ಸಚಿವ ರಾಜಣ್ಣ 
ರಾಜ್ಯ

ಉದಯಗಿರಿ ಗಲಭೆ: ಅಷ್ಟೂ ಕಾಮನ್ ಸೆನ್ಸ್ ಇಲ್ವಾ; ಪೊಲೀಸರ ವಿರುದ್ಧ ಸಚಿವ ರಾಜಣ್ಣ ಗರಂ

ಪೊಲೀಸರಿಗೆ ಕನಿಷ್ಠ ಸಾಮಾನ್ಯ ಇಲ್ಲವೇ? ಆರೋಪಿ ಬಂಧನದ ನಂತರ ನಡೆದ ಎಲ್ಲಾ ಘಟನೆಗಳಿಗೆ ಪೊಲೀಸರೇ ಕಾರಣ.

ಬೆಂಗಳೂರು: ಮೈಸೂರಿನ ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ಸಚಿವ ರಾಜಣ್ಣ ಅವರು ತೀವ್ರ ಗರಂ ಆಗಿದ್ದಾರೆ.

ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಕನಿಷ್ಠ ಸಾಮಾನ್ಯ ಇಲ್ಲವೇ? ಆರೋಪಿ ಬಂಧನದ ನಂತರ ನಡೆದ ಎಲ್ಲಾ ಘಟನೆಗಳಿಗೆ ಪೊಲೀಸರೇ ಕಾರಣ ಎಂದು ಕಿಡಿಕಾರಿದರು.

ಯಾರೋ ಒಬ್ಬ ಈ ಕೃತ್ಯ ಎಸಗಿದ್ದಾನೆ. ಕಾನೂನು ಪ್ರಕಾರ ಅವನು ಮಾಡಿದ್ದು ತಪ್ಪು. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತನನ್ನು ಉದಯಗಿರಿ ಪೊಲೀಸ್ ಠಾಣೆಯಲ್ಲೇಕೆ ಇಡಬೇಕಿತ್ತು? ಉದಯಗಿರಿ ಪ್ರದೇಶ ಮುಸ್ಲಿಮರು ಹೆಚ್ಚಿರುವ ಸ್ಥಳ. ಸಹಜವಾಗಿ ಜನ ಒಟ್ಟಾಗಿ ಸೇರಿದ್ದಾರೆ. ಗಲಾಟೆ ಮಾಡಿದ್ದಾರೆಂದು ಹೇಳಿದ್ದಾರೆ.

ಪೊಲೀಸರಿಗೆ ಉದಯಗಿರಿ ಠಾಣೆ ಬದಲು ಬೇರೆ ಠಾಣೆಯಲ್ಲಿ ಇಡಲು ಏನಾಗಿತ್ತು? ಅಷ್ಟು ಕಾಮನ್ ಸನ್ಸ್ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲಸಕ್ಕೆ ಬಾರದವರು, ದಾರಿಹೋಕರಿಗೂ ಗೊತ್ತಿರುವಂತಹ ಪ್ರಾಥಮಿಕ ವಿಚಾರ ದೊಡ್ಡ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ಹಿಂದೆ-ಮುಂದೆ ಹತ್ತಾರು ಸಿಬ್ಬಂದಿಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಪೊಲೀಸರಿಗೆ ಗೊತ್ತಾಗದೇ ಇರುವುದು ವಿಷಾದಕರ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್ ಪಿಸುಮಾತು ವಿವಾದ: ಮಧು ಬಂಗಾರಪ್ಪ ಜೊತೆಗಿನ ಮಾತುಕತೆ ಬಗ್ಗೆ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

'ಬೇಡ ಬ್ರೋ': ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಬಂಧನ!

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!