ಸಾಂದರ್ಭಿಕ ಚಿತ್ರ 
ರಾಜ್ಯ

NAAC ಗ್ರೇಡ್ ನೀಡಲು ಲಂಚ ಆರೋಪ: ಸಮಿತಿಯ 7 ಸದಸ್ಯರಿಗೆ ಜೀವಿತಾವಧಿ ನಿಷೇಧ!

ಆಂಧ್ರ ಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ (ಕೆಎಲ್‌ಇಎಫ್) ನ್ಯಾಕ್‌ನಿಂದ ‘ಎ’ ಪ್ಲಸ್ ಗ್ರೇಡ್‌ ಪಡೆಯಲು ಲಂಚ ನೀಡಿದ ಆರೋಪ ಕೇಳಿಬಂದಿತ್ತು.

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ, ಸಿಬಿಐ ತನಿಖೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳಿಗೆ ಐದು ವರ್ಷಗಳ ನಿಷೇಧ, ಸಮಿತಿಯ ಸದಸ್ಯರಿಗೆ ಜೀವತಾವಧಿ ನಿಷೇಧ ವಿಧಿಸಲಾಗಿದೆ ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಹೇಳಿದೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿ, ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳ ಪ್ರಕಾರ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ‘ನ್ಯಾಕ್‌’ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು, ಭ್ರಷ್ಟಾಚಾರ ನಿಯಂತ್ರಿಸಲು ಬೈನರಿ ಮಾನ್ಯತೆ ಮತ್ತು ಪ್ರಬುದ್ಧತಾ ಹಂತವನ್ನು ಬರುವ ಏಪ್ರಿಲ್‌ನಿಂದಲೇ ಜಾರಿಗೊಳಿಸಲಾಗುತ್ತಿದೆ. ನ್ಯಾಕ್ ಮಾನ್ಯತೆ ಪಡೆಯದ ಹೊಸ ಕಾಲೇಜುಗಳು ಬೈನರಿ ಮಾನ್ಯತೆ ಕೋರಿ ಅರ್ಜಿ ಸಲ್ಲಿಸಬಹುದು. ಹೊಸ ಮಾನ್ಯತಾ ಪರಿಕಲ್ಪನೆಗಳ ಜಾರಿಯ ನಂತರ ಹಿಂದಿನ ನ್ಯಾಕ್ ಶ್ರೇಣಿ ಪದ್ಧತಿಗಳು ಕ್ರಮೇಣ ರದ್ದಾಗಲಿವೆ ಎಂದು ಮಾಹಿತಿ ನೀಡಿದೆ.

ಆಂಧ್ರ ಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ (ಕೆಎಲ್‌ಇಎಫ್) ನ್ಯಾಕ್‌ನಿಂದ ‘ಎ’ ಪ್ಲಸ್ ಗ್ರೇಡ್‌ ಪಡೆಯಲು ಲಂಚ ನೀಡಿದ ಆರೋಪ ಕೇಳಿಬಂದಿತ್ತು. ಸಮಿತಿಯ ಏಳು ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಗಾಯತ್ರಿ ದೇವರಾಜ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಐಕ್ಯುಎಸಿ–ನ್ಯಾಕ್ ನಿರ್ದೇಶಕ ಎಂ.ಹನುಮಂತಪ್ಪ ಸಹ ಸಮಿತಿಯಲ್ಲಿದ್ದರು. ಈ ಸಮಿತಿ ಭೇಟಿ ನೀಡಿದ್ದ ಕಾಲೇಜುಗಳಿಗೆ ಪುನರ್‌ಪರಿಶೀಲನೆಗಾಗಿ ಮತ್ತೊಂದು ಸಮಿತಿ ಕಳುಹಿಸಿಕೊಡಲು ಮಂಡಳಿ ಕಾರ್ಯಕಾರಿ ಸಮಿತಿ ಸಭೆ ತೀರ್ಮಾನ ತೆಗೆದುಕೊಂಡಿದೆ.

ಪ್ರಕರಣದಲ್ಲಿ ಭಾಗಿಯಾದ ವಿಶ್ವವಿದ್ಯಾಲಯಗಳು ಐದು ವರ್ಷ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವಂತಿಲ್ಲ. ಸಮಿತಿಯ ಸದಸ್ಯರನ್ನು ಮೌಲ್ಯಮಾಪನ ಕಾರ್ಯಗಳಿಂದಲೂ ಹೊರಗಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ಹೇಳಿದೆ.

ವಿಶ್ವವಿದ್ಯಾಲಯದಲ್ಲಿನ ಮೂಲಸೌಕರ್ಯಗಳು, ಸಂಶೋಧನೆ, ವೈಜ್ಞಾನಿಕ ಉಪಕರಣಗಳು, ಬೋಧನೆ, ಸಂಶೋಧನೆಗಳಿಗೆ ಪೇಟೆಂಟ್ ಬಂದಿರುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನಾ ಪ್ರಬಂಧಗಳ ಮಂಡನೆ, ಕಲಿಕೆ, ಬೋಧನೆ ಮತ್ತು ಸಂಶೋಧನಾ ಚಟುವಟಿಕೆಗೆ ತಂತ್ರಜ್ಞಾನದ ಅಳವಡಿಕೆ ಮತ್ತಿತರ ಅಂಶಗಳನ್ನು ಆಧರಿಸಿ ನ್ಯಾಕ್ ಸಮಿತಿಯು ಅಂಕ ಮತ್ತು ಗ್ರೇಡ್‌ಗಳನ್ನು ನೀಡುತ್ತದೆ.

NAAC ಹೇಳಿಕೆಯ ಪ್ರಕಾರ, ಮೌಲ್ಯಮಾಪನಗಳಲ್ಲಿ ವಸ್ತುನಿಷ್ಠತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅನ್ಯಾಯದ ಅಭ್ಯಾಸಗಳನ್ನು ತಡೆಗಟ್ಟಲು ಹೊಸ ಚೌಕಟ್ಟುಗಳು ಸುಧಾರಿತ IT-ಆಧಾರಿತ ವೈಶಿಷ್ಟ್ಯಗಳನ್ನು ಸಂಯೋಜಿಸುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT