ಸಂಗ್ರಹ ಚಿತ್ರ 
ರಾಜ್ಯ

Valentine's day 2025: ಈ ಬಾರಿ ಬೆಂಗಳೂರಿನಿಂದ ವಿದೇಶಕ್ಕೆ 4.40 ಕೋಟಿ ಗುಲಾಬಿ ರಫ್ತು!

ಈ ಬಾರಿಯ ಪ್ರೇಮಿಗಳ ದಿನದಂದು 22 ಅಂತರರಾಷ್ಟ್ರೀಯ ಮತ್ತು 38 ದೇಶೀಯ ತಾಣಗಳಿಗೆ 1,649 ಮೆಟ್ರಿಕ್ ಟನ್ (MT) ತೂಕದ 44 ಮಿಲಿಯನ್ ಗುಲಾಬಿ ಸಾಗಣೆ ಮಾಡಲಾಗಿದ್ದು, ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ.

ಬೆಂಗಳೂರು: ಪ್ರೇಮಿಗಳ ದಿನದಂದು ಗುಲಾಬಿಗಳಿಗೆ ಜಾಗತಿಕವಾಗಿ ಉತ್ತಮ ಬೇಡಿಕೆ ವ್ಯಕ್ತವಾದ ಹಿನ್ನಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಲಾಬಿ ರಫ್ತಿನಲ್ಲಿ ದಾಖಲೆ ನಿರ್ಮಿಸಲಾಗಿದೆ.

ಈ ಬಾರಿಯ ಪ್ರೇಮಿಗಳ ದಿನದಂದು 22 ಅಂತರರಾಷ್ಟ್ರೀಯ ಮತ್ತು 38 ದೇಶೀಯ ತಾಣಗಳಿಗೆ 1,649 ಮೆಟ್ರಿಕ್ ಟನ್ (MT) ತೂಕದ 44 ಮಿಲಿಯನ್ ಗುಲಾಬಿ ಸಾಗಣೆ ಮಾಡಲಾಗಿದ್ದು, ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.50ರಷ್ಟು ಹೆಚ್ಚಿನ ಗುಲಾಬಿ ಹೂಗಳನ್ನು ಸಾಗಿಸಲಾಗಿದೆ. ಸತತ ನಾಲ್ಕನೇ ವರ್ಷ ಗುಲಾಬಿ ರಫ್ತಿನಲ್ಲಿ ಕೆಐಎ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.

ಸಿಂಗಾಪುರ, ಕೌಲಾಲಂಪುರ, ಶಾರ್ಜಾ, ಕುವೈತ್, ಮನಿಲಾ, ರಿಯಾದ್, ಕೊಲಂಬೋ, ಅಬಿಧಾಬಿ ಸೇರಿದಂತೆ ಮತ್ತಿತರ ಅಂತರಾಷ್ಟ್ರೀಯ ನಗರಗಳಿಗೆ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ.

ಅದೇ ರೀತಿ ದೆಹಲಿ, ಮುಂಬೈ, ಕೋಲ್ಕತಾ, ಜೈಪುರ, ಉದಯಪುರ ಸೇರಿದಂತೆ ಮತ್ತಿತರ ರಾಜ್ಯಗಳಿಗೆ ಸಾಗಿಸಲಾಗಿದೆ. ಅಂತರಾಷ್ಟ್ರೀಯ ತಾಣಗಳಿಗೆ ಹಿಂದಿನ ವರ್ಷಕ್ಕಿಂತ ಶೇ.51ರಷ್ಟು ಹೆಚ್ಚು ಹಾಗೂ ದೇಶೀಯ ನಗರಗಳಿಗೆ ಶೇ.32 ರಷ್ಟು ಹೆಚ್ಚಿನ ಹೂಗಳನ್ನು ರಫ್ತು ಮಾಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣವು ಈ ವರ್ಷ ಹೊಸ ರಫ್ತು ತಾಣಗಳನ್ನು ತನ್ನ ಸುಪರ್ಧಿಗೆ ಸೇರಿಸಿಕೊಂಡಿದೆ. ಅಬುಧಾಬಿ, ಜೆದ್ದಾ, ಬೈರುತ್, ಟೋಕಿಯೊ, ಬಹ್ರೇನ್ ಮತ್ತು ದಮ್ಮಾಮ್‌ಗೆ ರಫ್ತು ಮಾಡುತ್ತಿದೆ.

ಕೊಯ್ಲು ಮಾಡಿದ ಹೂವುಗಳನ್ನು ತಾಜಾ ರೂಪದಲ್ಲಿ ಇನ್ನೊಂದು ಸ್ಥಳಕ್ಕೆ ರಫ್ತು ಮಾಡುವುದು ಅತೀ ಅಗತ್ಯ ಮತ್ತು ಇದೊಂದು ಸವಾಲು ಕೂಡ ಆಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ Coolport ಸೌಲಭ್ಯವು ತಾಪಮಾನ, ಸಂಗ್ರಹಣೆ, ನಿರ್ವಹಣೆ ಮತ್ತು ಸಾಗಣೆಗೆ ನೆರವಾಗುತ್ತಿವೆ. ನಿಖರ ತಾಪಮಾನ, ತ್ವರಿತ ಸಾಗಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೂವುಗಳು ತಾಜಾವಾಗಿ ಗ್ರಾಹಕರನ್ನು ತಲುಪುವಂತೆ ಮಾಡಲಾಗುತ್ತದೆ. ಇದರಿಂದಾಗಿ ಪ್ರೇಮಿಗಳ ದಿನದ ಸಂದರ್ಭದಲ್ಲಿ ಹೆಚ್ಚುವ ಹೂವುಗಳು ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಿದೆ ಎಂದು ಕೆಐಎ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT