ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ 
ರಾಜ್ಯ

ಬೆಂಗಳೂರು: ತನ್ನ ಜೀವ ಉಳಿಸಿದ ಆಸ್ಪತ್ರೆಗೇ ಇಂಟರ್ನಿ ವೈದ್ಯೆಯಾಗಿ ಬಂದ ಮಹಿಳೆ!

2018 ರಲ್ಲಿ ಸಾರಾಗೆ AVM ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು.

ಬೆಂಗಳೂರು: 16ನೇ ವಯಸ್ಸಿನಲ್ಲಿ, ಸಾರಾ ಗೊಮೆಜ್ ತೀವ್ರ ತಲೆನೋವಿನಿಂದ ಕಾಲೇಜಿನ ಪ್ರಯೋಗಾಲಯದಲ್ಲಿ ಕುಸಿದುಬಿದ್ದಿದ್ದಳು. ಇದು ಅನೇಕರು ನಿಯಮಿತ ಮೈಗ್ರೇನ್ ಎಂದು ಭಾವಿಸಿದ್ದರು. ಆದರೆ ಇದು ಮೆದುಳಿನ ಪಾರ್ಶ್ವವಾಯು ಎಂದು ಆಸ್ಪತ್ರೆಗೆ ದಾಖಲಾದ ನಂತರ ತಿಳಿದುಬಂತು. ಏಳು ವರ್ಷಗಳ ನಂತರ ತಾನು ಮೆದುಳಿನ ಪಾರ್ಶ್ವವಾಯುಗೆ ಚಿಕಿತ್ಸೆ ಪಡೆದ, ತನ್ನ ಜೀವ ಉಳಿಸಿದ ಅದೇ ಆಸ್ಪತ್ರೆಗೆ ಈಗ ವೈದ್ಯೆಯಾಗಿ ಮರಳಿದ್ದಾರೆ. ತನಗೆ ಶಸ್ತ್ರಚಿಕಿತ್ಸೆ ಮಾಡಿದ ನರಶಸ್ತ್ರಚಿಕಿತ್ಸಕರಿಂದ ವೈದ್ಯಕೀಯ ಇಂಟರ್ನಿಯಾಗಿ ಬಂದಿದ್ದಾರೆ.

2018 ರಲ್ಲಿ ಸಾರಾಗೆ ಅಪಧಮನಿಯ ವಿರೂಪ(AVM) ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಒಂದು ವರ್ಷದ ಚೇತರಿಕೆಯ ನಂತರ, ಅವರು ತಮಿಳುನಾಡಿನ ಸೇಲಂನಲ್ಲಿರುವ ವೈದ್ಯಕೀಯ ಕಾಲೇಜನ್ನು ಸೇರಿದರು. ರೋಗಿಯಾಗಿ ಅವರ ಅನುಭವವು ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು. ಮೇ 2025 ರಲ್ಲಿ, ಅವರ ಸೆಮಿಸ್ಟರ್ ವಿರಾಮದ ಸಮಯದಲ್ಲಿ, ಅವರು ಇದೇ ಆಸ್ಪತ್ರೆಗೆ ಮರಳಿದ್ದು, ಈ ಬಾರಿ ರೋಗಿಯಾಗಿ ಅಲ್ಲ, ಅವರಿಗೆ ಚಿಕಿತ್ಸೆ ನೀಡಿದ ವೈದ್ಯರಿಂದ ತರಬೇತಿಗಾಗಿ ಬಂದಿದ್ದಾರೆ.

ನವೆಂಬರ್ 2018 ರಲ್ಲಿ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಆಗ ಪ್ರಥಮ ವರ್ಷದ ಪ್ರಿ-ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿದ್ದ ಸಾರಾ, ತನ್ನ ಪ್ರಯೋಗಾಲಯ ತರಗತಿಯ ಸಮಯದಲ್ಲಿ ಮೂರ್ಛೆ ಹೋಗಿ ಬಿದ್ದರು. ಆಕೆಗೆ ತೀವ್ರ ತಲೆನೋವು, ವಾಂತಿ ಶುರುವಾಯಿತು ಮತ್ತು ಶೀಘ್ರದಲ್ಲೇ ಪ್ರಜ್ಞೆ ತಪ್ಪಿತು. ತಕ್ಷಣ ಆಕೆಯನ್ನು ಜೈನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ವೈದ್ಯರು ಆಕೆಗೆ AVM ಇದೆ ಎಂದು ಕಂಡುಕೊಂಡರು.

PRS ನರವಿಜ್ಞಾನ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಮತ್ತು ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಶರಣ್ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. "ಸಾರಾ ಅವರ ಗ್ಲ್ಯಾಸ್ಗೋ ಕೋಮಾ ಸ್ಕೇಲ್ ಸ್ಕೋರ್ ಮೂರು ಆಗಿತ್ತು - ಅದು ಅತ್ಯಂತ ಕಡಿಮೆ. ತಕ್ಷಣದ ಚಿಕಿತ್ಸೆ ಇಲ್ಲದಿದ್ದರೆ, ಅವರು ಬದುಕುಳಿಯುತ್ತಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಸಾರಾ ಅವರ ತಂದೆ ಎಸ್ಟನ್ ಗೊಮೆಜ್ ಅವರು ಆಕೆಗೆ 8ನೇ ತರಗತಿಯಿಂದ ಮೈಗ್ರೇನ್ ತರಹದ ತಲೆನೋವು ಇತ್ತು. ಆದರೆ ಅದು ಅಧ್ಯಯನದ ಒತ್ತಡದಿಂದ ಬರುತ್ತಿದೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.

ಸಾರಾ ತನಗೆ ಸ್ಟ್ರೋಕ್ ಆಗುವ ಮುನ್ನ ಪೈಲಟ್ ಆಗಲು ಬಯಸಿದ್ದರು. ಆದರೆ ಅವರ ವೈದ್ಯಕೀಯ ಬಿಕ್ಕಟ್ಟು ಎಲ್ಲವನ್ನೂ ಬದಲಾಯಿಸಿತು. "ಪಾರ್ಶ್ವವಾಯು ನನಗೆ ಒಂದು ಉದ್ದೇಶವನ್ನು ನೀಡಿತು. ನಾನು ಚೇತರಿಸಿಕೊಳ್ಳಲು ಒಂದು ವರ್ಷ ರಜೆ ತೆಗೆದುಕೊಂಡೆ. ಆದರೆ 2020 ರಿಂದ, ನನಗೆ ಔಷಧಿಗಳ ಅಗತ್ಯವಿಲ್ಲ. ಈಗ ನಾನು ನರರೋಗಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದೇನೆ" ಎಂದು ಡಾ. ಶರಣ್ ಅವರ ಮೇಲ್ವಿಚಾರಣೆಯಲ್ಲಿ ಜೈನ್ ಆಸ್ಪತ್ರೆಗೆ ಹಿಂತಿರುಗಿದ ಸಾರಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT