ಜಿಐಎಂನಲ್ಲಿ ಕನಡಾ ಫೋನೆಮ್ಯಾಟಿಕ್ ಅಭಿವೃದ್ಧಿಪಡಿಸಿದ ಕೀಬೋರ್ಡ್ ಪ್ರದರ್ಶನದಲ್ಲಿ  
ರಾಜ್ಯ

10 ಭಾಷೆಗಳಲ್ಲಿ ಪ್ರತಿಲಿಪಿ ಮಾಡುವ ಕೀಬೋರ್ಡ್: GIM ನಲ್ಲಿ ಗಮನಸೆಳೆದ Kanaada Phonematic

ಇದರ ಕೀಬೋರ್ಡ್ ಬಳಸಲು ಸುಲಭವಾಗಿದೆ - ಅದನ್ನು ಪ್ಲಗ್ ಇನ್ ಮಾಡಿ, ಫೋನ್‌ಗಳು ಸೇರಿದಂತೆ ಯಾವುದೇ ಸಾಧನಕ್ಕೆ ಸಂಪರ್ಕಿಸಬಹುದು.

ಬೆಂಗಳೂರು: ಹೊಸ ಭಾಷೆಯನ್ನು ಕಲಿಯಬಹುದಾದರೂ, ಪ್ರಾದೇಶಿಕ ಭಾರತೀಯ ಭಾಷೆಯಲ್ಲಿ ಟೈಪ್ ಮಾಡುವುದು ಯಾವಾಗಲೂ ಸವಾಲಿನ ಕೆಲಸ, ಅನುವಾದಗಳು ಭಾಗಶಃ ಮಾತ್ರ ಸಹಾಯ ಮಾಡಬಹುದು.

ಈ ಸಮಸ್ಯೆ ಬಗೆಹರಿಸಲು, ಕನಡಾ ಫೋನೆಮ್ಯಾಟಿಕ್ 10 ಇಂಚಿನ ಕೀಬೋರ್ಡ್ ನ್ನು ಅಭಿವೃದ್ಧಿಪಡಿಸಿದೆ, ಇದನ್ನು ಬೆಂಗಳೂರಿನಲ್ಲಿ ಏರ್ಪಟ್ಟ ಜಾಗತಿಕ ಹೂಡಿಕೆದಾರರ ಸಮಾವೇಶ(GIM)ನಲ್ಲಿ ಪ್ರದರ್ಶಿಸಲಾಗಿದೆ, ಇದು ಬಳಕೆದಾರರಿಗೆ ಒಂದೇ ಭಾಷೆಯಲ್ಲಿ ಪಠ್ಯವನ್ನು ನಮೂದಿಸುವ ಮೂಲಕ 10 ಭಾರತೀಯ ಭಾಷೆಗಳಲ್ಲಿ ಪ್ರತಿಲಿಪಿಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಭಾರತೀಯ ಭಾಷೆಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಮತ್ತು ಜನರು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ ನಂತರ ಅನುವಾದಿಸದೆ ನೇರವಾಗಿ ತಮ್ಮ ಸ್ಥಳೀಯ ಭಾಷೆಗಳಲ್ಲಿ ಟೈಪ್ ಮಾಡುವುದನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಕಂಪನಿಯ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು. ಇದರ ಕೀಬೋರ್ಡ್ ಬಳಸಲು ಸುಲಭವಾಗಿದೆ - ಅದನ್ನು ಪ್ಲಗ್ ಇನ್ ಮಾಡಿ, ಫೋನ್‌ಗಳು ಸೇರಿದಂತೆ ಯಾವುದೇ ಸಾಧನಕ್ಕೆ ಸಂಪರ್ಕಿಸಬಹುದು.

ಕೀಬೋರ್ಡ್‌ನ ಬೆಲೆ 2,000 ರೂಪಾಯಿಗಳಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಪಂಜಾಬಿ ಮತ್ತು ಬಂಗಾಳಿ ಸೇರಿದಂತೆ 10 ಭಾಷೆಗಳಲ್ಲಿ ಟೈಪ್ ಮಾಡಲು ಸಾಧ್ಯವಾಗುತ್ತದೆ.

ಪ್ರಸ್ತುತ, ಕರ್ನಾಟಕ ಸರ್ಕಾರದ ಅಡಿಯಲ್ಲಿರುವ ಇಲಾಖೆಗಳು ಸೇರಿದಂತೆ ಎಲ್ಲಾ ಇಲಾಖೆಗಳು, ಕನ್ನಡ ಅಕ್ಷರಗಳ ಬದಲಿಗೆ ಇಂಗ್ಲಿಷ್‌ನಲ್ಲಿ ಇನ್‌ಪುಟ್‌ಗಳನ್ನು ಟೈಪ್ ಮಾಡುವ ಸಾಫ್ಟ್‌ವೇರ್ ನ್ನು ಬಳಸುತ್ತವೆ. ಈ ಹೊಸ ಉಪಕರಣ ಮೂಲಕ, ಬಳಕೆದಾರರು ತಮ್ಮ ಆದ್ಯತೆಯ ಭಾಷೆಯನ್ನು ಟೈಪ್ ಮಾಡಬಹುದು ಮತ್ತು ಬಯಸಿದ ಭಾಷೆಯಲ್ಲಿ ಪ್ರತಿಲೇಖನವನ್ನು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT