ಸಾಂದರ್ಭಿಕ ಚಿತ್ರ 
ರಾಜ್ಯ

ಮನೆ ಖರೀದಿದಾರರಿಗೆ ಬಾಕಿ ಪರಿಹಾರ ಪಾವತಿಸಲು ಕಂಪನಿಯ ನಿರ್ದೇಶಕರ ಆಸ್ತಿ ಮಾರಾಟ ಮಾಡಿ: K-RERA ಪೀಠ ಆದೇಶ

ಕಿಡಿಗೇಡಿಗಳನ್ನು ಮಟ್ಟಹಾಕಲು ಮತ್ತು ನ್ಯಾಯವನ್ನು ದೊರಕಿಸಲು ಈ ಕೃತ್ಯಗಳ ಹಿಂದಿರುವ ವ್ಯಕ್ತಿಗಳನ್ನು ಕಾನೂನಿನ ಮುಂದೆ ತರುವುದು ತುಂಬಾ ಅಗತ್ಯವಾಗಿದೆ ಎಂದು ಅವರ ತೀರ್ಪು ಹೇಳಿದೆ.

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (k-Rera)ಪೀಠವು ಇತ್ತೀಚೆಗೆ ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಹಿಂದಿನ ಏಳು ಮತ್ತು ಹಾಲಿ ನಿರ್ದೇಶಕರ ವೈಯಕ್ತಿಕ ಆಸ್ತಿಯನ್ನು ಅದರ ವಸತಿ ಸಂಕೀರ್ಣಗಳಲ್ಲಿ ಒಂದಾದ ಮನೆ ಖರೀದಿದಾರರಿಗೆ ನೀಡಬೇಕಾದ ಬಾಕಿ ಪರಿಹಾರ ಪಾವತಿಸಲು ವಶಕ್ಕೆ ಪಡೆಯುವಂತೆ ಮಹತ್ವದ ಆದೇಶ ನೀಡಿದೆ. ಮನೆ ಖರೀದಿದಾರರಿಗೆ ಬಿಲ್ಡರ್ ಒಟ್ಟು ರೂ. 170 ಕೋಟಿ ರೂ.ಪಾವತಿಸಬೇಕಾಗಿದೆ.

ಕಂದಾಯ ವಸೂಲಾತಿ ಪ್ರಮಾಣ ಪತ್ರಗಳ ಮೂಲಕ ಪರಿಹಾರ ನೀಡಲು ಕೆ-ರೇರಾ ಆದೇಶಿಸಿತ್ತು. ಆದರೆ ಬಿಲ್ಡರ್ ಗಳಿಂದ ವಸೂಲಿ ಮಾಡಿರಲಿಲ್ಲ ಎಂದು 1,800 ಫ್ಲಾಟ್‌ಗಳನ್ನು ಹೊಂದಿರುವ ದೇವನಹಳ್ಳಿಯ ಓಝೋನ್ ಅರ್ಬನಾ ವಸತಿ ಸಂಕೀರ್ಣದಲ್ಲಿ ಮನೆ ಖರೀದಿದಾರರ ಒಂದು ವರ್ಗದವರ ಪರ ವಕೀಲ ರೆನಾಲ್ಡ್ ಡಿಸೋಜಾ ಹೇಳಿದರು.

ಮನೆ ಖರೀದಿದಾರರಾದ ವಿನೋದ್ ಕುಮಾರ್ ಮತ್ತು ಪಾರುಲ್ ಚೌಧರಿ ಅವರು ಸಲ್ಲಿಸಿದ ದೂರಿಗೆ ಪ್ರತಿಕ್ರಿಯಿಸಿದ K-RERA ಸದಸ್ಯೆ ನೀಲಮಣಿ ಎನ್ ರಾಜು, ಸ್ವಂತ ಮನೆಯ ಭರವಸೆಯೊಂದಿಗೆ ಹಂಚಿಕೆದಾರರು ಕಷ್ಟಪಟ್ಟು ದುಡಿದ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕಿಡಿಗೇಡಿಗಳನ್ನು ಮಟ್ಟಹಾಕಲು ಮತ್ತು ನ್ಯಾಯವನ್ನು ದೊರಕಿಸಲು ಈ ಕೃತ್ಯಗಳ ಹಿಂದಿರುವ ವ್ಯಕ್ತಿಗಳನ್ನು ಕಾನೂನಿನ ಮುಂದೆ ತರುವುದು ತುಂಬಾ ಅಗತ್ಯವಾಗಿದೆ ಎಂದು ಅವರ ತೀರ್ಪು ಹೇಳಿದೆ.

ಮಾರಾಟದ ಒಪ್ಪಂದಗಳನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಕಂಪನಿಯ ನಿರ್ದೇಶಕರಾಗಿದ್ದ ವಾಸುದೇವನ್ ಸತ್ಯಮೂರ್ತಿ, ಪ್ರಿಯಾ ವಾಸುದೇವನ್, ಸತ್ಯಮೂರ್ತಿ ಸಾಯಿ ಪ್ರಸಾದ್, ರಾಜೀವ್ ಭಂಡಾರಿ, ಶ್ರೀನಿವಾಸನ್ ಗೋಪಾಲನ್, ದುರ್ಭಾಕುಲರ್ ವಂಶಿ ಸಾಯಿ ಮತ್ತು ಸೀವೋಸಾಗರ್ ನೇಮಚಂದನ್ ಮುಖ್ಯವಾಗಿ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಲು ಜವಾಬ್ದಾರರಾಗಿರುತ್ತಾರೆ ಎಂದು ಪಟ್ಟಿ ಮಾಡಿದೆ.

ಕಳೆದ ತಿಂಗಳು K-RERA ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಡಿಫಾಲ್ಟರ್ ಪಟ್ಟಿಯಲ್ಲಿ ಓಝೋನ್ ಅರ್ಬಾನಾ ಅಗ್ರಸ್ಥಾನದಲ್ಲಿದೆ. 65 ಫ್ಲಾಟ್‌ಗಳ ಡಬಲ್ ಮಾರಾಟ ಮಾಡಿದ ಆರೋಪ ಮೂಲ ಮತ್ತು ಹೊಸ ಮನೆ ಖರೀದಿದಾರಲ್ಲಿ ನಿಜವಾದ ಮಾಲೀಕತ್ವದ ಮೇಲೆ ಸಂಕಷ್ಟಕ್ಕೆ ಸಿಲುಕಿಸಿದೆ. ವೈಯಕ್ತಿಕ ಆಸ್ತಿಗಳ ಮಾರಾಟದಿಂದ ಬರುವ ಹಣ ಶೀಘ್ರದಲ್ಲೇ ಎಲ್ಲಾ ಮನೆ ಖರೀದಿದಾರರಿಗೆ ಹಸ್ತಾಂತರಿಸಲಾಗುವುದು ಎಂದು ಭಾವಿಸಿರುವುದಾಗಿ 2017 ರಿಂದ ಓಝೋನ್ ಅರ್ಬಾನಾ ಯೋಜನೆಯ 3BHK ಅಪಾರ್ಟ್‌ಮೆಂಟ್‌ನ ಮಾಲೀಕ ರೋಹಿತ್ ಪಟೇಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT