ ಕಾಲರ್‌ಗಳಲ್ಲಿ ಯಾವುದೇ ದೋಷಗಳು ಕಂಡುಬಂದರೆ, ಅವುಗಳನ್ನು ತಕ್ಷಣವೇ ಬದಲಾಯಿಸಬಹುದು ಅಥವಾ ಸರಿಪಡಿಸಬಹುದು.
ರೇಡಿಯೋ ಕಾಲರಿಂಗ್ ಆನೆಗಳು ಅವುಗಳ ಚಲನವಲನಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. "ದೇಶಿಯವಾಗಿ ಉತ್ಪಾದಿಸಿರುವ ಆನೆ ಕಾಲರ್ ಜಿಎಎಸ್ಎಂ ತಂತ್ರಜ್ಞಾನ ಮೂಲಕ ಡ್ಯಾಶ್ ಬೋರ್ಡ್ ಮಾಹಿತಿ ರವಾನೆಯಾಗಲಿದೆ. ಈ ಮೂಲಕ ಜಿಲ್ಲಾ ಕಂಟ್ರೋಲ್ ಮೂಲಕ ಸ್ಥಳೀಯರಿಗೆ ಆನೆಗಳ ಬಗ್ಗೆ ಮಾಹಿತಿ ಕಳುಹಿಸಬಹುದಾಗಿದೆ. ಆನೆಗಳ ಹೆಚ್ಚು ಒಡಾಟ ಎಲ್ಲೆಲ್ಲಿದೆ ಎನ್ನುವ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಸಹಕಾರವಾಗಲಿದೆ. ಅಲ್ಲದೆ, ಈ ಹಿಂದೆ ಎಲ್ಲೆಲ್ಲಿ ಆನೆಗಳು ಒಡಾಡಿದ್ದವು ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನೆರವಾಗಲಿದೆ ಎಂದು ತಿಳಿಸಿದರು.