ಆಷಾಢ ಶುಕ್ರವಾರ ದಿನ ಸಂಸದ ತೇಜಸ್ವಿ ಸೂರ್ಯ ಅವರ ಮನೆಗೆ ವಿಶೇಷ ಅತಿಥಿಯ ಆಗಮನವಾಗಿದೆ. ಅದನ್ನು ಅವರು ತಮ್ಮ ಪತ್ನಿ ಗಾಯಕಿ ಶಿವಶ್ರೀ ಸ್ಕಂದ ಜೊತೆ ಪ್ರೀತಿಯಿಂದ ಸ್ವಾಗತಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ದಂಪತಿ ಮುದ್ದಾದ ಕರುವನ್ನು ಮನೆಗೆ ತಂದಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕರು ಉಡುಗೊರೆಯಾಗಿ ಅವರಿಗೆ ಸಿಕ್ಕಿದೆ. ಕರುವಿಗೆ ಗೌರಿ, ಲಕ್ಷ್ಮಿ, ರಾಧಾ ಎಂಬ ಹೆಸರುಗಳಿಂದ ಕರೆಯುತ್ತಿದ್ದಾರೆ.
ಶಿವಶ್ರೀ ಸ್ಕಂದ ಅವರು ತಮ್ಮ ಗಾಯನ ಮೂಲಕ ಕರುವನ್ನು ಅಪ್ಪಿ ಮುದ್ದಾಡಿದ್ದಾರೆ. ಈ ವಿಡಿಯೊವನ್ನು ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮನೆಗೆ ಆಗಮಿಸಿರುವ ಹೊಸ ಅತಿಥಿ ತುಂಬಾ ದೈವಿಕಳು. ಆಕೆ ಹಾಡುಗಳನ್ನು ಇಷ್ಟಪಡುತ್ತಾಳೆ ಎಂದು ತೇಜಸ್ವಿ ಸೂರ್ಯ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಆಂಧ್ರ ಪ್ರದೇಶದ ಬಿಜೆಪಿ ನಾಯಕ ಎಂ. ವಂಶಿ ಕೃಷ್ಣ ಅವರನ್ನು ಈ ಉಡುಗೊರೆಯನ್ನು ನೀಡಿದ್ದರು. ಈ ಉಡುಗೊರೆಯನ್ನು ನೀಡಿರುವ ವಂಶಿ ಕೃಷ್ಣ ಅವರಿಗೆ ತೇಜಸ್ವಿ ಸೂರ್ಯ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.