ಹೊಸಪೇಟೆ: ಹಂಪಿ ಉತ್ಸವಕ್ಕಾಗಿ ಪೌರಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ 2000 ಕ್ಕೂ ಹೆಚ್ಚು ವಿಐಪಿ ಪಾಸ್‌ಗಳನ್ನು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಗುರುವಾರ ವಿತರಿಸಿದರು.
ದಿವಾಕರ್ ಅವರು ಹೊಸಪೇಟೆ ಪಟ್ಟಣದ ಪೌರಕಾರ್ಮಿಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪಾಸ್‌ಗಳನ್ನು ವಿತರಿಸಿದರು ಮತ್ತು ಅವರ ಕುಟುಂಬಗಳೊಂದಿಗೆ ಭೋಜನ ಸವಿದರು. ಪೌರಕಾರ್ಮಿಕರು ಮತ್ತು ಕುಷ್ಠರೋಗ ಪೀಡಿತರಿಗೆ ವಿಐಪಿ ಪಾಸ್‌ಗಳನ್ನು ವಿತರಿಸಲಾಯಿತು.
ಪ್ರತಿದಿನ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಸಲ್ಲಿಸುವ ಗೌರವ ಎಂದು ಡಿಸಿ ದಿವಾಕರ್ ಹೇಳಿದರು. "ಹಬ್ಬದ ಸಮಯದಲ್ಲಿ ಮತ್ತು ವರ್ಷದ ಉಳಿದ ದಿನಗಳಲ್ಲಿ ನಗರದ ನಿರ್ವಹಣೆ ಅವರು ಜವಾಬ್ದಾರಿಯಾಗಿರುತ್ತದೆ. ಮೊದಲ ಬಾರಿಗೆ, ನಾವು ಅವರಿಗೆ ಪ್ರತ್ಯೇಕ ಗ್ಯಾಲರಿಯನ್ನು ಕಾಯ್ದಿರಿಸಿದ್ದೇವೆ ಆದ್ದರಿಂದ ಅವರು ಎಲ್ಲಾ ಮನರಂಜನೆ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
ಹಂಪಿ ಉತ್ಸವಕ್ಕಾಗಿ 500 ಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ, ಆದರೆ ಅನೇಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮಗಳನ್ನು ನೋಡುವ ಕನಸು ಕಾಣುತ್ತಾರೆ ಎಂದು ದಿವಾಕರ ಹೇಳಿದರು. ಇದು ಜಿಲ್ಲಾಡಳಿತದಿಂದ ಸಂದ ಗೌರವ. ನಾನು ಪಾಸ್‌ಗಳನ್ನು ವಿತರಿಸಲು ಹೋದಾಗ ಅವರೊಂದಿಗೆ ಊಟ ಮಾಡಿದೆ. ಅವರ ಪ್ರೀತಿ ಮತ್ತು ವಾತ್ಸಲ್ಯ ಅವಿಸ್ಮರಣೀಯ" ಎಂದು ಅವರು ಹೇಳಿದರು.
ಹೊಸಪೇಟೆಯಲ್ಲಿ ಕಾರ್ಮಿಕರ ನಿವಾಸಗಳಿಗೆ ಜಿಲ್ಲಾಧಿಕಾರಿಯೇ ಭೇಟಿ ನೀಡಿದ್ದು ಪೌರಕಾರ್ಮಿಕರಲ್ಲಿ ಒಬ್ಬರಾದ ನಾಗಪ್ಪ ಹರಿಜನರಿಗೆ ತುಂಬಾ ಸಂತೋಷ ತಂದಿತು. "ಡಿಸಿ ನನ್ನ ಕುಟುಂಬವನ್ನು ಆಹ್ವಾನಿಸಿ ವಿಐಪಿ ಪಾಸ್ ನೀಡಿದರು.
ಹಂಪಿ ಉತ್ಸವದ ಸಮಯದಲ್ಲಿ, ನಾನು ನನ್ನ ಕುಟುಂಬದೊಂದಿಗೆ ಹೋಗಬೇಕೆಂದು ಯಾವಾಗಲು ಬಯಸುತ್ತಿದ್ದೆ ಆದರೆ ಅದು ಸಾಧ್ಯವಾಗಿರಲ್ಲಿಲ್ಲ. ಈಗ ಜಿಲ್ಲಾಧಿಕಾರಿಗಳು ವಿಐಪಿ ಪಾಸ್ ನೀಡಿರುವುದರಿಂದ ಬೇರೆ ವಿಐಪಿಗಳಂತೆ ನನ್ನ ಕುಟುಂಬದ ಜೊತೆ ಉತ್ಸವವನ್ನು ಆನಂದಿಸಲು ಸಹಾಯ ಮಾಡುತ್ತದೆ ನಾಗಪ್ಪ ಹರಿಜನ ಸಂತೋಷ ವ್ಯಕ್ತ ಪಡಿಸಿದ್ದಾರೆ.