ಸಚಿವ ಎಂಬಿ ಪಾಟೀಲ್ 
ರಾಜ್ಯ

ಜಾತಿ ಗಣತಿಯಲ್ಲಿ ಉಪಪಂಗಡಗಳನ್ನು ಪರಿಗಣಿಸದಿದ್ದರೆ ಲಿಂಗಾಯತ ಸಮುದಾಯಕ್ಕೆ ಅನ್ಯಾಯ: ಎಂ.ಬಿ ಪಾಟೀಲ್

ಗುರುವಾರಕ್ಕೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ವಿವಾದಾತ್ಮಕ ಜಾತಿ ಗಣತಿ ವರದಿ ಮಂಡನೆಯನ್ನು ಸಿಎಂ ಸಿದ್ದರಾಮಯ್ಯ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಬೆಂಗಳೂರು: ಜಾತಿ ಗಣತಿ ವರದಿಯಲ್ಲಿ ಉಪಪಂಗಡಗಳನ್ನು ಲಿಂಗಾಯತ ಸಮುದಾಯದ ಭಾಗವೆಂದು ಪರಿಗಣಿಸದಿದ್ದರೆ ಬಹುದೊಡ್ಡ ಅನ್ಯಾಯವಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಗುರುವಾರ ಹೇಳಿದ್ದಾರೆ.

ಗುರುವಾರಕ್ಕೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯಲ್ಲಿ ವಿವಾದಾತ್ಮಕ ಜಾತಿ ಗಣತಿ ವರದಿ ಮಂಡನೆಯನ್ನು ಸಿಎಂ ಸಿದ್ದರಾಮಯ್ಯ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಕಾಂಗ್ರೆಸ್‌ನ ಒಳಜಗಳದ ನಡುವೆಯೇ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪಾಟೀಲ್, ಲಿಂಗಾಯತ ಉಪಪಂಗಡದ ಜನರು ತಮ್ಮ ಜಾತಿಗಳನ್ನು ಹಿಂದೂ ಗಾಣಿಗ, ಹಿಂದೂ ಸಾಧು, ಹಿಂದೂ ಬಣಜಿಗ, ಹಿಂದೂ ರೆಡ್ಡಿ ಮತ್ತು ಇತರರು ಎಂದು ನಮೂದಿಸಿದ್ದಾರೆ. ಅವರೆಲ್ಲರೂ ಲಿಂಗಾಯತ ಸಮುದಾಯದ ಉಪಪಂಗಡಗಳು. ಮೀಸಲಾತಿಯನ್ನು ಪಡೆಯಲು ಅವರು ಹಿಂದೂ ಗಾಣಿಗ ಮತ್ತು ಇತರ ವಿಶೇಷಣಗಳನ್ನು ಸೇರಿಸಿ ನೋಂದಾಯಿಸಿಕೊಂಡಿದ್ದಾರೆ. ಇದು ಅವರು ಲಿಂಗಾಯತರು ಅಲ್ಲ ಎಂದು ಅರ್ಥವಲ್ಲ ಎಂದರು.

'ಅವರನ್ನೂ ಎಣಿಸಬೇಕು. ಎಣಿಸಿದಾಗ ನಿಜವಾದ ಚಿತ್ರಣ ದೊರೆಯುತ್ತದೆ. ಆ ಕಸರತ್ತು ಮಾಡಬೇಕು. ಅವರು ಏನೇ ನೋಂದಾಯಿಸಿಕೊಂಡಿದ್ದರೂ ಅವುಗಳೆಲ್ಲ ಲಿಂಗಾಯತ ಸಮುದಾಯದ ಉಪಜಾತಿಗಳು ಎಂಬುದು ಎಲ್ಲರಿಗೂ ಗೊತ್ತು. ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಂದೇ ಸೂರಿನಡಿ ತಂದು ಎಣಿಕೆ ನಡೆಸಬೇಕು' ಎಂದರು.

'ಜಾತಿ ಗಣತಿ ವರದಿ ಬಗ್ಗೆ ನನಗೆ ತಿಳಿದಿಲ್ಲ. ಅದನ್ನು ಇನ್ನೂ ಮಂಡಿಸಬೇಕಾಗಿದೆ. ವರದಿಯನ್ನು ಸಾರ್ವಜನಿಕಗೊಳಿಸದ ಕಾರಣ ವೈಜ್ಞಾನಿಕವಾಗಿ ಮಾಡಿಲ್ಲ ಎಂದು ನಾನು ಈ ಹಂತದಲ್ಲಿ ಹೇಳಲಾರೆ. ವರದಿ ಸರಿಯಾಗಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ, ತಪ್ಪಿದ್ದರೆ ಮುಖ್ಯಮಂತ್ರಿಗೆ ತಿಳಿಸುತ್ತೇವೆ' ಎಂದು ಪಾಟೀಲ್ ಹೇಳಿದರು.

'ಲಿಂಗಾಯತ ಸಮುದಾಯದ ಜನಸಂಖ್ಯೆ 65 ಲಕ್ಷ ಎಂದು ವರದಿ ಮಾಡಿರುವುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಸಂಖ್ಯೆಯಲ್ಲಿ ಉಪಜಾತಿಗಳನ್ನು ಸೇರಿಸಿದ್ದರೆ ಪರವಾಗಿಲ್ಲ. ಒಂದು ವೇಳೆ ಉಪಜಾತಿಗಳನ್ನು ಪರಿಗಣಿಸದಿದ್ದರೆ ಅದು ತಪ್ಪು. ಜಾತಿ ಗಣತಿ ವರದಿಯಲ್ಲಿನ ವಿವರಗಳನ್ನು ಹೇಗೆ ಪಡೆಯುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳು ಹೇಳಬೇಕು' ಎಂದು ತಿಳಿಸಿದರು.

ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ವೀರಶೈವ ಮಹಾಸಭಾ ಮತ್ತು ಇತರ ಸಂಘಟನೆಗಳು ಸ್ವತಂತ್ರವಾಗಿದ್ದು, ಅವರ ಬಗ್ಗೆ ನಾನು ಮಾತನಾಡಲಾರೆ. ಅವರಿಗೆ ಅವರ ಹಕ್ಕುಗಳಿವೆ. ಎಲ್ಲ ಲಿಂಗಾಯತ ಉಪಪಂಗಡಗಳನ್ನು ಒಂದೇ ಸೂರಿನಡಿ ಸೇರಿಸುವುದು ನನ್ನ ನಿಲುವು. ಗಾಣಿಗ, ಸಾಧು, ಬಣಜಿಗ, ಮಾಲಗರಿಗೆ 2ಎ ವರ್ಗದಲ್ಲಿ ಮೀಸಲಾತಿ ದೊರೆತರೆ, ರೆಡ್ಡಿಗಳಿಗೆ 3ಎ ವರ್ಗದಲ್ಲಿ ಮೀಸಲಾತಿ ದೊರೆಯುತ್ತಿದೆ. ವರದಿಯಲ್ಲಿ ಅವರನ್ನು ಬಿಟ್ಟರೆ ದೊಡ್ಡ ಅನ್ಯಾಯ ಎಂದು ಒತ್ತಿ ಹೇಳಿದರು.

ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಮೊದಲನೆಯದಾಗಿ, ಜಾತಿ ಗಣತಿ ಸಾಧ್ಯವಿಲ್ಲ. ಜಾತಿ ಗಣತಿಯನ್ನು ಭಾರತ ಸರ್ಕಾರದಿಂದ ಮಾತ್ರ ಮಾಡಬಹುದಾಗಿದೆ. ಇದು ಒಂದು ವ್ಯಾಯಾಮ, ಇದು ಸಮೀಕ್ಷೆಯಾಗಿದೆ. ಅದರಂತೆ, ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿವೆ ಎಂದು ನಾವು ಹೇಳಿದ್ದೇವೆ ಎಂದು ಅವರು ಹೇಳಿದರು.

2014 ರಲ್ಲಿ ಸಿದ್ದರಾಮಯ್ಯ (ಅವರು ಸಿಎಂ ಆಗಿದ್ದ ಮೊದಲ ಅವಧಿಯಲ್ಲಿ) ಕರ್ನಾಟಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಜನಗಣತಿಗೆ ಆದೇಶಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT