ವಿದ್ಯುತ್ ದರ ಏರಿಕೆ 
ರಾಜ್ಯ

ಮತ್ತೆ ದರ ಏರಿಕೆ ಶಾಕ್‌: ESCOM ಆದಾಯ ಅಂತರ ಸರಿದೂಗಿಸಲು ಜನರ ಜೇಬಿಗೆ ಕತ್ತರಿ..?

ಸರ್ಕಾರವು IP ಸೆಟ್‌ಗಳಿಗೆ ನೀಡಿರುವ ಸಬ್ಸಿಡಿ ಹೆಚ್ಚಾಗಿದೆ, ಇದನ್ನು ESCOM ಗಳು ನಿರ್ವಹಿಸಲು ಕಷ್ಟಕರವಾಗಿದೆ. ಹೀಗಾಗಿ ಆದಾಯವನ್ನು ಹೊಂದಿಸಲು, ESCOM ಗಳು ಗ್ರಾಹಕರ ಮೇಲೆ ಹೆಚ್ಚಿನ ಸುಂಕ ಹೇರಲು ಬಯಸುತ್ತಿದ್ದಾರೆ.

ಬೆಂಗಳೂರು: ಎಸ್ಕಾಂಗಳ ಆದಾಯ ಅಂತರ ಸರಿದೂಗಿಸಲು ಜನರ ಜೇಬಿಗೆ ಕತ್ತರಿ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದಬಂದಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ತಮ್ಮ 4,620 ಕೋಟಿ ರೂ.ಗಳ ಆದಾಯದ ಅಂತರವನ್ನು ತುಂಬಲು ವಿದ್ಯುತ್ ಸರಬರಾಜು ನಿಗಮ ನಿಯಮಿತ (ESCOM) ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ (KERC) ತಿದ್ದುಪಡಿ ಕೋರಿದೆ.

ಈ ಬಾಕಿ ಮೊತ್ತವು LT-4(A) ಗ್ರಾಹಕರಿಗೆ, ನೀರಾವರಿ ಪಂಪ್ ಸೆಟ್‌ಗಳ (IP ಸೆಟ್‌ಗಳು) ಗ್ರಾಹಕರಿಗೆ ನೀಡಲಾಗುವ ಸಬ್ಸಿಡಿಗೆ ಸಂಬಂಧಿಸಿದೆ.

ತಮ್ಮ ಆದಾಯದ ಅಂತರವನ್ನು ಸರಿದೂಗಿಸಲು ESCOMಗಳು ಮಾರ್ಚ್ 23, 2025 ರಂದು ಮೊದಲ ಬಾರಿಗೆ KERC ಮುಂದೆ ಮೇಲ್ಮನವಿ ಸಲ್ಲಿಸಿದವು. ಈ ಕುರಿತ ಚರ್ಚೆಯನ್ನು ಜುಲೈ 8 ರಂದು ನಡೆಸಲಾಯಿತು.

30 ದಿನಗಳ ಒಳಗೆ ಎಲ್ಲಾ ಪಾಲುದಾರರಿಂದ ಸಾರ್ವಜನಿಕ ಅಭಿಪ್ರಾಯವನ್ನು ಪಡೆಯಲು ಮತ್ತು ಅಫಿಡವಿಟ್ ಮೂಲಕ ಆಯೋಗಕ್ಕೆ ವಿವರಗಳನ್ನು ಸಲ್ಲಿಸಲು ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಅನುಮತಿ ನೀಡಿದೆ.

ಇಂಧನ ಹೊಂದಾಣಿಕೆ ಶುಲ್ಕಗಳನ್ನು ಸರಿಹೊಂದಿಸಲು ಸಾಮಾನ್ಯವಾಗಿ ವಿವಿಧ ಹಣಕಾಸು ತ್ರೈಮಾಸಿಕಗಳಲ್ಲಿ ಸುಂಕ ಪರಿಷ್ಕರಣೆಗಳನ್ನು ಮಾಡಲಾಗುತ್ತದೆ ಎಂದು ಇಂಧನ ಇಲಾಖೆಯ ತಜ್ಞರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ರೀತಿಯ ಪರಿಷ್ಕರಣೆ ಕೋರಿರುವುದು ಇದೇ ಮೊದಲು, ಏಕೆಂದರೆ, ಸರ್ಕಾರಕ್ಕೆ ಬಾಕಿ ಹಣವನ್ನು ತೆರವುಗೊಳಿಸಲು ಕಷ್ಟವರವಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಖ್ಯಾತ ಇಂಧನ ತಜ್ಞ ಎಂ.ಜಿ. ಪ್ರಭಾಕರ್ ಅವರು ಮಾತನಾಡಿ, ಕಾನೂನು ಎಸ್ಕಾಂಗಳು ಅಂತಹ ತಿದ್ದುಪಡಿಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರವು IP ಸೆಟ್‌ಗಳಿಗೆ ನೀಡಿರುವ ಸಬ್ಸಿಡಿ ಹೆಚ್ಚಾಗಿದೆ, ಇದನ್ನು ESCOM ಗಳು ನಿರ್ವಹಿಸಲು ಕಷ್ಟಕರವಾಗಿದೆ. ಹೀಗಾಗಿ ಆದಾಯವನ್ನು ಹೊಂದಿಸಲು, ESCOM ಗಳು ಗ್ರಾಹಕರ ಮೇಲೆ ಹೆಚ್ಚಿನ ಸುಂಕ ಹೇರಲು ಬಯಸುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಗೂ ಕೂಡ ಕ್ರಮೇಣ ಅದೇ ರೀತಿ ಮಾಡುವ ಸಾಧ್ಯತೆಗಳಿವೆ. 2025-26 ನೇ ಸಾಲಿಗೆ IP ಸೆಟ್‌ಗಳ ಅನುಮೋದಿತ ಮಾರಾಟವು 24868.10 ಮಿಲಿಯನ್ ಯೂನಿಟ್‌ಗಳಾಗಿದ್ದು, ಅವುಗಳಿಗೆ ಪ್ರತಿ ಯೂನಿಟ್‌ಗೆ 8.30 ರೂ.ಗಳಿಗೆ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುಂಕವನ್ನು KERC ನಿಗದಿಪಡಿಸಿದೆ. ಆದರೆ ಕರ್ನಾಟಕ ವಿದ್ಯುತ್ ಕಾಯ್ದೆ 2003, ವಿಭಾಗ 63, ಉಪ-ವಿಭಾಗ -4 ರ ಪ್ರಕಾರ, ಯಾವುದೇ ಸುಂಕ ಅಥವಾ ಯಾವುದೇ ಸುಂಕದ ಭಾಗವನ್ನು ಸಾಮಾನ್ಯವಾಗಿ ಯಾವುದೇ ಹಣಕಾಸು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ವಿವಿಧ ಕೈಗಾರಿಕಾ ಸಂಸ್ಥೆಗಳ ಸದಸ್ಯರು KERC ಮತ್ತು ESCOM ಗಳ ಮುಂದೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ನಿಗೂಢ ಶಬ್ಧ: ಭೂಮಿ ಕಂಪಿಸಿದ ಅನುಭವ, ಬೆಚ್ಚಿಬಿದ್ದ ಜನತೆ

ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಡಿ.24ರಂದು ವಿಶೇಷ ರೈಲು ಸೇವೆ, ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಮೋದಿ-ಅಮಿತ್ ಶಾರನ್ನೇ ಧೈರ್ಯವಾಗಿ ಎದುರಿಸಿ ಜೈಲಿಗೆ ಹೋಗಿ ಬಂದಿದ್ದೇನೆ; ನನ್ನನ್ನು ಹೆದರಿಸಲು ಬರಬೇಡಿ: ಡಿಕೆ ಶಿವಕುಮಾರ್

GOAT India Tour: ಹೈದರಾಬಾದಿನಲ್ಲಿ 'ಮೆಸ್ಸಿ' ಮೇನಿಯಾ; ಸಿಎಂ ರೇವಂತ್ ರೆಡ್ಡಿ ಜೊತೆಗೆ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದ ಫುಟ್ಬಾಲ್ ದಂತಕಥೆ!

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ: ಹಳದಿ ಲೋಹದ ಸುಲಭ ಖರೀದಿಗಾಗಿ ಮಧ್ಯಮ ವರ್ಗದವರಿಗೆ ಇಲ್ಲಿದೆ ಟಿಪ್ಸ್!

SCROLL FOR NEXT