ಆರೋಪಿಗಳು. 
ರಾಜ್ಯ

ಬೀದರ್ ಶೂಟೌಟ್-ದರೋಡೆ ಪ್ರಕರಣ: ಎಸ್ಕೇಪ್‌ ಆಗಿದ್ದ ಖದೀಮರು ಹೈದರಾಬಾದ್‌ನಲ್ಲಿ ಅಂದರ್?

ಬೀದರ್‌ನಲ್ಲಿ ಬ್ಯಾಂಕ್‌ ಸಿಬ್ಬಂದಿ ಹತ್ಯೆ ಮಾಡಿ 93 ಲಕ್ಷ ರೂ. ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಬಳಿಕ ಬೀದರ್ ರೀತಿ ಹೈದ್ರಾಬಾದ್‌ನಲ್ಲೂ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು.

ಬೀದರ್: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಬ್ಯಾಂಕ್‌ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ, ಹಾಡಹಗಲೇ ದರೋಡೆ ಮಾಡಿ ಆತಂಕ ಮೂಡಿಸಿದ್ದ ಇಬ್ಬರು ಖದೀಮರನ್ನು ಹೈದರಾಬಾದ್‌ನಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಬೀದರ್‌ನಲ್ಲಿ ಬ್ಯಾಂಕ್‌ ಸಿಬ್ಬಂದಿ ಹತ್ಯೆ ಮಾಡಿ 93 ಲಕ್ಷ ರೂ. ಹಣದೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಬಳಿಕ ಬೀದರ್ ರೀತಿ ಹೈದ್ರಾಬಾದ್‌ನಲ್ಲೂ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಬೀದರ್ ಪೊಲೀಸ್ ಮೂಲಗಳು ಮಾತ್ರ ಇದುವರೆಗೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ತಿಳಿಸಿವೆ.

ದುಷ್ಕರ್ಮಿಗಳು ಛತ್ತೀಸ್ಗಢದ ರಾಯಪುರಕ್ಕೆ ಹೋಗುವ ತಯಾರಿಯಲ್ಲಿದ್ದು, ಇದಕ್ಕಾಗಿ ದುಷ್ಕರ್ಮಿಗಳು ಖಾಸಗಿ ಬಸ್​ ಟ್ರಾವೆಲ್​ನಲ್ಲಿ ಟಿಕೆಟ್​ ಕಾಯ್ದಿರಿಸಿದ್ದರು. ಸಂಜೆ 7.30 ಕ್ಕೆ ಬಸ್​​ ಹೊರಡಬೇಕಿತ್ತು. ಅದಕ್ಕೂ ಮೊದಲು ಆರೋಪಿಗಳನ್ನು ಟ್ರಾವೆಲ್​ ಏಜೆನ್ಸಿ ಅವರನ್ನು ಪಿಕಪ್​ ಮಾಡಿದ್ದಾರೆ. ಈ ವೇಳೆ ಆರೋಪಿಗಳ ಲಗೇಜ್​ ಅನ್ನು ಬಸ್​ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್​ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡು ಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನಿಸಿದಾಗ ಅವರಿಗೇ ಸ್ವಲ್ಪ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ಅದೇ ಪಿಕಪ್​ ವ್ಯಾನ್​​ನಲ್ಲಿ ಇದ್ದ ಕರ್ನಾಟಕ ಪೊಲೀಸರು ಇದನ್ನು ಗಮನಿಸಿದ್ದಾರೆ.

ಪೊಲೀಸರು ಎಂದು ತಿಳಿದ ತಕ್ಷಣವೇ ಆರೋಪಿಗಳು ತಮ್ಮ ಬ್ಯಾಗ್​ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್​ ಏಜೆನ್ಸಿ ಮ್ಯಾನೇಜರ್​ ಹೊಟ್ಟೆಗೆ ಬುಲೆಟ್​​ ಹೊಕ್ಕಿದೆ. ಸ್ಥಳದಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ.

ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ. ಸದ್ಯ ಆರೋಪಿಗಳು ಅಫ್ಜಲ್​ಗಂಜ್​ ಪೊಲೀಸರ ವಶದಲ್ಲಿದ್ದು, ಬೀದರ್​ ಪೊಲೀಸರು ಕಸ್ಟಡಿಗೆ ನೀಡಲು ಕೋರಲಿದ್ದಾರೆ ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ

ಫುಟ್‌ಪಾತ್‌ ಮೇಲೆ ಮತ್ತೆ ಅಂಗಡಿ ಹಾಕಿದ್ರೆ ಸಾಮಗ್ರಿಗಳನ್ನ ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸಿ: ಕೃಷ್ಣ ಬೈರೇಗೌಡ ಖಡಕ್ ಸೂಚನೆ

'ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಿ ಶಾಲೆಗಳ ಸುಧಾರಣೆಗೆ 'ಪಿಎಂ ಕೇರ್ಸ್ ಫಂಡ್' ಬಳಸಲಿ: ಅಭಿಜಿತ್ ದೀಪ್ಕೆ ಆಗ್ರಹ

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

Ind Vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯದ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!